ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬೆಂಗಳೂರು ನಗರಾಭಿವೃದ್ಧಿ ಖಾತೆ ನನಗೂ ಇಲ್ಲ, ಭೈರತಿಗೂ ಇಲ್ಲ'

|
Google Oneindia Kannada News

ಬೆಂಗಳೂರು, ಫೆ. 08: ಬಹುಬೇಡಿಕೆಯ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಬಹಳಷ್ಟು ಒತ್ತಡಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿದೆ. ಮೂಲ, ವಲಸೆ ಸೇರಿದಂತೆ, ನೂತನ ಸಚಿವರೂ ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಲಾಭಿ ನಡೆಸಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಆರು ತಿಂಗಳು ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಮಾಜಿ ಡಿಸಿಎಂ ಹಾಗೂ ಹಾಲಿ ಡಿಸಿಎಂಗಳ ಮಧ್ಯೆ ಆ ಖಾತೆಗಾಗಿ ತೀವ್ರ ಪೈಪೋಟಿ ನಡೆದಿತ್ತು. ಒತ್ತಡ ಹೆಚ್ಚಾಗುತ್ತಿದ್ದಂತೆಯೆ ಎಚ್ಚೆತ್ತುಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರು ನಗರಾಭುವೃದ್ಧಿ ಖಾತೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದರು.

ಇದೀಗ ಮತ್ತೊಂದು ಹಂತದ ಲಾಭಿ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಬೆಂಗಳೂರಿನ ಘಟಾನುಘಟಿ ಸಚಿವರ ಮಧ್ಯೆ ನಡೆದಿದೆ ಎನ್ನಲಾಗಿದೆ. ಬಹಿರಂಗವಾಗಿ ಮುಖ್ಯಂತ್ರಿಗಳು ಕೊಡುವ ಯಾವುದೇ ಖಾತೆಯನ್ನು ನಿಭಾಯಿಸಲು ನಾವು ಸಿದ್ಧರೆಂದೆ ಎಲ್ಲ 10 ನೂತನ ಸಚಿವರು ಹೇಳುತ್ತಿದ್ದಾರೆ. ಆದರೆ ಎಲ್ಲರೂ ಇಂಥದ್ದೆ ಖಾತೆ ಬೇಕು ಎಂದು ಒತ್ತಡ ಹಾಕುತ್ತಿರುವುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ.

ಬಿ ವೈ ವಿಜಯೇಂದ್ರ ರಾಜಕೀಯ ಮುಖ್ಯವಾಹಿನಿಗೆ ತರಲು ಸಿದ್ಧವಾಗಿದೆ ವೇದಿಕೆ!ಬಿ ವೈ ವಿಜಯೇಂದ್ರ ರಾಜಕೀಯ ಮುಖ್ಯವಾಹಿನಿಗೆ ತರಲು ಸಿದ್ಧವಾಗಿದೆ ವೇದಿಕೆ!

ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಇಬ್ಬರು ಪ್ರಭಾವಿ ಸಚಿವರ ಮಧ್ಯೆ ಈಗ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ. ಹಾಗಾದ್ರೆ ಯಾರಿಗೆ ಒಲಿಯುತ್ತೆ ಬೆಂಗಳೂರು? ಎಂಬುದು ಕುತೂಹಲ ಮೂಡಿಸಿದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ; ಸಿಎಂ ಮೇಲೆ ಹೆಚ್ಚಿದ ಒತ್ತಡ

ಬೆಂಗಳೂರು ನಗರಾಭಿವೃದ್ಧಿ ಖಾತೆ; ಸಿಎಂ ಮೇಲೆ ಹೆಚ್ಚಿದ ಒತ್ತಡ

ಬೆಂಗಳೂರು ಮಹಾನಗರವನ್ನು ಪ್ರತಿನಿಧಿಸುವ 10 ಸಚಿವರು ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿದ್ದಾರೆ. ಬಿಜೆಪಿ ಸರ್ಕರ ಅಸ್ತಿತ್ವಕ್ಕೆ ಬಂದಾಗ 7 ಸಚಿವರು ಬೆಂಗಳೂರಿನಿಂದಲೇ ಸೇರ್ಪಡೆ ಆಗಿದ್ದರು, ಇದೀಗ ಮತ್ತೆ 3 ಸಚಿವರು ಸಂಪುಟ ಸೇರಿದ್ದಾರೆ. ಮತ್ತೆ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಮತ್ತೆ ಖ್ಯಾತೆ ಶುರುವಾಗಿದೆ ಎನ್ನಲಾಗಿದೆ.

