ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಟು ಶಿವಾಜಿನಗರ ಮೆಟ್ರೋ ಸುರಂಗ ಮಾರ್ಗಕ್ಕೆ ಚಾಲನೆ

|
Google Oneindia Kannada News

ಬೆಂಗಳೂರು, ಜುಲೈ 30: ಮೆಟ್ರೋ-2 ಹಂತದಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಮತ್ತು ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗಕ್ಕೆ ಅಬ್ದುಲ್ ಬ್ಯಾರಿ ಹೈಸ್ಕೂಲ್ ಮೈದಾನ, ಸುಲ್ತಾನಾ ಗುಂಟಾ, ಶಿವಾಜಿನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಚಾಲನೆ ನೀಡಿದರು.

Recommended Video

Hardik Pandya And Natasa Stankovic Blessed With A Baby Boy | Oneindia Kannada

ನಮ್ಮ ಮೆಟ್ರೋ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಕ್ಷಿಪ್ರಗತಿಯಲ್ಲಿ ಪ್ರಯಾಣಿಕರನ್ನು ತಮ್ಮ ಗಮ್ಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದೆ. ಮೆಟ್ರೋ ಹಂತ-2 ರ ಭಾಗವಾಗಿ ಗೊಟ್ಟಿಗೆರೆಯಿಂದ ನಾಗವಾರದವರೆಗೆ 21.40 ಕಿ.ಮೀ ಉದ್ದದ ಹೊಸ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.

'ಯಡಿಯೂರಪ್ಪ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ''ಯಡಿಯೂರಪ್ಪ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ'

ಶಿವಾಜಿನಗರ ನಿಲ್ದಾಣದಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಕಡೆಗೆ ಸುರಂಗ ಮಾರ್ಗ 855 ಮೀಟರ್ ಉದ್ದವಿದೆ. ಸುರಂಗ ಮಾರ್ಗದ ಕಾಮಗಾರಿಯನ್ನು ಲಾರ್ಸನ್ ಮತ್ತು ಟ್ಯೂಬ್ರೋ ಲಿಮಿಟೆಡ್ ಸಂಸ್ಥೆಯವರಿಗೆ ವಹಿಸಲಾಗಿದೆ ಎಂದು ಸಿಎಂ ಹೇಳಿದರು. ಮುಂದೆ ಓದಿ...

ಊರ್ಜಾ ಮತ್ತು ವಿಂಧ್ಯಾ ಹೆಸರು

ಊರ್ಜಾ ಮತ್ತು ವಿಂಧ್ಯಾ ಹೆಸರು

ಸುರಂಗ ಕೊರೆಯುವ ಯಂತ್ರಗಳಿಗೆ ಊರ್ಜಾ ಮತ್ತು ವಿಂಧ್ಯಾ ಎಂದು ಹೆಸರಿಡಲಾಗಿದೆ. ಇವುಗಳ ಪುನರ್ ಜೋಡಣೆ ಕಾರ್ಯದ ನಂತರ ಸ್ಥಳ ಪರೀಕ್ಷೆ ಪೂರ್ಣಗೊಳಿಸಿ ಸುರಂಗ ಕೊರೆಯಲು ಸಿದ್ಧವಾಗಿದೆ. ಹೊಸ ಮಾರ್ಗದಲ್ಲಿ 7.5 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಇದ್ದು, ಆರು ಎಲಿವೇಟೆಡ್ ನಿಲ್ದಾಣಗಳನ್ನು ಹೊಂದಿದೆ. ಹಾಗೂ 12 ನೆಲದಡಿಯ ನಿಲ್ದಾಣಗಳು ಹಾಗೂ 10.37 ಕಿ.ಮೀ ಅವಳಿ ಸುರಂಗ ಮಾರ್ಗಗಳನ್ನು ಹೊಂದಿದೆ. ಶೀಘ್ರ ನಿರ್ಮಾಣದ ಸಲುವಾಗಿ ಸುರಂಗ ಮಾರ್ಗ ಕಾಮಗಾರಿಗಳನ್ನು ನಾಲ್ಕು ಪ್ಯಾಕೇಜ್‍ಗಳನ್ನಾಗಿ ವಿಂಗಡಿಸಲಾಗಿದೆ. ಮೆಟ್ರೋ ಹಂತ-2 ರ ಯೋಜನೆಯ ಒಟ್ಟಾರೆ ನಿರ್ಮಾಣದ ವೆಚ್ಚ ರೂ. 30,695 ಕೋಟಿ ರೂ.ಗಳು ಎಂದರು.

