ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಬೆಂಗಳೂರು ನಿರ್ಮಾಣಕ್ಕಾಗಿ ಜನ ಸಂಪರ್ಕ ಪಾದಯಾತ್ರೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 10: ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ತಯಾರಿ ಬಿರುಸು ಪಡೆದುಕೊಂಡಿದೆ. ಫೆಬ್ರವರಿ 12ರಿಂದ 16ರವೆಗೆ ನಗರದಾದ್ಯಂತ ಪಾದಯಾತ್ರೆ ಅಭಿಯಾನವನ್ನು ಪಕ್ಷವು ಹಮ್ಮಿಕೊಂಡಿದೆ.

ನವೀನ ವಿಧಾನಗಳನ್ನು ಅಳವಡಿಸಿಕೊಂಡು, ಹೊಸ ಬೆಂಗಳೂರನ್ನು ನಿರ್ಮಿಸಲು ಸಂಕಲ್ಪತೊಟ್ಟಿರುವ ಆಮ್ ಆದ್ಮಿ ಪಕ್ಷವು ಮುಂಬರುವ ಬಿಬಿಎಂಪಿ ಚುನಾವಣೆಗೆ ವ್ಯಾಪಕ ಕಾರ್ಯಯೋಜನೆ ರೂಪಿಸಿಕೊಂಡಿದೆ. ಎಲ್ಲಾ ವಾರ್ಡ್‍ಗಳಲ್ಲಿಯೂ ಹೊಸಬೆಂಗಳೂರು ಜನಸಂವಾದ ಕಾರ್ಯಕ್ರಮಗಳ ಮೂಲಕ ನಗರದ ಸಮಸ್ಯೆಗಳ ಪರಿಹಾರಕ್ಕೆ ನಾವೀನ್ಯ ಯೋಜನೆಗಳನ್ನು ರೂಪಿಸುತ್ತಿದೆ.

ಹಲವಾರು ಸಮಸ್ಯೆಗಳಿಂದ ರೋಸಿಹೋಗಿರುವ ಬೆಂಗಳೂರಿಗರ ಸಮಸ್ಯೆಗಳು ಹಾಗೂ ಕುಂದು ಕೊರತೆಗಳನ್ನು ಅರಿತು, ಜನರ ಕನಸಿನ ಹೊಸ ಬೆಂಗಳೂರನ್ನು ಕಟ್ಟುವುದರಲ್ಲಿ ಪಕ್ಷದೊಂದಿಗೆ ಜನಸಾಮಾನ್ಯರನ್ನು ಒಳಗೊಳ್ಳುವ, ಬೆಂಗಳೂರನ್ನು ವಿಶ್ವದರ್ಜೆಯ ಮಹಾನಗರವನ್ನಾಗಿಸಲು ಅವರ ಸಲಹೆಗಳನ್ನು ಪಡೆಯುವ ಉದ್ದೇಶದಿಂದ ನಗರದಾದ್ಯಂತ ಪಾದಯಾತ್ರೆಯನ್ನು ಹಮ್ಮಿಕೊಳ‍್ಳಲಾಗಿದೆ.

Common mans mega walkathon to built Hosa Bengaluru

ಅಲ್ಲದೆ, ಪಕ್ಷದ ಕೆಲಸಗಳು, ಸಿದ್ದಾಂತಗಳು, ಕಾರ್ಯಶೈಲಿಯನ್ನು ನೋಡಿ ಪಕ್ಷದ ಜೊತೆ ಕೈಜೋಡಿಸುವ ಜನರಿಗೆ ಪಕ್ಷದ ಸದಸ್ಯತ್ವವನ್ನು ನೀಡುವುದು ಹಾಗೂ ಸಮರ್ಥ, ಸೇವಾ ಮನೋಭಾವವುಳ್ಳ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾದ ಅಭ್ಯರ್ಥಿಗಳನ್ನು ಜನರ ಅಭಿಮತದೊಂದಿಗೆ ಆಯ್ಕೆ ಮಾಡಿ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ.

ಫೆಬ್ರವರಿ 12ರಂದು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಇರುವ ಗಾಂಧಿ ಪ್ರತಿಮೆಯ ಎದುರು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಾದಯಾತ್ರೆಯು ನಗರದಾದ್ಯಂತ ಐದು ದಿನಗಳ ಕಾಲ ನಡೆಯಲಿದ್ದು, ಫೆಬ್ರವರಿ 16ರಂದು ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆಯ ಎದುರು ಕೊನೆಗೊಳ್ಳಲಿದೆ. ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್‍ ಸಹಾನೀ, ಬೆಂಗಳೂರು ಘಟಕದ ಅಧ‍್ಯಕ್ಷರಾದ ಮೋಹನ್ ದಾಸರಿ, ಬಿಬಿಎಂಪಿ ಚುನಾವಣಾ ಕ್ಯಾಂಪೇನ್ ಉಸ್ತುವಾರಿಗಳಾದ ಶಾಂತಲಾ ದಾಮ್ಲೆ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

English summary
The Aam Aadmi Party (AAP) has speeded up its preparations for the upcoming Bengaluru BBMP elections. It has scheduled a Paadayatre throughout the city from February 12th to 16th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X