ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಬಲ ಅಭ್ಯರ್ಥಿಯೇ ಇಲ್ಲವೆಂದು ಬೀಗುತ್ತಿದ್ದ ಸದಾನಂದ ಗೌಡ್ರಿಗೆ ಕಾಂಗ್ರೆಸ್ ಕೊಟ್ಟ ಚಮಕ್

|
Google Oneindia Kannada News

Recommended Video

Lok Sabha Election 2019:ಪ್ರಬಲ ಅಭ್ಯರ್ಥಿಯೇ ಇಲ್ಲವೆಂದು ಬೀಗುತ್ತಿದ್ದ ಸದಾನಂದ ಗೌಡ್ರಿಗೆ ಕಾಂಗ್ರೆಸ್ ಕೊಟ್ಟ ಚಮಕ್

ನಾನು ದೇವರಿಗೆ ಪೂಜೆ ಮಾಡಿ, ಒಂದು ರೌಂಡ್ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ, ಮತದಾರರನ್ನು ಸಂಪರ್ಕಿಸಿ, ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇನೆ, ದುರಂತವೆಂದರೆ, ನಮ್ಮ ವಿರೋಧಿ ಪಾಳಯದ ಅಭ್ಯರ್ಥಿ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಸದಾನಂದ ಗೌಡ್ರು ವ್ಯಂಗ್ಯವಾಡಿದ್ದರು.

ಸೋಮವಾರ (ಮಾ 25) ಬೆಂಗಳೂರು ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಾಲಯದಲ್ಲಿ, ಕುಟುಂಬ ಸಮೇತ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದ ಸದಾ ಹಸನ್ಮುಖಿ ಸದಾನಂದ ಗೌಡ್ರು, ಎದುರಾಳಿ ಪ್ರಬಲವಿಲ್ಲದಿದ್ದರೆ ಆಟಕ್ಕೆ ಮಜಾ ಬರುವುದಿಲ್ಲ ಎಂದಿದ್ದರು.

ಬೆಂಗಳೂರಿನ 2 ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕಲು ಜೆಡಿಎಸ್, ಕಾಂಗ್ರೆಸ್ ಪರದಾಟಬೆಂಗಳೂರಿನ 2 ಕ್ಷೇತ್ರಗಳಿಗೆ ಅಭ್ಯರ್ಥಿ ಹುಡುಕಲು ಜೆಡಿಎಸ್, ಕಾಂಗ್ರೆಸ್ ಪರದಾಟ

ಈಗ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಪ್ರಬಲ ಎದುರಾಳಿ ಬಯಸಿದ್ದ ಸದಾನಂದ ಗೌಡ್ರಿಗೆ, ಅತ್ಯುತ್ತಮ ಎನ್ನಬಹುದಾದ ಅಭ್ಯರ್ಥಿಯನ್ನು ಹಾಕಿ, ಭರ್ಜರಿ ಚಮಕ್ ನೀಡುತ್ತಾ ಟ್ವೆಂಟಿ 20 ಮ್ಯಾಚ್ ಆಡಲು ಹೊರಟಿದೆ.

ಅಭ್ಯರ್ಥಿಗಳ ಕೊರತೆ ಎದುರಾದಾಗ, ಹೈಕಮಾಂಡ್ ನಿರ್ದೇಶನವನ್ನು ಪಾಲಿಸುವ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ, ಮಿತಭಾಷಿ ಕೃಷ್ಣ ಭೈರೇಗೌಡ್ರಿಗೆ, ಹಿಂದೆಯೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವವಿದೆ. ಹಾಗಾಗಿಯೇ, ಬೆಂಗಳೂರು ಉತ್ತರ ಸದಾನಂದ ಗೌಡ್ರಿಗೆ ಸುಲಭ ತುತ್ತಲ್ಲ.

