ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ಸಿನ ನಿಲೇಕಣಿಗೆ ಅನಂತಕುಮಾರ್ ತಿರುಗೇಟು

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 18- 'ಅನಂತ ಕುಮಾರ್ ವೀಕ್ ಸಿಚುಯೇಶನಿನಲ್ಲಿದ್ದಾರೆ. ಅವರೇಕೆ ಯಾವಾಗಲೂ ನರೇಂದ್ರ ಮೋದಿಯ ಹೆಸರನ್ನೇ ಜಪಿಸುತ್ತಿದ್ದಾರೆ? ಸ್ವಂತವಾಗಿ ತಮ್ಮ ಬಗ್ಗೆ ಮತ್ತು ತಾವು ಕೈಗೊಂಡಿದ್ದಾರೆನ್ನಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಸ್ತಾಪಿಸುವುದೇ ಇಲ್ಲ' ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರು ತಮ್ಮ ಪ್ರತಿಸ್ಪರ್ಧಿ ಅನಂತಕುಮಾರ್ ಬಗ್ಗೆ ನೀಡಿದ್ದ ಹೇಳಿಕೆಗೆ ಅನಂತಕುಮಾರ್ ತಿರುಗೇಟು ನೀಡಿದ್ದಾರೆ.

'ಕಾಂಗ್ರೆಸ್ಸಿನ high profile candidate ನಂದನ್ ನಿಲೇಕಣಿ ಅವರು ಪ್ರಚಾರದ ವೇಳೆ ಯಾಕೆ ಅಪ್ಪಿತಪ್ಪಿಯೂ ಸೋನಿಯಾ ಗಾಂಧಿ/ ರಾಹುಲ್ ಗಾಂಧಿ ಹೆಸರು ಎತ್ತುವುದಿಲ್ಲ. ಕೊನೆಗೆ ಕೈಯೆತ್ತಿ ಪಕ್ಷದ ಚಿಹ್ನೆಯನ್ನೂ ತೋರಿಸಲೂ ಅವರು ಹಿಂಜರಿಯುತ್ತಿದ್ದಾರೆ, ಏಕೆ?' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಮಾರ್ಮಿಕವಾಗಿ ನಿಲೇಕಣಿ ಅವರನ್ನು ವಿಚಾರಿಸಿಕೊಂಡಿದ್ದಾರೆ.

cong-candidate-nilekani-hesitates-to-take-names-of-his-party-ananth
'ಕಾಂಗ್ರೆಸ್ ಹತಾಶ ಸ್ಥಿತಿಯಲ್ಲಿದೆ. ಭ್ರಷ್ಟಾಚಾರದಿಂದಾಗಿ ಆ ಪಕ್ಷದ ನಾಯಕರ ಹೆಸರುಗಳನ್ನು ಹೇಳಿಕೊಂಡು ಮತದಾರರ ಮುಂದೆ ಹೋಗಲು ಆ ಪಕ್ಷದ ಅಭ್ಯರ್ಥಿಗಳು ಹಿಂಜರಿಯುತ್ತಿದ್ದಾರೆ. ನಿಲೇಕಣಿದೂ ಅದೇ ಸಮಸ್ಯೆ ಅನಿಸುತ್ತಿದೆ. ಅದು ವಾಸ್ತವ' ಎಂದು ಅನಂತಕುಮಾರ್ ಲೇವಡಿ ಮಾಡಿದ್ದಾರೆ.

'ಅದೇ ನಾನು ನನ್ನ ನಾಯಕರಾದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಪಕ್ಷದ ಹೆಸರು- ಕಮಲದ ಚಿಹ್ನೆ ಬಗ್ಗೆ ನಾನು ಹೆಮ್ಮೆಯಿಂದ ಹೇಳುತ್ತೇನೆ. ಪದೇ ಪದೇ ಅವರ ಹೆಸರುಗಳನ್ನು ಜಪಿಸುತ್ತೇನೆ. ಅದು ನನಗೆ ಗೌರವ ಕೊಡುತ್ತದೆ' ಎಂದು ಅನಂತಕುಮಾರ್ ಹೇಳಿದ್ದಾರೆ. (ಅನಂತಕುಮಾರ್ ದುರ್ಬಲ ಪರಿಸ್ಥಿತಿಯಲ್ಲಿದ್ದಾರೆ- ನಿಲೇಕಣಿ)

'ನಂದನ್ ನಿಲೇಕಣಿ ಅವರ 18 ದಿನಗಳ ಕ್ಷೇತ್ರದ ಪ್ರೀತಿ ಮತ್ತು 18 ವರ್ಷಗಳ ಕಾಲ ನನ್ನ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರು ಚೆನ್ನಾಗಿ ಬಲ್ಲರು. ಅದನ್ನು ಮತದಾನ ವೇಳೆ ಸಾಬೀತು ಮಾಡಲಿದ್ದಾರೆ' ಎಂದು ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೇಳಿದ್ದಾರೆ.

English summary
Lok Sabha Election 2014 - Bangalore South Congress candidate UIDAI ex chairman Nandan Nilekani's hesitates to take names of his party leaders says BJP candidate Ananth Kumar. At meet the press at Press Club of Bangalore UIDAI ex chairman Nandan Nilekani had said questioned Ananth why he all ways takes Modi's name and not his own works in the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X