ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ, ಟ್ಯಾಕ್ಸಿ ಚಾಲನೆಗೆ ಪ್ರತ್ಯೇಕ ಲೈಸೆನ್ಸ್ ಬೇಡ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಲಘು ಮೋಟಾರು ವಾಹನ ವಿಭಾಗದ ಟ್ಯಾಕ್ಸಿ, ಆಟೋ, ಇ-ರಿಕ್ಷಾ, ಇ-ಕಾರ್ಟ್ ಮತ್ತು ಗೂಡ್ಸ್ ರಿಕ್ಷಾ ಓಡಿಸಲು ಇನ್ನುಮುಂದೆ ಸಾರಿಗೆ ವಾಹನ ಚಾಲನೆ ಲೈಸೆನ್ಸ್ ಅಗತ್ಯವಿಲ್ಲ.ಕೇವಲ ಎಲ್ ಎಂವಿ ಲೈಸೆನ್ಸ್ ಇದ್ದವರೂ ಈ ವಾಹನ ಓಡಿಸಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ.

ಮೆಟ್ರೋ 40 ನಿಲ್ದಾಣಗಳಲ್ಲಿ ಕ್ಯಾಬ್ ಜತೆಗೆ ಆಟೋರಿಕ್ಷಾಮೆಟ್ರೋ 40 ನಿಲ್ದಾಣಗಳಲ್ಲಿ ಕ್ಯಾಬ್ ಜತೆಗೆ ಆಟೋರಿಕ್ಷಾ

2011ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮುಕುಂದ್ ದೇವಗನ್ ಮತ್ತು ಓರಿಯೆಂಟರ್ ವಿಮಾ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಂದಿದೆ. ಈ ಆದೇಶ ಪಾಲಿಸುವಂತೆ ಎಲ್ಲ ರಾಜ್ಯದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವಾಲಯ ಸೂಚನೆ ನೀಡಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಸುಪ್ರೀಂಕೋರ್ಟ್ ಆದೇಶದಂತೆ ಕೇವಲ ಮಧ್ಯಮ ಮತ್ತು ಭಾರಿ ಗಾತ್ರದ ಸರಕು ಹಾಗೂ ಪ್ಯಾಸೆಂಜರ್ ವಾಹನಗಳಿಗೆ ಮಾತ್ರ ಟ್ರಾನ್ಸ್ ಪೋರ್ಟ್ ಲೈಸೆನ್ಸ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು.

Commercial driving license not need for taxis,autos

ಉಳಿದ ಯಾವುದೇ ವಾಹನಗಳಿಗೂ ಟ್ರಾನ್ಸ್ ಪೋರ್ಟ್ ಲೈಸೆನ್ಸ್ ಅಗತ್ಯವಿರುವುದಿಲ್ಲ. ಗೇರ್ ಸಹಿತ ಮತ್ತು ರಹಿತ ಮೋಟಾರು ಸೈಕಲ್ 7,500 ಕೆಜಿಗಿಂತ ಕಡಿಮೆ ಇರುವ ಎಲ್ ಎಂವಿ ಇ-ರಿಕ್ಷಾ, ಇ-ಕಾರ್ಟ್ ವಾಹನ ಓಡಿಸಲು ಎಲ್ ಎಂವಿ ಲೈಸೆನ್ಸ್ ಸಾಕು ಎಂದು ಸೂಚನಾ ಪತ್ರದಲ್ಲಿ ಉಲ್ಲೇಖಿಲಸಾಗಿದೆ.

English summary
The Government has done away with requirement of a commercial license for driving taxis, three wheelers, e-rickshaws and two-wheelers, allowing drivers to use their private, personal license for the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X