ಮುದ್ದಹನುಮೇಗೌಡ್ರು 'ಬಂಡಾಯ' ನಾಮಪತ್ರವೇನೋ ಸಲ್ಲಿಸಿದ್ರು, ಆದ್ರೆಮುದ್ದಹನುಮೇಗೌಡ್ರು 'ಬಂಡಾಯ' ನಾಮಪತ್ರವೇನೋ ಸಲ್ಲಿಸಿದ್ರು, ಆದ್ರೆ

ದೇವೇಗೌಡರಿಗೆ ಇದ್ದಕ್ಕಿದ್ದಂತೆಯೇ ಈ ಕ್ಷೇತ್ರ ಸೇಫ್ ಅಲ್ಲ ಅನಿಸಲಾರಂಭಿಸಿತು

ದೇವೇಗೌಡರಿಗೆ ಇದ್ದಕ್ಕಿದ್ದಂತೆಯೇ ಈ ಕ್ಷೇತ್ರ ಸೇಫ್ ಅಲ್ಲ ಅನಿಸಲಾರಂಭಿಸಿತು

ಬೆಂಗಳೂರು ಉತ್ತರ ಕ್ಷೇತ್ರ ಬೇಕೇ ಬೇಕು ಎಂದು ಹಠ ಹಿಡಿದಿದ್ದ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಇದ್ದಕ್ಕಿದ್ದಂತೆಯೇ ಈ ಕ್ಷೇತ್ರ ಸೇಫ್ ಅಲ್ಲ ಅನಿಸಲಾರಂಭಿಸಿತು. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಹಾಗೇ, ಇಲ್ಲೂ ಕಾಂಗ್ರೆಸ್ ನಾಯಕನನ್ನು ಆಯ್ಕೆಮಾಡಿ, ಜೆಡಿಎಸ್ ಟಿಕೆಟಿನಿಂದ ಕಣಕ್ಕಿಳಿಸುವ ಆಯ್ಕೆಯಿದ್ದರೂ, ಗೌಡ್ರು ಅದ್ಯಾಕೋ ಹಠ ಹಿಡಿದಿದ್ದ ಕ್ಷೇತ್ರವನ್ನು ಕಾಂಗ್ರೆಸ್ ಮಡಿಲಿಗೆ ರಾತ್ರೋರಾತ್ರಿ ಅರ್ಪಿಸಿ, ತುಮಕೂರಿನಲ್ಲಿ ನಾಮಪತ್ರ ಸಲ್ಲಿಸಿಬಿಟ್ಟರು.

ಕೃಷ್ಣ ಭೈರೇಗೌಡರ ಮನೆಯಲ್ಲಿ ಸಭೆ ಸೇರಲಾಯಿತು

ಕೃಷ್ಣ ಭೈರೇಗೌಡರ ಮನೆಯಲ್ಲಿ ಸಭೆ ಸೇರಲಾಯಿತು

ಕಾಂಗ್ರೆಸ್ಸಿನಲ್ಲೂ ಅಂತಹ ಉತ್ಸಾಹ ಈ ಕ್ಷೇತ್ರದ ಮೇಲೆ ಯಾರಿಗೂ ಇಲ್ಲದಿದ್ದರೂ, ಬೇರೆ ದಾರಿಯಿಲ್ಲದೇ ಮತ್ತೆ ಕೃಷ್ಣ ಭೈರೇಗೌಡರ ಮನೆಯಲ್ಲಿ ಸಭೆ ಸೇರಲಾಯಿತು. ನೀವೇ ಬನ್ನಿ ದೇವೇಗೌಡ್ರೇ, ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಆದರೂ, ದೊಡ್ಡಗೌಡ್ರು ಮನಸ್ಸು ಮಾಡಲಿಲ್ಲ.. ಮತ್ತೆ ಕೃಷ್ಣ ಭೈರೇಗೌಡರ ಮನೆಯಂಗಣದಲ್ಲಿ ಬಿತ್ತು ಬಾಲ್..

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕೃಷ್ಣ ಬೈರೇಗೌಡ ಕಣಕ್ಕೆಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕೃಷ್ಣ ಬೈರೇಗೌಡ ಕಣಕ್ಕೆ

