ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ವಾರದಲ್ಲೇ KPCC ಸಾರಥಿಗೆ ಪಟ್ಟ: ಕಾಂಗ್ರೆಸ್ ಲ್ಲಿ ಒಗ್ಗಟ್ಟಿನ ಮಂತ್ರ

|
Google Oneindia Kannada News

ಬೆಂಗಳೂರು, ಜನವರಿ.16: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಅಧ್ಯಕ್ಷರು ಯಾರು ಎಂಬುದು ಈ ವಾರದಲ್ಲೇ ಅಧಿಕೃತವಾಗಿ ಘೋಷಣೆ ಆಗಲಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಸೂಕ್ತ ಎಂಬ ಬಗ್ಗೆ ಹೈಕಮಾಂಡ್ ನಾಯಕರಿಗೆ ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಸಡನ್ U-Turn: ಡಿಕೆಶಿಗೆ ಸಿಕ್ಕಿತಾ ಕೆಪಿಸಿಸಿ ಪಟ್ಟ 'ಕೈ' ತಪ್ಪುವ ಸುಳಿವು?ಸಡನ್ U-Turn: ಡಿಕೆಶಿಗೆ ಸಿಕ್ಕಿತಾ ಕೆಪಿಸಿಸಿ ಪಟ್ಟ 'ಕೈ' ತಪ್ಪುವ ಸುಳಿವು?

ಇನ್ನು, ಕಾಂಗ್ರೆಸ್ ನಲ್ಲಿ ಯಾರಿಗಾದರೂ ಕೆಪಿಸಿಸಿ ಅಧ್ಯಕ್ಷರ ಸ್ಥಾನವನ್ನು ನೀಡದರೂ ತಮ್ಮ ಅಭ್ಯಂತರ ಏನಿಲ್ಲ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಅಲ್ಲದೇ, ಹೈಕಮಾಂಡ್ ನಾಯಕರು ಈ ವಾರದಲ್ಲೇ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

Congress High-Command Announced The KPCC President On This Week

ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯ ಸಹಜ:

ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಯಾರಲ್ಲೂ ಅಸಮಾಧಾನವಿಲ್ಲ. ಇನ್ನು, ಪಕ್ಷ ಎಂದ ಮೇಲೆ ನಾಯಕರ ನಡುವೆ ಭಿನ್ನಾಭಿಪ್ರಾಯ ಇರುವುದೆಲ್ಲ ಸರ್ವೇ ಸಾಮಾನ್ಯ. ಹೈಕಮಾಂಡ್ ನಾಯಕರು ಯಾರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರೂ ಸರಿ. ನಾವೆಲ್ಲ ಅವರ ಜೊತೆಗೆ ಸೇರಿಕೊಂಡು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

English summary
Congress High-Command Announced The KPCC President On This Week. Ex-Central Minister K.H. Muniyappa Says In Bangalore KPCC Office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X