ಬೆಂಗಳೂರನ್ನು ಪ್ರತಿನಿಧಿಸುವ ಕೆ. ಗೋಪಾಲಯ್ಯ, ಎಸ್.ಟಿ. ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಮೂವರು ಯಡಿಯೂರಪ್ಪ ಅವರ ಸಂಪುಟ ಸೇರಿದ್ದಾರೆ. ಇವರಲ್ಲಿ ಭೈರತಿ ಬಸವರಾಜ್ ಹಾಗೂ ಎಸ್.ಟಿ. ಸೋಮಶೇಖರ್ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಸಿಎಂ ಯಡಿಯೂರಪ್ಪ ಅವರ ಮೇಲೆ ತೀವ್ರ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿಯಿದೆ.

ಬಿಜೆಪಿ ಕಚೇರಿ ಸಿಬ್ಬಂದಿ ಸಚಿವ ಗೋಪಾಲಯ್ಯರಿಗೆ ಹೇಳಿದ್ದು...ಬಿಜೆಪಿ ಕಚೇರಿ ಸಿಬ್ಬಂದಿ ಸಚಿವ ಗೋಪಾಲಯ್ಯರಿಗೆ ಹೇಳಿದ್ದು...

ಹಿಂದೆ ಹಾಲಿ, ಮಾಜಿ ಡಿಸಿಎಂಗಳ ಮಧ್ಯೆ ಇತ್ತು ಪೈಪೋಟಿ

ಹಿಂದೆ ಹಾಲಿ, ಮಾಜಿ ಡಿಸಿಎಂಗಳ ಮಧ್ಯೆ ಇತ್ತು ಪೈಪೋಟಿ

ಕಳೆದ 6 ತಿಂಗಳ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಖಾತೆ ಹಂಚಿಕೆಗೆ ಮೊದಲು ಮಾಜಿ ಹಾಲಿ ಡಿಸಿಎಂಗಳ ಮಧ್ಯೆ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪೈಪೋಟಿ ಶುರುವಾಗಿತ್ತು. ಗೃಹಖಾತೆ ಕೈತಪ್ಪಿದ್ದರಿಂದ ಮಾಜಿ ಡಿಸಿಎಂ ಆರ್. ಅಶೋಕ್ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಸಿಎಂ ಮೇಲೆ ಒತ್ತಡ ಹಾಕಿದ್ದರು. ಆಗ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರೂ ಕೂಡ ಬೆಂಗಳೂರು ನಗರಾಭಿವೃದ್ಧಿಗಾಗಿ ಲಾಭಿ ನಡೆಸಿದ್ದರು. ಆ ಸಮಯದಲ್ಲಿ ಕಾರ್ಯಕ್ರವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದ ಇಬ್ಬರೂ ಸಚಿವರು ಒಬ್ಬರಿಗೊಬ್ಬರು ಮಾತನಾಡಿರಲಿಲ್ಲ. ಹೀಗಾಗಿ ಎಚ್ಚೆತ್ತುಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಿನ ವೈಮನಸ್ಸು ತಪ್ಪಿಸಲು, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೆ ಇಟ್ಟುಕೊಳ್ಳಲು ತೀರ್ಮಾನ ಮಾಡಿದ್ದರು. ಈಗಲೂ ಅದು ಸಿಎಂ ಬಳಿಯೆ ಇದೆ.