ನಾನು ಸಿದ್ದನಾಗಿಲ್ಲ ಎಂದು ಹಿಂದೆಯೇ ಕೃಷ್ಣ ಭೈರೇಗೌಡ್ರು ಹೇಳಿದ್ದ

ನಾನು ಸಿದ್ದನಾಗಿಲ್ಲ ಎಂದು ಹಿಂದೆಯೇ ಕೃಷ್ಣ ಭೈರೇಗೌಡ್ರು ಹೇಳಿದ್ದರೂ, ಅಭ್ಯರ್ಥಿ ಕೊರತ ಕಾಡುತ್ತಿರುವುದರಿಂದ ರಾಹುಲ್ ಗಾಂಧಿ ಕೇಳಬೇಕಲ್ಲಾ.. ನೀವೇ ನಮ್ಮ ಕ್ಯಾಂಡಿಡೇಟ್ ಎಂದು ಘೋಷಿಸಿದರು. ಬಿಫಾರಂ ಕೂಡಾ ಸಿದ್ದವಾಯಿತು. ಒಲ್ಲದ ಮನಸ್ಸಿನಿಂದ ಕೃಷ್ಣ ಭೈರೇಗೌಡ್ರು ಒಪ್ಪಿಕೊಳ್ಳಬೇಕಾಯಿತು. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ (ಮಾ 26) ಕೃಷ್ಣ ಭೈರೇಗೌಡ್ರು ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಎದುರಾಳಿ ಪ್ರಭಲನಾಗಿರಬೇಕೆಂದು ಬಯಸಿದ್ದ ಸದಾನಂದ ಗೌಡ್ರಿಗೆ, ಉತ್ತಮ ಅಭ್ಯರ್ಥಿ

ಎದುರಾಳಿ ಪ್ರಭಲನಾಗಿರಬೇಕೆಂದು ಬಯಸಿದ್ದ ಸದಾನಂದ ಗೌಡ್ರಿಗೆ, ಉತ್ತಮ ಅಭ್ಯರ್ಥಿ

ಅಲ್ಲಿಗೆ ಜೆಡಿಎಸ್-ಕಾಂಗ್ರೆಸ್ ಮಹಾಮೈತ್ರಿಯ ಸೀಟು ಹೊಂದಾಣಿಕೆಯ ಬಹುದೊಡ್ಡ ಕಸರತ್ತು ಮುಗಿದಂತಾಯಿತು. ಬೆಂಗಳೂರು ಉತ್ತರದಲ್ಲಿ ಗೌಡ್ರು ವರ್ಸಸ್ ಗೌಡ್ರು. ಈ ಹಿಂದೆ, ಬೆಂಗಳೂರು ದಕ್ಷಿಣದಲ್ಲಿ ದಿವಂಗತ ಅನಂತ್ ಕುಮಾರ್ ವಿರುದ್ದ ಸ್ಪ್ರರ್ಧಿಸಿದ್ದ ಕೃಷ್ಣ ಭೈರೇಗೌಡ್ರು ಉತ್ತಮ ಪೈಪೋಟಿಯನ್ನೇ ನೀಡಿದ್ದರು. ಎದುರಾಳಿ ಪ್ರಬಲನಾಗಿರಬೇಕೆಂದು ಬಯಸಿದ್ದ ಸದಾನಂದ ಗೌಡ್ರಿಗೆ, ಕಾಂಗ್ರೆಸ್ ಉತ್ತಮ ಅಭ್ಯರ್ಥಿಯನ್ನೇ ಕೊನೆಗೂ ಕಣಕ್ಕಿಳಿಸಿದೆ.

ಬೆಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಸದಾನಂದ ಗೌಡರ ವ್ಯಕ್ತಿಚಿತ್ರಬೆಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಸದಾನಂದ ಗೌಡರ ವ್ಯಕ್ತಿಚಿತ್ರ

ಬೆಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರ

ಬೆಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರ

ಈಗಿನ ಪರಿಸ್ಥಿತಿ ಕಳೆದ ಚುನಾವಣೆಯಂತಿಲ್ಲ. ಬೆಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರುವುದು ಜಸ್ಟ್ ಒನ್. ಮಿಕ್ಕೆಲ್ಲಾ ಜೆಡಿಎಸ್-ಕಾಂಗ್ರೆಸ್ಸಿನದ್ದು. ಆದರೆ, ವಿಧಾನಸಭಾ ಚುನಾವಣೆಯೇ ಬೇರೆ.. ಲೋಕಸಭಾ ಚುನಾವಣೆಯೇ ಬೇರೆ. ಯಾಕೆಂದರೆ, ಮೋದಿ ಮತ್ತು ರಾಹುಲ್ ವಿಚಾರವೂ ಇಲ್ಲಿ ಪ್ರಸ್ತುತ. ಹಾಗಾಗಿ, ಬೆಂಗಳೂರು ಉತ್ತರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಏರ್ಪಡಬಹುದು.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?

English summary
Congress finalized Krishna Byregowda from Bengaluru North a day before of last date of filing nomination. Stiff fight with BJPs senior leader Sadananda Gowda expected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X