ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಕ್ಷೇತ್ರಗಳಲ್ಲಿ ಇವಿಎಂ ಬದಲು ಮತಪತ್ರ ಬಳಸಿ ಕಾಂಗ್ರೆಸ್ ಆಗ್ರಹ

|
Google Oneindia Kannada News

ಬೆಂಗಳೂರು, ನವೆಂಬರ್ 20: ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಇವಿಎಂ ಬದಲು ಮತಪತ್ರ ಬಳಸಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಹೇಳಿದ್ದಾರೆ.

ಮತಪತ್ರ ತಯಾರಿಗೆ ಸಾಕಷ್ಟು ಸಮಯಾವಕಾಶವಿದ್ದು ಮತಪೆಟ್ಟಿಗೆ ಮೂಲಕ ಈ ಬಾರಿಯ ಫಲಿತಾಂಶ ಬಂದಲ್ಲಿ ಇವಿಎಂ ಬಗ್ಗೆ ಇರುವ ಅನುಮಾನಗಳು ಬಗೆಹರಿಯಲಿವೆ.

ನಾಮಪತ್ರ ಸಲ್ಲಿಕೆ ಮುಕ್ತಾಯ: ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿನಾಮಪತ್ರ ಸಲ್ಲಿಕೆ ಮುಕ್ತಾಯ: ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ

ಲೋಕಸಭಾ ಚುನಾವಣೆ ನಂತರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಾಗೂ ಇತ್ತೀಚೆಗೆ ವಾರದ ಹಿಂದೆ ಬಂದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಹಾಗಾಗಿ ಉಪಚುನಾವಣೆಗಳಲ್ಲಿ ಜನತೆ ಕಾಂಗ್ರೆಸ್ ಬೆಂಬಲಿಸಲು ತೀರ್ಮಾನಿಸಿದ್ದು ಕೇಂದ್ರ ಸರ್ಕಾರ ಚುನಾವಣಾ ಆಯೋಗ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

Congress demand use of ballot papers instead of EVM in by Elections

ಬಿಜೆಪಿ ಸಚಿವರುಗಳಾದ ಈಶ್ವರಪ್ಪ ಮುಸ್ಲಿಂ ಮತಗಳ ಅವಶ್ಯಕತೆ ಇಲ್ಲವೆನ್ನುತ್ತಾರೆ, ಮಾಧುಸ್ವಾಮಿ ಕುರುಬರ ವಿರುದ್ಧ ಮಾತಾಡುತ್ತಾರೆ, ಅನಂತಕುಮಾರ ಹೆಗಡೆ ದಲಿತರು ಬೇಕಿಲ್ಲವೆನ್ನುತ್ತಾರೆ ಇನ್ನೂ ಯಡಿಯೂರಪ್ಪ ಒಕ್ಕಲಿಗರನ್ನು ಸೇರುತ್ತಿಲ್ಲ ಹೀಗಿರುವಾಗ ಇವರು ಹೇಗೆ ಗೆಲ್ಲಲು ಸಾಧ್ಯ? ಮತಯಂತ್ರ ನಂಬಿ ಚುನಾವಣೆಗೆ ಹೋಗಿರುವ ಅನುಮಾನ ನಮಗಿದೆ.

ಚುನಾವಣಾ ಆಯೋಗವು ಇತ್ತೀಚೆಗೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು ನೀತಿ ಸಂಹಿತೆ ಜಾರಿಯಿಂದ ಹಿಡಿದು, ಅನರ್ಹರ ಪ್ರಕರಣದಲ್ಲಿ ಉಚ್ಚನ್ಯಾಯಾಲಯ ಕರೆಯದಿದ್ದರೂ ಮಧ್ಯಪ್ರವೇಶಿಸಿ ಒಂದು ಪಕ್ಷದ ಪರ ವರ್ತಿಸಿ ನಗೆಪಾಟಿಲಿಗೀಡಾಗಿದೆ.

ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್

ಅಮೇರಿಕಾ ಸೇರಿದಂತೆ ಅನೇಕ ಮುಂದುವರಿದ ದೇಶಗಳಲ್ಲಿ ಮತಪತ್ರ ಬಳಸಿ ಚುನಾವಣೆ ನಡೆಸುತ್ತಿದ್ದು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾದ ನಮ್ಮ ಚುನಾವಣಾ ಆಯೋಗ ಜನರಿಗೆ ಒಂದು ಬಾರಿ ಅನುಮಾನ ಮೂಡಿದಲ್ಲಿ ಗೊಂದಲ ನಿವಾರಿಸಿ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಿ ಪಾರದರ್ಶಕತೆಯಿಂದ ಜನರ ವಿಶ್ವಾಸಗಳಿಸಿಕೊಳ್ಳಲು ಈ ಬಾರಿ ಮತಪತ್ರ ಬಳಸಲು ಒತ್ತಾಯಿಸುತ್ತೇನೆ ಎಂದು ಹೇಳಿದರು.

English summary
Congress media panelist Pathresh Hiremanth has demanded use of ballot papers instead of EVM in by Elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X