ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ತಡೆ: ನ್ಯೂಜಿಲ್ಯಾಂಡ್‌ಗಿಂತ ಬೆಂಗಳೂರು ನಗರ ಗ್ರೇಟಾ?

|
Google Oneindia Kannada News

ಬೆಂಗಳೂರು, ಜೂನ್ 12: ಕೊರೊನಾ ವೈರಸ್‌ ವಿಶ್ವಾದ್ಯಂತ ಹರಡಿದೆ. ಬಹುತೇಕ ಎಲ್ಲ ದೇಶಗಳು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿವೆ. ಇದರಲ್ಲಿ ನ್ಯೂಜಿಲ್ಯಾಂಡ್‌ ದೇಶ ವಿಜಯ ಸಾಧಿಸಿದ್ದು, ಆ ದೇಶ ಕೊರೊನಾ ಮುಕ್ತವಾಗಿದೆ.

Recommended Video

Bengaluru corona cases are getting scarier everyday | Bengaluru | Oneindia Kannada

ಆದರೆ, ಕೊರೊನಾ ನಿಯಂತ್ರಣ ಮಾಡುವುದರಲ್ಲಿ ನ್ಯೂಜಿಲ್ಯಾಂಡ್‌ಗಿಂತ ಬೆಂಗಳೂರು ಹಿಂದೆ ಬಿದ್ದಿಲ್ಲ ಎನ್ನುವ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇವುಗಳಲ್ಲಿ ನ್ಯೂಜಿಲ್ಯಾಂಡ್‌ ಹಾಗೂ ಬೆಂಗಳೂರಿನ ಜನಸಂಖ್ಯೆ, ಕೊರೊನಾ ವೈರಸ್‌ ಸೋಂಕಿತರ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳನ್ನು ಹೋಲಿಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮುಂದುವರೆದ ಆತಂಕ, ಕಂಟೇನ್ಮೆಂಟ್ ಜೋನ್ 113ಬೆಂಗಳೂರಿನಲ್ಲಿ ಮುಂದುವರೆದ ಆತಂಕ, ಕಂಟೇನ್ಮೆಂಟ್ ಜೋನ್ 113

ಅಂಕಿ ಸಂಖ್ಯೆಗಳನ್ನು ನೋಡಿದರೆ, ನ್ಯೂಜಿಲ್ಯಾಂಡ್‌ಗಿಂತ ಬೆಂಗಳೂರು ಕೊರೊನಾ ವಿರುದ್ಧ ಹೋರಾಟದಲ್ಲಿ ಹಿಂದೆ ಬಿದ್ದಿಲ್ಲ ಎನ್ನುವ ಅಭಿಪ್ರಾಯ ಬರುತ್ತದೆ. ಎಲ್ಲರೂ ಕೊರೊನಾ ಹೋರಾಟಕ್ಕೆ ಅಲ್ಲಿನ ಸರ್ಕಾರಕ್ಕೆ ಹೋಗಳುತ್ತಿದ್ದಾರೆ. ಆದರೆ, ಅದರೊಂದಿಗೆ ನಮ್ಮ ರಾಜ್ಯ ಸರ್ಕಾರ ಸಹ ಹೊಗಳಿಸಿಕೊಳ್ಳುವಷ್ಟು ಶ್ರಮಪಟ್ಟಿದೆ ಎಂದು ಈ ಅಂಕಿ ಅಂಶಗಳಲ್ಲಿ ತಿಳಿಯುತ್ತದೆ.

ನ್ಯೂಜಿಲ್ಯಾಂಡ್‌ಗಿಂತ ಬೆಂಗಳೂರಿನಲ್ಲಿ ಹೆಚ್ಚು ಜನಸಂಖ್ಯೆ

ನ್ಯೂಜಿಲ್ಯಾಂಡ್‌ಗಿಂತ ಬೆಂಗಳೂರಿನಲ್ಲಿ ಹೆಚ್ಚು ಜನಸಂಖ್ಯೆ

ನ್ಯೂಜಿಲ್ಯಾಂಡ್‌ ಜನಸಂಖ್ಯೆ 48.9 ಲಕ್ಷ ಇದೆ. ಇದು 2018ರ ಜನಗಣತಿಯ ಸಂಖ್ಯೆ. ಇನ್ನು ಬೆಂಗಳೂರು ನಗರದಲ್ಲಿ 1 ಕೋಟಿಗೂ ಅಧಿಕ ಜನರು ವಾಸ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್‌ಗಿಂತ ಬೆಂಗಳೂರು ಹೆಚ್ಚಿನ ಜನಸಂಖ್ಯೆ ಹೊಂದಿದೆ. ಆದರೆ, ಕೊರೊನಾ ಸೋಂಕಿತರ ಪ್ರಮಾಣ ನ್ಯೂಜಿಲ್ಯಾಂಡ್‌ಗಿಂತ ಕಡಿಮೆ ಇದೆ. ಬೆಂಗಳೂರಿನ ಸೋಂಕಿತರ ಸಂಖ್ಯೆ 522 ಆದ್ರೆ, ನ್ಯೂಜಿಲ್ಯಾಂಡ್‌ ಸೋಂಕಿತರ ಸಂಖ್ಯೆ 1,154 ಆಗಿದೆ.

