ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಲ್ಲಿ ಮೈತ್ರಿ; ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. "ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರೆಸಲು ನಮ್ಮ ಸಹಮತವಿದೆ" ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದ್ದಾರೆ.

ಅಕ್ಟೋಬರ್ 1ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಬಿಬಿಎಂಪಿಯಲ್ಲಿ ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ಮೇಯರ್ ಪಟ್ಟ ಕಾಂಗ್ರೆಸ್, ಉಪ ಮೇಯರ್ ಪಟ್ಟ ಜೆಡಿಎಸ್‌ ಹಂಚಿಕೊಂಡಿವೆ.

ಬಿಬಿಎಂಪಿ ಚುನಾವಣೆ; ಮೇಯರ್ ಪಟ್ಟದ ಹೊಸ್ತಿಲಲ್ಲಿ ಬಿಜೆಪಿಬಿಬಿಎಂಪಿ ಚುನಾವಣೆ; ಮೇಯರ್ ಪಟ್ಟದ ಹೊಸ್ತಿಲಲ್ಲಿ ಬಿಜೆಪಿ

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರೆಯುವುದೇ? ಎಂಬ ಪ್ರಶ್ನೆ ಎದ್ದಿತ್ತು. ಉಭಯ ಪಕ್ಷಗಳ ನಾಯಕರ ನಡುವೆ ಆರೋಪ ಪ್ರತ್ಯಾರೋಪ ಬಹಿರಂಗವಾಗಿ ನಡೆದಿತ್ತು.

ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆ ಮುಂದೂಡಿಕೆಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆ ಮುಂದೂಡಿಕೆ

ಬಿಬಿಎಂಪಿಯ ಅಧಿಕಾರವನ್ನು ಪಡೆಯಲು ಈ ಬಾರಿ ಬಿಜೆಪಿ ಸಿದ್ಧವಾಗಿ ಕುಳಿತಿದೆ. ಬಿಜೆಪಿ ಬಳಿ 125 ಸದಸ್ಯ ಬಲವಿದೆ. ಮೇಯರ್ ಪಟ್ಟಕ್ಕೇರಲು 129 ಮತಗಳ ಅಗತ್ಯವಿದೆ. ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವ ನಿರೀಕ್ಷೆ ಇದ್ದು, ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರಲ್ಲಿ ಮತ್ತೆ ಆಪರೇಷನ್ ಕಮಲ; ನಾಲ್ವರ ಫೋನ್ ಆಫ್ಬೆಂಗಳೂರಲ್ಲಿ ಮತ್ತೆ ಆಪರೇಷನ್ ಕಮಲ; ನಾಲ್ವರ ಫೋನ್ ಆಫ್

ದೇವೇಗೌಡರು ಹೇಳಿದ್ದೇನು?

ದೇವೇಗೌಡರು ಹೇಳಿದ್ದೇನು?

ಬಿಬಿಎಂಪಿ ಮೇಯರ್ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವೇಗೌಡರು, "ಮೇಯರ್ ಚುನಾವಣೆಯಲ್ಲಿ ಮೈತ್ರಿಗೆ ನಮ್ಮ ಸಹಮತವಿದೆ. ಈ ಕುರಿತು ಕುಮಾರಸ್ವಾಮಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮೈತ್ರಿ ಮುಂದುವರೆಸಲು ನಾವು ಸಿದ್ಧರಾಗಿದ್ದೇವೆ" ಎಂದರು.

2015ರಿಂದ ಮೈತ್ರಿ

2015ರಿಂದ ಮೈತ್ರಿ

2015ರ ಬಿಬಿಎಂಪಿ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಪಾಲಿಕೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಹಂಚಿಕೊಳ್ಳುತ್ತಿವೆ. ನಾಲ್ಕು ವರ್ಷ ಮೈತ್ರಿ ಮುಂದುವರೆದಿದ್ದು, ಈ ಬಾರಿ ಕೊನೆಯ ವರ್ಷವಾಗಿದೆ. 2020ರಲ್ಲಿ ಪಾಲಿಕೆ ಚುನಾವಣೆ ನಡೆಯಲಿದೆ.

ಮೇಯರ್ ಪಟ್ಟದ ಮೇಲೆ ಬಿಜೆಪಿ ಕಣ್ಣು

ಮೇಯರ್ ಪಟ್ಟದ ಮೇಲೆ ಬಿಜೆಪಿ ಕಣ್ಣು

ಈ ಬಾರಿ ಬಿಬಿಎಂಪಿ ಮೇಯರ್ ಪಟ್ಟದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬೆಂಗಳೂರಿನಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ಪಕ್ಷದ ನಾಯಕರು ಪಣತೊಟ್ಟಿದ್ದಾರೆ. ಆದ್ದರಿದ, ಮೈತ್ರಿಕೂಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಮ್ಯಾಜಿಕ್ ನಂಬರ್ 129

ಮ್ಯಾಜಿಕ್ ನಂಬರ್ 129

ಮೇಯರ್ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಮ್ಯಾಜಿಕ್ ನಂಬರ್ 129. ಬಿಜೆಪಿ 125, ಕಾಂಗ್ರೆಸ್ 104, ಜೆಡಿಎಸ್ 21 ಸದಸ್ಯ ಬಲ ಇದೆ. 7 ಪಕ್ಷೇತರ ಸದಸ್ಯರಿದ್ದು, ಇವರ ಬೆಂಬಲ ಪಡೆದವರು ಮೇಯರ್ ಪಟ್ಟವನ್ನು ಪಡೆಯಬಹುದಾಗಿದೆ.

English summary
JD(S) supremo H.D.Deve Gowda said that party alliance with Congress in Bruhat Bengaluru Mahanagara Palike continue for this year. Mayor and Deputy mayor election scheduled on October 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X