ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಗೇರಿಯಲ್ಲಿ ಗ್ಯಾಂಗ್‌ರೇಪ್: ಕೆಲಸ ಹುಡುಕಿ ಹೋದ ಮಹಿಳೆ ಮೇಲೆ ದೌರ್ಜನ್ಯ

|
Google Oneindia Kannada News

ಬೆಂಗಳೂರು, ಜೂನ್ 11: ಜೀವನಕ್ಕಾಗಿ ಹುಟ್ಟಿದ ಊರು ಬಿಟ್ಟು ಬೆಂಗಳೂರು ಮಹಾನಗರಕ್ಕೆ ಬಂದಿದ್ದ ಜಾರ್ಖಂಡ್ ಮೂಲದ ಆದಿವಾಸಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಿರುವ ಘಟನೆ ಕೆಂಗೇರಿಯಲ್ಲಿ ನಡೆದಿದೆ. ಕೆಂಗೇರಿಯ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳಿಂದ ಗ್ಯಾಂಗ್ ರೇಪ್ ಆಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

Recommended Video

Kumaraswamy spoke about issues facing from Bengaluru Mysore highway | Oneindia Kannada

ಈ ಕುರಿತು ಎಫ್‌ ಐ ಆರ್ ಸಹ ದಾಖಲಾಗಿದ್ದು, ಸದ್ಯ ಆ ಮಹಿಳೆ ಇಬ್ಬರನ್ನು ರಕ್ಷಣೆ ಮಾಡಿ ಜಾರ್ಖಂಡ್‌ಗೆ ಕಳುಹಿಸಿಕೊಡಲಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಮಹಿಳೆಯರು ಕಂಗೇರಿಯ ಕಾರ್ಖಾನೆಯಲ್ಲಿ ಕೆಲಸ ಸೇರಿದ್ದರು. ಇವರಿಗೆ ಸಂತಾಲಿ ಭಾಷೆ ಬಿಟ್ಟು ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ.

ಅಕ್ಟೋಬರ್‌ನಲ್ಲಿ ಕೆಲಸಕ್ಕೆ ಹೋದ ಮಹಿಳೆಯರು

ಅಕ್ಟೋಬರ್‌ನಲ್ಲಿ ಕೆಲಸಕ್ಕೆ ಹೋದ ಮಹಿಳೆಯರು

ಕೆಂಗೇರಿ ಬಳಿಯಿರುವ ಕಾರ್ಖಾನೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಇಬ್ಬರು ಮಕ್ಕಳ ಜೊತೆ ಇಬ್ಬರು ಮಹಿಳೆಯರು ಕೆಲಸಕ್ಕೆ ಸೇರಿದರು. ದಿನಕ್ಕೆ 15 ಗಂಟೆಗಳ ಕಾಲ ದುಡಿಮೆ ಮಾಡಿಸಲಾಗುತ್ತಿತ್ತು. ತಿಂಗಳಿಗೆ 9000 ರೂಪಾಯಿ ನೀಡುವ ಭರವಸೆ ನೀಡಿದ್ದವರು ವಾರಕ್ಕೆ 200 ರೂಪಾಯಿ ಮಾತ್ರ ಕೊಟ್ಟು ಬಲವಂತವಾಗಿ ಇರಿಸಿಕೊಂಡಿದ್ದರು. ಇದರಿಂದ ತಪ್ಪಿಸಿಕೊಳ್ಳುವ ಯೋಚನೆ ಮಾಡಿದ ಇಬ್ಬರು ಮಹಿಳೆಯರು ಮೊದಲ ಸಲ ಜನವರಿಯಲ್ಲಿ ಅಲ್ಲಿಂದ ಎಸ್ಕೇಪ್ ಆದರು.

ಲಾಕ್‌ಡೌನ್: ಮನೆಗೆ ಬಂದಿದ್ದ ಮಗಳ ಮೇಲೆ ತಂದೆಯಿಂದ ಅತ್ಯಾಚಾರಲಾಕ್‌ಡೌನ್: ಮನೆಗೆ ಬಂದಿದ್ದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ

ಬಲವಂತವಾಗಿ ಎಳೆದುಕೊಂಡು ಹೋದರು

ಬಲವಂತವಾಗಿ ಎಳೆದುಕೊಂಡು ಹೋದರು

ಫ್ಯಾಕ್ಟರಿಯಿಂದ ತಪ್ಪಿಸಿಕೊಂಡು ಹೋದ ವಿಚಾರ ತಿಳಿದ ಕಾರ್ಖಾನೆಯ ಮೇಲ್ವಿಚಾರಕರು, ಮತ್ತೆ ಅವರನ್ನು ಹುಡುಕಿ ಬಲವಂತವಾಗಿ ಎಳೆದುಕೊಂಡು ಹೋದರು. ಅವರ ಬಳಿಯಿದ್ದ ಆಧಾರ್‌ ಕಾರ್ಡ್, ಪೋನ್‌ಗಳನ್ನು ಕಿತ್ತಿಕೊಂಡರು. ಅವರ ಮೇಲೆ ಹಲ್ಲೆ ಮಾಡಲಾಯಿತು. ಅತ್ಯಾಚಾರದ ಬೆದರಿಕೆ ಹಾಕಲಾಯಿತು ಎಂದು ಆ ಇಬ್ಬರು ಮಹಿಳೆಯರ ರಕ್ಷಣೆಗೆ ಸಹಾಯ ಮಾಡಿದ ಜಾರ್ಖಂಡ್ ಸಹವರ್ತಿ ಮುರ್ಮು ಹೇಳಿದ್ದಾರೆ.

ಫ್ಯಾಕ್ಟರಿಯಲ್ಲಿ ಅತ್ಯಾಚಾರ ಮಾಡಿದ್ರು

ಫ್ಯಾಕ್ಟರಿಯಲ್ಲಿ ಅತ್ಯಾಚಾರ ಮಾಡಿದ್ರು

ಕೆಲವು ದಿನಗಳ ನಂತರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಇಬ್ಬರು ವ್ಯಕ್ತಿಗಳು ಒಬ್ಬ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿದರು ಎಂದು ಆಘಾತಕಾರಿ ವಿಷಯವನ್ನು ಸಹ ಮುರ್ಮು ತಿಳಿಸಿದ್ದಾರೆ. ಬಳಿಕ ಮಾರ್ಚ್ ತಿಂಗಳಲ್ಲಿ ಆ ಫ್ಯಾಕ್ಟರಿಯಿಂದ ಮಹಿಳೆಯರಿಬ್ಬರು ತಪ್ಪಿಸಿಕೊಂಡು ಬಂದ ಕುಂಬಲಗೂಡು ಕಾಡಿನಲ್ಲಿ ಅವಿತುಕೊಂಡರು. ಊಟಕ್ಕಾಗಿ ಗ್ರಾಮಸ್ಥರ ಬಳಿ ಅಂಗಲಾಚಿದರು. ಈ ನಡುವೆ ಗುತ್ತಿಗೆದಾರರೊಬ್ಬರು ಅವರಿಬ್ಬರಿಗೂ ಆಶ್ರಯ ತಮ್ಮದೇ ಒಡೆತನ ಕಟ್ಟಡದಲ್ಲಿ ಉಳಿಯಲು ಜಾಗ ಕೊಟ್ಟರು.

ಪೊಲೀಸರಿಗೆ ಮಾಹಿತಿ ನೀಡಿದ ಮಹಿಳೆಯರು

ಪೊಲೀಸರಿಗೆ ಮಾಹಿತಿ ನೀಡಿದ ಮಹಿಳೆಯರು

ಕೆಲವು ದಿನದ ನಂತರ ಆ ಗುತ್ತಿಗೆದಾರನು ಮಹಿಳೆಯೊಂದಿಗೆ ಲೈಂಗಿಕ ಸಂಬಂಧಕ್ಕಾಗಿ ಬೇಡಿಕೆಯಿಟ್ಟ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ನಂತರ ಈ ವಿಷಯವನ್ನು ಮುರ್ಮು ಅವರನ್ನು ಸಂಪರ್ಕಿಸಿ ಅವರ ಮೂಲಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ, ಪೊಲೀಸರು ಆ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಅತ್ಯಾಚಾರ ಕೇಸ್, ಗುತ್ತಿಗೆದಾರನ ವಿರುದ್ಧವೂ ದೂರು

ಅತ್ಯಾಚಾರ ಕೇಸ್, ಗುತ್ತಿಗೆದಾರನ ವಿರುದ್ಧವೂ ದೂರು

ಕೆಂಗೇರಿಯ ಫ್ಯಾಕ್ಟರಿಯಲ್ಲಿ ಅತ್ಯಾಚಾರ ಮಾಡಿದ ಇಬ್ಬರು ವ್ಯಕ್ತಿಗಳನ್ನು ಮಹಿಳೆಯರು ಗುರುತಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 376 ಡಿ ಅಡಿಯಲ್ಲಿ ಇಬ್ಬರು ಕಾರ್ಖಾನೆಯ ಕಾರ್ಮಿಕರ ವಿರುದ್ಧ ಮೇ 23 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಗುತ್ತಿಗೆದಾರನ ವಿರುದ್ಧವೂ ಪ್ರಕರಣ ದಾಖಲಾಗಿದೆ.

English summary
Women was gangraped by two men in the factory at Kengeri. FIR was filed on May 23 against two factory worker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X