ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾಯಾಲಯದಲ್ಲಿ ಸಭ್ಯ ಉಡುಪು ಧರಿಸುವುದು ಕಡ್ಡಾಯ: ಸುತ್ತೋಲೆ

|
Google Oneindia Kannada News

ಬೆಂಗಳೂರು, ನವೆಂಬರ್ 12: ನಗರದ ಸಿವಿಲ್ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಸಭ್ಯ ಉಡುಪು ಧರಿಸಬೇಕು ಎಂದು ನಗರ ಸಿವಿಲ್ ನ್ಯಾಯಾಲಯದ ವಿಲೇಖನಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

ತುಂಡುಡುಗೆ ತೊಟ್ಟಿದ್ದ ಯುವತಿ: ಅನಾಮಿಕ ವ್ಯಕ್ತಿ ಮಾಡಿದ್ದೇನು ಗೊತ್ತಾ?ತುಂಡುಡುಗೆ ತೊಟ್ಟಿದ್ದ ಯುವತಿ: ಅನಾಮಿಕ ವ್ಯಕ್ತಿ ಮಾಡಿದ್ದೇನು ಗೊತ್ತಾ?

ರಾಜ್ಯ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರು ಸರ್ಕಾರದ ಘನತೆಗೆ ಧಕ್ಕೆ ಬಾರದಂತಹ ಮತ್ತು ಶೋಭೆ ತರುವಂತಹ ಸಭ್ಯ ಉಡುಗೆಗಳನ್ನು ಧರಿಸಿ ಕಚೇರಿ ಕೆಲಸಕ್ಕೆ ಹಾಜರಾಗುವಂತೆ 2013ರ ಸೆಪ್ಟೆಂಬರ್‌ನಲ್ಲಿ ಸೂಚನೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಲ್ಲಿರುವ ಪುರುಷ ನೌಕರರು ಪ್ಯಾಂಟ್/ಅಂಗಿ/ಪೈಜಾಮಾ ಅಥವಾ ಕುರ್ತಾ ಧರಿಸುವಂತೆ ಹಾಗೂ ಮಹಿಳಾ ನೌಕರರು ಸೀರೆ ಅಥವಾ ಚೂಡಿದಾರ್‌ದಂತಹ ಸಭ್ಯ ಉಡುಪುಗಳನ್ನು ಧರಿಸುವುದು ಕಡ್ಡಾಯ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

Compulsory Dress Code In Bengaluru Civil Court

ಈ ಕಾಲೇಜಿನಲ್ಲಿ ಶಾರ್ಟ್ಸ್, ಸ್ಲೀವ್ ಲೆಸ್, ಜೀನ್ಸ್ ಧರಿಸೋದು ನಿಷೇಧಈ ಕಾಲೇಜಿನಲ್ಲಿ ಶಾರ್ಟ್ಸ್, ಸ್ಲೀವ್ ಲೆಸ್, ಜೀನ್ಸ್ ಧರಿಸೋದು ನಿಷೇಧ

ನಗರ ಸಿವಿಲ್ ನ್ಯಾಯಾಲಯದ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿರುವ ಕೆಲವು ನೌಕರರು ಈ ಸುತ್ತೋಲೆಯ ನಿಯಮಗಳನ್ನು ಪಾಲಿಸದೆ ಇರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಸಿವಿಲ್ ನ್ಯಾಯಾಲಯದಲ್ಲಿ ವೃತ್ತಿ ಮಾಡುತ್ತಿರುವವರು ತಮ್ಮ ಉಡುಗೆ ತೊಡುಗೆ ವಿಚಾರದಲ್ಲಿ ಸರ್ಕಾರದ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

English summary
Bengaluru Civil Court has directed all its workers and employees to follow dress code rules issued by the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X