ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ವಿ.ಎಸ್. ಉಗ್ರಪ್ಪ ರಾಜೀನಾಮೆ

|
Google Oneindia Kannada News

ಬೆಂಗಳೂರು, ನವೆಂಬರ್ 17: ಬಳ್ಳಾರಿ ಉಪ ಚುನಾವಣೆಯಲ್ಲಿ ಗೆದ್ದು, ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.

ವಿ.ಎಸ್.ಉಗ್ರಪ್ಪ ಸಂಸತ್ತಿಗೆ, ಪರಿಷತ್ ಸ್ಥಾನ ಪಡೆಯಲು ಪೈಪೋಟಿ! ವಿ.ಎಸ್.ಉಗ್ರಪ್ಪ ಸಂಸತ್ತಿಗೆ, ಪರಿಷತ್ ಸ್ಥಾನ ಪಡೆಯಲು ಪೈಪೋಟಿ!

ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಉಗ್ರಪ್ಪ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.

ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಸಂಕ್ಷಿಪ್ತ ಪರಿಚಯ ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಸಂಕ್ಷಿಪ್ತ ಪರಿಚಯ

ವಿ.ಎಸ್.ಉಗ್ರಪ್ಪ ಅವರು 2014ರ ಜೂನ್ 24ರಂದು ವಿಧಾನ ಪರಿಷತ್‌ ಸದಸ್ಯರಾಗಿ ನಾಮಕರಣಗೊಂಡಿದ್ದರು. 2018ರ ನವೆಂಬರ್‌ನಲ್ಲಿ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 628365 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ವಿರುದ್ಧ ಗೆಲುವು ಸಾಧಿಸಿದ್ದಾರೆ.

congress ballari mp vs ugrappa resigns legislative council membership

ಉಪ ಚುನಾವಣೆ ಫಲಿತಾಂಶ ಘೋಷಣೆಯಾದ 14 ದಿನದಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನವೆಂಬರ್ 6ರಂದು ಫಲಿತಾಂಶ ಹೊರಬಿದ್ದಿತ್ತು.

ಉಗ್ರಪ್ಪ ಅವರ ಹೆಸರನ್ನು ಹೀಗಾ ಅನುವಾದ ಮಾಡೋದು? ಫೇಸ್‌ಬುಕ್ ಅವಾಂತರಉಗ್ರಪ್ಪ ಅವರ ಹೆಸರನ್ನು ಹೀಗಾ ಅನುವಾದ ಮಾಡೋದು? ಫೇಸ್‌ಬುಕ್ ಅವಾಂತರ

ಅವರ ಅವಧಿ 2020ರ ಜೂನ್ 23ರ ತನಕ ಇದೆ. ಸುಮಾರು 19 ತಿಂಗಳು ಇರುವ ಪರಿಷತ್ ಸ್ಥಾನವನ್ನು ಪಡೆಯಲು ಕಾಂಗ್ರೆಸ್‌ನಲ್ಲಿ ಪೈಪೋಟಿ ಆರಂಭವಾಗಿದೆ.

ಮುಂದಿನ ವಾರದಲ್ಲಿ ಉಗ್ರಪ್ಪ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ.

English summary
Newly elected Congress MP from Ballari VS Ugrappa has resigned his place for legislative council. His resignation was accepted by Council chairman Basavaraj Horatti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X