ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೆರೆಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೊಂದಲ: ದಿನೇಶ್ ಗುಂಡೂರಾವ್

|
Google Oneindia Kannada News

ಬೆಂಗಳೂರು, ನವೆಂಬರ್ 11: ಒಟ್ಟು 15 ಕ್ಷೇತ್ರಗಳಿಗೆ ಉಪ ಚುನಾವಣೆ ಸನ್ನಿಹಿತವಾಗುತ್ತಿದ್ದು, ಇನ್ನೂ ಒಂದೆರೆಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೊಂದಲ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಯಾಗಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ. ಒಂದೆರೆಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೊಂದಲ ಇದೆ ಎಂದರು.

ಡಿಕೆ ಶಿವಕುಮಾರ್ ನಿವಾಸಕ್ಕೆ ರಾಜು ಕಾಗೆ, ಅಶೋಕ್ ಪೂಜಾರಿ ಭೇಟಿ ಡಿಕೆ ಶಿವಕುಮಾರ್ ನಿವಾಸಕ್ಕೆ ರಾಜು ಕಾಗೆ, ಅಶೋಕ್ ಪೂಜಾರಿ ಭೇಟಿ

ಅಂತಿಮವಾಗಿ ಹೈಕಮಾಂಡ್ ನಾಯಕರು ಪಟ್ಟಿ ಅಂತಿ ಮಾಡಲಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕೆಲವೊಂದು ವದಂತಿಗಳು ಕೇಳಿಬರುತ್ತಿದೆ. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಟೌನ್‌ಹಾಲ್ ಎದುರು ಕಾಂಗ್ರೆಸ್ ಪ್ರತಿಭಟನೆ

ಟೌನ್‌ಹಾಲ್ ಎದುರು ಕಾಂಗ್ರೆಸ್ ಪ್ರತಿಭಟನೆ

ಟೌನ್‌ಹಾಲ್ ಎದುರು ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಕೇಂದ್ರದಲ್ಲಿ ಸೂಕ್ತ ಆರ್ಥಿಕ ತಜ್ಞರಿಲ್ಲ, ಆರ್ಥಿಕ ನೀತಿಗಳು ಸರಿಯಾಗಿಲ್ಲ ಎಂದು ಹೇಳಿ ಈ ಅಂಶದ ಮೇಲೆ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದರು.

ಬಡವರ ಕಷ್ಟಕ್ಕೆ ಕೇಂದ್ರ ಯಾವತ್ತೂ ಭಾಗಿಯಾಗಿಲ್ಲ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಏನೆಂದರೆ ಏನೂ ಗೊತ್ತಿಲ್ಲ, ಆರ್ಥಿಕ ತಜ್ಞರ ಅಭಿಪ್ರಾಯ ಗಳನ್ಜು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ. ಕೇಂದ್ರದ ವಿರುದ್ದ ಕಾಂಗ್ರೆಸ್ ನಾಯಕರ ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ವಿ.ಎಸ್. ಉಗ್ರಪ್ಪ

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ವಿ.ಎಸ್. ಉಗ್ರಪ್ಪ

ದೇಶ ಕಂಡ ಅತ್ಯಂತ ದೊಡ್ಡ ಸುಳ್ಳುಗಾರ ಪ್ರಧಾನು ಮೋದಿ, ಸುಳ್ಳಿಗೆ ನೋಬೆಲ್ ಪ್ರೈಜ್ ಕೊಟ್ಟರೆ ಅದು ಮೋದಿಗೆ ಕೊಡಬಹುದು, ನಿಮ್ಮ ಯೋಗ್ಯತೆಗೆ ಎಲ್ಲಿಂದಲಾದರೂ ಕಪ್ಪು ಹಣ ವಾಪಸ್ ತಂದಿದ್ದೀರಾ?, ಗಾರ್ಮೆಂಟ್, ಮೋಟರ್ ವೆಹಿಕಲ್ ಸೇರಿ ಎಲ್ಲ ಇಂಡಸ್ಟ್ರಿಗಳು ಮುಚ್ಚುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ಉಪ ಚುನಾವಣೆ; ಬಿಜೆಪಿ ನಾಯಕರಿಂದ ಡಿ. ಕೆ. ಶಿವಕುಮಾರ್ ಭೇಟಿ!ಉಪ ಚುನಾವಣೆ; ಬಿಜೆಪಿ ನಾಯಕರಿಂದ ಡಿ. ಕೆ. ಶಿವಕುಮಾರ್ ಭೇಟಿ!

ನಿಮ್ಮ ನಾಟಕ ಹೆಚ್ಚು ದಿನ ನಡೆಯಲ್ಲ

ನಿಮ್ಮ ನಾಟಕ ಹೆಚ್ಚು ದಿನ ನಡೆಯಲ್ಲ

ಮೋದಿಯವರೇ ಬಹಳ ದಿನ ನಿಮ್ಮ ನಾಟಕ ನಡೆಯಲ್ಲ, ಒಂದು ಎರಡು ಬಾರಿ ಭಾವನಾತ್ಮಕ ವಿಚಾರದಲ್ಲಿ ಜನರನ್ನು ಸೆಳೆಯಬಹುದು, ಆದರೆ ಇದು ಬಹಳ ದಿನ ನಡೆಯೋದಿಲ್ಲ ಮಹಾರಾಷ್ಟ್ರ ದಲ್ಲಿ ಜನ 370 ರದ್ದತಿ ಬಗ್ಗೆ, ಪುಲ್ವಾಮಾ ಅಟ್ಯಾಕ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ-ಒಕ್ಕಲಿಗ ನಾಯಕರ ಸಭೆ

ಕೆಪಿಸಿಸಿ-ಒಕ್ಕಲಿಗ ನಾಯಕರ ಸಭೆ

ಹಿರಿಯ ಕಾಂಗ್ರೆಸ್ ನಾಯಕರ ಸಭೆ ಬಳಿಕ ಮತ್ತೊಂದು ಸಭೆ ನಡೆಯಿತು. ಕಾಂಗ್ರೆಸ್ ಒಕ್ಕಲಿಗ ಹಿರಿಯ ನಾಯಕರ ಸಭೆ, ಡಿಕೆಶಿ, ಟಿ ಬಿ ಜಯಚಂದ್ರ , ಕೃಷ್ಣಭೈರೇಗೌಡ, ಎಂ ಕೃಷ್ಣಪ್ಪ, ಚೆಲುವರಾಯಸ್ವಾಮಿ ಸೇರಿ ಕೆಲ ಮುಖಂಡರು ಭಾಗಿ ಬೈ ಎಲೆಕ್ಸನ್ ನಲ್ಲಿ ಸಮುದಾಯದ ಪ್ರಾತಿನಿಧ್ಯ ಬಗ್ಗೆ ಚರ್ಚೆ ಪಕ್ಷದ ನಾಯಕತ್ವದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

English summary
KPCC president Dinesh Gundurao said there was confusion among the candidates in a few Constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X