ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಕೆ ಪಾಟೀಲ್‌ಗೆ ಸಿಕ್ಕಿದ್ದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಹಿರಿಯ ಶಾಸಕ ಎಚ್‌ಕೆ ಪಾಟೀಲ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗದೆ ಮತ್ತೆ ನಿರಾಶೆ ಉಂಟಾಗಿದೆ. ಅವರ ಅಸಮಾಧಾನವನ್ನು ತಣಿಸುವ ಸಲುವಾಗಿ ಹೈಕಮಾಂಡ್ ಅವರಿಗೆ ಬೇರೆ ಹೊಣೆಗಾರಿಕೆ ನೀಡಿದೆ.

ಗದಗದ ಶಾಸಕರಾದ ಎಚ್‌ಕೆ ಪಾಟೀಲ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಹೊಸದಾಗಿ ಸಚಿವ ಸಂಪುಟ ಸೇರುತ್ತಿರುವ ಶಾಸಕರ ಪಟ್ಟಿಹೊಸದಾಗಿ ಸಚಿವ ಸಂಪುಟ ಸೇರುತ್ತಿರುವ ಶಾಸಕರ ಪಟ್ಟಿ

ತಮಗೆ ಸಂಪುಟದಲ್ಲಿ ಸ್ಥಾನ ನೀಡದೆ ಇರುವುದರ ಬಗ್ಗೆ ಎಚ್‌ಕೆ ಪಾಟೀಲ್ ಅವರು ಪಕ್ಷದ ವಿರುದ್ಧ ಅತೃಪ್ತಿ ವ್ಯಕ್ತಪಡಿಸುವ ಸಾಧ್ಯತೆ ಇದ್ದಿದ್ದರಿಂದ ಅವರಿಗೆ ಈ ಹೊಣೆಗಾರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Congress high command appointed hk patil kpcc publicity committee chairman

ಎಚ್ ಕೆ ಪಾಟೀಲ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದರು.

ರಾಮಲಿಂಗಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ, ಸೌಮ್ಯ ರೆಡ್ಡಿ ಅಸಮಾಧಾನ ರಾಮಲಿಂಗಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ, ಸೌಮ್ಯ ರೆಡ್ಡಿ ಅಸಮಾಧಾನ

ಅವರ ಆದೇಶದಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಸೂಚನೆ ಹೊರಡಿಸಿದ್ದಾರೆ.

ಜಲಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ಅವರು ಇದುವರೆಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನಿಭಾಯಿಸುತ್ತಿದ್ದರು.

ನಾನು ಕಾಂಗ್ರೆಸ್ ಗೆ ಸೇರಲು ಸಿದ್ಧನಿದ್ದೆ ಎಂದ ಸಚಿವ ಶಂಕರ್ನಾನು ಕಾಂಗ್ರೆಸ್ ಗೆ ಸೇರಲು ಸಿದ್ಧನಿದ್ದೆ ಎಂದ ಸಚಿವ ಶಂಕರ್

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಎಚ್‌ಕೆ ಪಾಟೀಲ್ ಕಾರ್ಯನಿರ್ವಹಿಸಿದ್ದರು.

English summary
Congress President Rahul Gandhi on Friday named HK Patil for KPCC Publicity Committee Chairman post. Minister DK Shivakumar was handling that responsiblity till date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X