ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಜನರ ಕಣ್ಣೀರು ಒರೆಸಬೇಕು, ತಾವೇ ಕಣ್ಣೀರಿಡಬಾರದು ಎಂದ ಶಾಸಕ

By Nayana
|
Google Oneindia Kannada News

Recommended Video

ಸಿಎಂ ಜನರ ಕಣ್ಣೀರು ಒರೆಸಬೇಕು, ತಾವೇ ಕಣ್ಣೀರಿಡಬಾರದು ಎಂದ ಶಾಸಕ | Oneindia kannada

ಬೆಂಗಳೂರು, ಜು.16: ಕಾಂಗ್ರೆಸ್‌ ಸರ್ಕಾರವು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಅಮೃತವನ್ನು ನೀಡಿದೆ ವಿಷವನ್ನಲ್ಲ, ಸಿಎಂ ಆದವರು ಜನರ ಕಣ್ಣೀರು ಒರೆಸಬೇಕು ತಾವೇ ಕಣ್ಣೀರು ಹಾಕಬಾರದು ಎಂದು ಕಾಂಗ್ರೆಸ್‌ ಶಾಸಕ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..

ಮುಖ್ಯಮಂತ್ರಿಯಾಗಿರುವರೆಗೂ ಕಾಂಗ್ರೆಸ್‌ನ್ನು ಸ್ಮರಿಸಬೇಕು, ಮುಖ್ಯಮಂತ್ರಿಯಾಗಿ ಅವರು ರಾಜ್ಯದ ಆರೂವರೆ ಕೋಟಿ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕೇ ಹೊರತು ಈ ರೀತಿ ಕಣ್ಣೀರು ಹಾಕಬಾರದು ಎಂದರು.

ನಾನು ಸುಖವಾಗಿಲ್ಲಮ ವಿಷನುಂಗಿ ವಿಷಕಂಠನಾಗಿದ್ದೇನೆ ಎಂದು ಹೇಳಿ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದಾರೆ, ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ ಅಮೃತವನ್ನು ನೀಡಿದೆ. ಮುಖ್ಯಮಂತ್ರಿ ಆಗಿರುವವರೆಗೂ ಕಾಂಗ್ರೆಸ್‌ನ್ನು ಅವರು ಸ್ಮರಿಸಿಕೊಳ್ಳಬೇಕು.

Cong MLA Sudhakar objects CM should be courageous!

37 ಶಾಸಕರು ಇರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ, 80 ಸ್ಥಾನ ಗೆದ್ದಿದ್ದರೂ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದ್ದೇವೆ, ಸಮ್ಮಿಶ್ರ ಸರ್ಕಾರದಲ್ಲಿ ಕಷ್ಟ-ಸುಖ ಇಬ್ಬರೂ ಅನುಭವಿಸೋಣ, ಕಾಂಗ್ರೆಸ್‌ ಪಕ್ಷವು ನಿಮ್ಮ ಜತೆ ಇದೆ, ಯಾವತ್ತೂ ಸಹ ಕಾಂಗ್ರೆಸ್‌ ನಿಮ್ಮ ಬೆಂಬಲಕ್ಕಿರುತ್ತದೆ. ರಾಜ್ಯ ಮುಖ್ಯಮಂತ್ರಿಯಾಗಿ ಅವರೇ ಅತ್ತರೆ ಹೇಗೆ ಎಂದು ಪ್ರಶ್ನಿಸಿದರು.

English summary
Chikballapur Cong MLA Dr Sudhakar has strongly objected as chief minister H.D.Kumaraswamy had breakdown in tears and also suggested he should ha e courage to face Anu consequences of the collation government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X