ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋಸ ಹೋದ ಅನುಭವ,ಕೊರೊನಾ ಲಸಿಕೆ ದರ ಕುರಿತು ಕಿರಣ್ ಮಜುಂದಾರ್ ಷಾ ಆಕ್ರೋಶ

|
Google Oneindia Kannada News

ಬೆಂಗಳೂರು,ಮಾರ್ಚ್ 1: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಗೆ ನಿಗದಿಪಡಿಸಿರುವ ದರ ತೀರಾ ಕಡಿಮೆಯಾಗಿದೆ ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.

ಕೋವಿಡ್ ಲಸಿಕೆ ವಿಚಾರವಾಗಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರ ತೀರಾ ಕಡಿಮೆಯಾಗಿದ್ದು, ನಮಗೆ ಇದೀಗ ಮೋಸ ಹೋದ ಅನುಭವವಾಗುತ್ತಿದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಆಕ್ರೋಶ ಭರಿತ ಮಾತುಗಳನ್ನಾಡಿದ್ದಾರೆ.

ಬೆಂಗಳೂರಿನ ಪ್ರತಿ ಕೇಂದ್ರದಲ್ಲಿ 200 ಮಂದಿಗೆ ಕೊರೊನಾ ಲಸಿಕೆಬೆಂಗಳೂರಿನ ಪ್ರತಿ ಕೇಂದ್ರದಲ್ಲಿ 200 ಮಂದಿಗೆ ಕೊರೊನಾ ಲಸಿಕೆ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆಗೆ 250ರೂ ದರ ಮಿತಿ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್‌ ಷಾ ವಿರೋಧಿಸಿದ್ದು, 'ಲಸಿಕೆಗೆ ನಿಗದಿ ಪಡಿಸಿರುವ ಬೆಲೆಯು ತೀರಾ ಕಡಿಮೆ. ಲಸಿಕೆ ಕಂಪನಿಗಳಿಗೆ ಮೋಸ ಹೋದಂತಹ ಅನುಭವ ಆಗುತ್ತಿದೆ. ಈ ರೀತಿಯ ನಡೆಗಳ ಮೂಲಕ ನಾವು ಲಸಿಕೆ ಉದ್ಯಮವನ್ನು ಉತ್ತೇಜಿಸುವ ಬದಲು ನಾಶ ಮಾಡುತ್ತಿದ್ದೇವೆ ಎಂದರು.

ಇಂತಹ ನಡೆ ಉದ್ಯಮಕ್ಕೆ ಒಳ್ಳೆಯದಲ್ಲ

ಇಂತಹ ನಡೆ ಉದ್ಯಮಕ್ಕೆ ಒಳ್ಳೆಯದಲ್ಲ

ಇಂತಹ ನಡೆಗಳು ಉದ್ಯಮಕ್ಕೆ ಒಳ್ಳೆಯದಲ್ಲ, ಈಗಾಗಲೇ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರತೀ ಡೋಸ್ ಗೆ 3 ಅಮೆರಿಕನ್ ಡಾಲರ್ ದರ ನಿಗದಿಗೆ ಅನುಮತಿ ನೀಡಿದೆ. ಆದರೆ ಸರ್ಕಾರ ಅದನ್ನು ಏಕೆ 2 ಡಾಲರ್ ಗೆ ಇಳಿಸಬೇಕಿತ್ತು ಪ್ರಶ್ನಿಸಿದ್ದಾರೆ.

ಲಸಿಕೆ ತಯಾರಕಾ ಸಂಸ್ಥೆಗಳಿಗೆ ಸಬ್ಸಿಡಿ?

ಲಸಿಕೆ ತಯಾರಕಾ ಸಂಸ್ಥೆಗಳಿಗೆ ಸಬ್ಸಿಡಿ?

ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆಗೆ 250 ರೂಪಾಯಿಗಳ ಬೆಲೆ ನಿಗದಿಪಡಿಸಿರುವ ಸರ್ಕಾರದ ಕ್ರಮಕ್ಕೆ ಲಸಿಕೆ ತಯಾರಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಸಬ್ಸಿಡಿ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸರ್ಕಾರ ಲಸಿಕೆ ತಯಾರಕರಿಗೆ ಸಬ್ಸಿಡಿ ನೀಡುವ ಚಿಂತನೆ ನಡೆಸುತ್ತಿದೆ. ಆದರೆ ಸಬ್ಸಿಡಿಯ ವಿವರಗಳು ಲಭ್ಯವಿಲ್ಲ. ಮಾ.1 ರಿಂದ ದೇಶಾದ್ಯಂತ ಹೆಚ್ಚಿನ ವ್ಯಾಪ್ತಿಯಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭವಾಗುವುದಕ್ಕೂ ಮುನ್ನ ಈ ಬೆಳವಣಿಗೆಯಾಗಿದೆ.