ಬೆಂಗಳೂರು ನಗರಭಿವೃದ್ಧಿ ನನಗೂ ಇಲ್ಲ, ಭೈರತಿಗೂ ಇಲ್ಲ

ಬೆಂಗಳೂರು ನಗರಭಿವೃದ್ಧಿ ನನಗೂ ಇಲ್ಲ, ಭೈರತಿಗೂ ಇಲ್ಲ

ಬೆಂಗಳೂರು ಮಹಾನಗರ ಪ್ರತಿನಿಧಿಸುವ ಸಚಿವರಾದ ಎಸ್.ಟಿ. ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಮಧ್ಯೆ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪೈಪೋಟಿ ಶುರುವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಇಬ್ಬರೂ ಲಾಭಿ ಮಾಡುತ್ತಿದ್ದಾರೆಂಬ ಮಾಹಿತಿಯೂ ಇದೆ. ಹಿಂದೆ ಮೈತ್ರಿ ಸರ್ಕಾರದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು, ಅದರಿಂದಾಗಿ ಖಾತೆ ನನಗೆ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿಯಿತ್ತು. ಆದರೆ ಅದನ್ನು ಅಲ್ಲಗಳೆದು ಕೊಟ್ಟಿರುವ ಹೇಳಿಕೆ ಕುತೂಹಲ ಮೂಡಿಸಿದೆ.


'ಬೆಂಗಳೂರು ನಗರಾಭಿವೃದ್ಧಿ ಖಾತೆ ನನಗೂ ಇಲ್ಲ, ಭೈರತಿಗೂ ಇಲ್ಲ' ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ಕೊಟ್ಟಿರುವುದು ಆಶ್ಚರ್ಯ ಮೂಡಿಸಿದೆ. ನಾನು ಮತ್ತು ಭೈರತಿ ಯಾವುದೇ ಹುದ್ದೆಗಾಗಿ ಇಲ್ಲಿಯವರೆಗೆ ಲಾಭಿ ಮಾಡಿಲ್ಲ, ಮಾಡುವುದು ಇಲ್ಲ ಎಂದಿದ್ದಾರೆ.

'ಹೈಕಮಾಂಡ್ ಸೂಚನೆ ಕೊಟ್ಟರೂ, ಯಾಕೆ ಸೇರಿಸಿಕೊಳ್ಳಲಿಲ್ಲ ಎಂಬುದು ಗೊತ್ತಿಲ್ಲ''ಹೈಕಮಾಂಡ್ ಸೂಚನೆ ಕೊಟ್ಟರೂ, ಯಾಕೆ ಸೇರಿಸಿಕೊಳ್ಳಲಿಲ್ಲ ಎಂಬುದು ಗೊತ್ತಿಲ್ಲ'

'ಸಧ್ಯ ಬೆಂಗಳೂರು ನಿಮ್ಮ ಬಳಿಯೆ ಇರಲಿ'

'ಸಧ್ಯ ಬೆಂಗಳೂರು ನಿಮ್ಮ ಬಳಿಯೆ ಇರಲಿ'

ಈ ಮಧ್ಯೆ ಸೋಮವಾರ ಖಾತೆ ಹಂಚುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಆದರೆ ಬಿಎಸ್‌ವೈ ಅವರಿಗೆ ಹೈಕಮಾಂಡ್‌ನಿಂದ ಮಹತ್ವದ ಸೂಚನೆ ಬಂದಿದ್ದು, ಸಧ್ಯಕ್ಕೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀವೆ ಇಟ್ಟುಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ. ಹಿಂದೆ ನಡೆದಿದ್ದ ಪೈಟೋಟಿ ಹೈಕಮಾಂಡ್ ಗಮನದಲ್ಲಿ ಇದ್ದಿದ್ದರಿಂದ ಬೆಂಗಳೂರನ್ನು ಸಧ್ಯ ಬೇರೆಯವರಿಗೆ ಕೊಡಬೇಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಹಿಂದೆ ಕಾಂಗ್ರೆಸ್‌ ಹಾಗೂ ನಂತರ ಮೈತ್ರಿ ಸರ್ಕಾರದಲ್ಲಿಯೂ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ತೀವ್ರ ಪೈಪೋಟಿ ಇತ್ತು. ಆದರಿಂದ ಈಗ 'ಬೆಂಗಳೂರು' ಯಾರಿಗೆ ಒಲಿಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

English summary
The competition for the Bengaluru Urben Development ministry has begun. Curious as who gets the ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X