ಸಾವಿನ ಸಂಖ್ಯೆಯೂ ನ್ಯೂಜಿಲ್ಯಾಂಡ್‌ನಲ್ಲಿ ಹೆಚ್ಚು

ಸಾವಿನ ಸಂಖ್ಯೆಯೂ ನ್ಯೂಜಿಲ್ಯಾಂಡ್‌ನಲ್ಲಿ ಹೆಚ್ಚು

ನ್ಯೂಜಿಲ್ಯಾಂಡ್‌ ಒಟ್ಟು ವಿಸ್ತೀರ್ಣ 268,021 km² ಇದೆ. ಬೆಂಗಳೂರಿನ ವಿಸ್ತೀರ್ಣ 709 km² ಇದೆ. ಬೆಂಗಳೂರಿನ ಜನಸಂಖ್ಯಾ ಸಾಂದ್ರತೆ 11847/km² ಇದ್ದರೆ, ನ್ಯೂಜಿಲ್ಯಾಂಡ್‌ ಜನಸಂಖ್ಯಾ ಸಾಂದ್ರತೆ 18/km² ಇದೆ. ಬೆಂಗಳೂರಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನ್ಯೂಜಿಲ್ಯಾಂಡ್‌, ಹೆಚ್ಚು ಕೊರೊನಾ ಕೇಸ್ ಹೊಂದಿದೆ. ಮಾತ್ರವಲ್ಲದೆ ಸಾವಿನ ಸಂಖ್ಯೆ ಕೂಡ ಅಲ್ಲಿಯೇ ಹೆಚ್ಚಿದೆ. ಬೆಂಗಳೂರಿನಲ್ಲಿ 19 ಸೋಂಕಿತರು ಮೃತಪಟ್ಟಿದ್ದರೆ, ನ್ಯೂಜಿಲ್ಯಾಂಡ್‌ನಲ್ಲಿ 22 ಜನರು ಸಾವನಪ್ಪಿದ್ದಾರೆ.

ನ್ಯೂಜಿಲ್ಯಾಂಡ್ ಕೊರೊನಾ ಮುಕ್ತ

ನ್ಯೂಜಿಲ್ಯಾಂಡ್ ಕೊರೊನಾ ಮುಕ್ತ

ಅಂಕಿಗಳಲ್ಲಿ ನೋಡಿದರೆ, ನ್ಯೂಜಿಲ್ಯಾಂಡ್‌ಗಿಂತ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ಕಡಿಮೆ ಸೋಂಕಿತರನ್ನು ಹೊಂದಿದೆ. ಆದರೆ, ನ್ಯೂಜಿಲ್ಯಾಂಡ್ ಈಗ ಕೊರೊನಾ ಮುಕ್ತವಾಗಿದೆ. ಬೆಂಗಳೂರಿಗಿಂತ ಹೆಚ್ಚು ಪಾಸಿಟಿವ್ ಪ್ರಕರಣ ಹೊಂದಿದ್ದರೂ, ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು 1,154 ಸೋಂಕಿತರಲ್ಲಿ, 1,132 ಮಂದಿ ಡಿಸ್ಜಾರ್ಚ್‌ ಆಗಿದ್ದಾರೆ. ಉಳಿದ 22 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ 204 ಸಕ್ರೀಯ ಪ್ರಕರಣಗಳು

ಬೆಂಗಳೂರಿನಲ್ಲಿ 204 ಸಕ್ರೀಯ ಪ್ರಕರಣಗಳು

ಬೆಂಗಳೂರಿನಲ್ಲಿ ಒಟ್ಟು 522 ಕೊರೊನಾ ಪ್ರಕರಣಗಳ ಪೈಕಿ 298 ಮಂದಿ ಗುಣಮುಖರಾಗಿದ್ದಾರೆ. ಆದರೆ, ಇನ್ನೂ 204 ಕೇಸ್‌ಗಳು ಸಕ್ರೀಯವಾಗಿವೆ. ನ್ಯೂಜಿಲ್ಯಾಂಡ್‌ಗಿಂತ ಹೆಚ್ಚು ಜನಸಂಖ್ಯೆ ಇದ್ದರೂ, ಬೆಂಗಳೂರು ಕಡಿಮೆ ಕೇಸ್‌ ಹೊಂದಿದೆ. ಆದರೆ, ಬೆಂಗಳೂರು ಕೊರೊನಾ ಪರೀಕ್ಷೆಯಲ್ಲಿ ಇನ್ನೂ ಸಂಪೂರ್ಣ ಪಾಸ್‌ ಆಗಿಲ್ಲ. ಅಂದಹಾಗೆ, ಕರ್ನಾಟಕದಲ್ಲಿ ಉಡುಪಿ, ಯಾದಗಿರಿ, ಕಲಬುರಗಿ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಬೆಂಗಳೂರು ನಗರದಲ್ಲಿ ಕಡಿಮೆ ಪ್ರಕರಣ ಇವೆ.

English summary
Comparison between Bengaluru and New Zealand corona cases. Bengaluru has less corona cases (522).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X