ಕೊರೊನಾ ಲಸಿಕೆ ನೋಂದಣಿ ಹೇಗೆ?

ಕೊರೊನಾ ಲಸಿಕೆ ನೋಂದಣಿ ಹೇಗೆ?

Co-WIN app ಅಥವಾ cowin.gov.in ವೆಬ್‌ಸೈಟ್‌ ಹೋಗಿ

  • ಅಲ್ಲಿ ನಿಮ್ಮ ಮೊಬೈಲ್ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿಸಬೇಕು
  • ನಿಮಗೆ ಬರುವ ಒಟಿಪಿಯನ್ನು ನೊಂದಾಯಿಸಿದ ಬಳಿಕ ನಿಮ್ಮ ಖಾತೆ ತೆರೆಯಲಿದೆ
  • ಇಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಖಾತೆಯನ್ನೂ ತೆರೆಯಬಹುದು
  • ಇದಾದ ಬಳಿಕ ನಿಗದಿತ ದಿನಾಂಕದಂದು ಲಸಿಕೆ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಿರಿ.
  • ಒಬ್ಬರಿಗೆ ಲಸಿಕೆ ನೀಡಲು 30 ನಿಮಿಷ ಬೇಕು. ಹೀಗಾಗಿ ಪ್ರತಿ ಸೆಷನ್ನಲ್ಲಿ 100 ಜನರಿಗೆ ಮಾತ್ರವೇ ಕೊರೊನಾ ಲಸಿಕೆ ನೀಡಲಾಗುತ್ತದೆ.
  • 45 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ತಮಗೆ ಅನಾರೋಗ್ಯಇರುವುದರ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿರಲಿದೆ

Recommended Video

COVID-19 ವ್ಯಾಕ್ಸಿನ್‌ ಪಡೆದುಕೊಂಡ ಪ್ರಧಾನಿ ಮೋದಿ | Oneindia Kannada
ಬೆಂಗಳೂರಲ್ಲಿ 24 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ವಿತರಣೆ

ಬೆಂಗಳೂರಲ್ಲಿ 24 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ವಿತರಣೆ

ಸರ್ಕಾರಿ ಆಸ್ಪತ್ರೆಗಳಾದ ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆ,ಜಯನಗರ ಜನರಲ್ ಆಸ್ಪತ್ರೆ ಹಾಗೂ ಸಿವಿ ರಾಮನ್ ಜನರಲ್ ಆಸ್ಪತ್ರೆಮ ಸರ್ಕಾರಿ ವೈದ್ಯಕೀಯ ಕಾಲೇಜುಗಳಾದ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು, ಖಾಸಗಿ ವೈದ್ಯಕೀಯ ಕಾಲೇಜುಗಳಾದ ಸಪ್ತಗಿರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜು.

ಖಾಸಗಿ ಆಸ್ಪತ್ರೆಗಳಾದ ವಿಕ್ರಂ ಆಸ್ಪತ್ರೆ,ಮಣಿಪಾಲ್,ರಾಘವೇಂದ್ರ ಪೀಪಲ್ ಟ್ರೀ,ಯಶವಂತಪುರದ ಕೊಲಂಬಿಯಾ ಏಷ್ಯಾ,ಶೇಷಾದ್ರಿಪುರದ ಅಪೊಲೊ, ವೈಟ್‌ಫೀಲ್ಡ್‌ನ ಕೊಲಂಬಿಯಾ ಏಷ್ಯಾ,ಹೆಬ್ಬಾಳದ ಕೊಲಂಬಿಯಾ ಏಷ್ಯಾ,ಬನ್ನೇರುಘಟ್ಟ ರಸ್ತೆಯ ಅಪೊಲೊ,ಫೋರ್ಟಿಸ್,ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆ,ಜಯನಗರದ ಅಪೊಲೊ,ದಯಾನಂದ ಸಾಗರ್,ಮಲ್ಲಿಗೆ ಹಾಗೂ ಸುರಕ್ಷಾ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ.

English summary
Biocon Chairperson Kiran Mazumdar Shaw on Sunday hit out at the government capping Covid-19 vaccine price at ₹250 at private hospitals, saying vaccine companies "feel betrayed" as it is too low to sustain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X