2024ರ ವೇಳೆಗೆ ಪೂರ್ಣ

2024ರ ವೇಳೆಗೆ ಪೂರ್ಣ

ಸೆಂಟ್ರಲ್ ಸಿಲ್ಕ್‍ಬೋರ್ಡ್ ಜಂಕ್ಷನ್- ಕೆ.ಆರ್.ಪುರಂ - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುವುದು. ಕಾಮಗಾರಿಯ ವೆಚ್ಚ 9,934.58 ಕೋಟಿಗಳಾಗಿದ್ದು, ಯೋಜನೆಯ ವಿಸ್ತøತ ಯೋಜನಾ ವರದಿಗೆ ಕೇಂದ್ರ ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಿದೆ. ಮೆಟ್ರೋ - 2ನೇ ಹಂತದ ಎಲ್ಲಾ ರೀಚ್‍ನ ಕಾಮಗಾರಿಗಳು ಪ್ರಾರಂಭವಾಗಿದ್ದು, 2024ರ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು

ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ನಮ್ಮ ಬೆಂಗಳೂರು ಗುರುತಿಸಿಕೊಂಡಿದೆ. ಈ ಮಾನ್ಯತೆಗೆ ತಕ್ಕಂತೆ ಮೂಲಸೌಲಭ್ಯ- ಸೇವೆಗಳನ್ನು ಒದಗಿಸುವುದು ಸರ್ಕಾರದ ಹೊಣೆಗಾರಿಕೆ. ನಿನ್ನೆಯಷ್ಟೇ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಂಗಳೂರು ಲೈಫ್ ಸೈನ್ಸಸ್ ಪಾರ್ಕ್‍ನ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿದ್ದು, ಇದು ಬೆಂಗಳೂರನ್ನು ಜಾಗತಿಕ ಜೈವಿಕ ತಂತ್ರಜ್ಞಾನದ ಹಬ್ ಆಗಿ ಸ್ಥಾಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ? ಪುನಾರಚನೆ? ಅಥವಾ?ರಾಜ್ಯ ಸಚಿವ ಸಂಪುಟ ವಿಸ್ತರಣೆ? ಪುನಾರಚನೆ? ಅಥವಾ?

1,500 ಕೋಟಿ ವೆಚ್ಚದ ಯೋಜನೆ

1,500 ಕೋಟಿ ವೆಚ್ಚದ ಯೋಜನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಗ್ರಾಮಗಳ ಕುಡಿಯುವ ನೀರಿನ ಯೋಜನೆ ಮತ್ತು ಲೆಕ್ಕಕ್ಕೆ ಸಿಗದ ನೀರಿನ ನಿಯಂತ್ರಣ ಯೋಜನೆಯನ್ನು ರೂ. 1,500 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸುಗಮ ಸಂಚಾರ ವ್ಯವಸ್ಥೆಯ ಅವಿಭಾಜ್ಯ ಅಂಗವಾದ ಉತ್ತಮ ರಸ್ತೆಗಳ ಜಾಲವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಸ್ಮಾರ್ಟ್‍ಸಿಟಿ ಯೋಜನೆಯಡಿ 456.5 ಕೋಟಿ ರೂ. ವೆಚ್ಚದಲ್ಲಿ ನಗರದ ಹೃದಯ ಭಾಗದ ರಸ್ತೆಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ.

36 ರಸ್ತೆಗಳನ್ನು ಸ್ಮಾರ್ಟ್ ರಸ್ತೆ

36 ರಸ್ತೆಗಳನ್ನು ಸ್ಮಾರ್ಟ್ ರಸ್ತೆ

ಒಟ್ಟು 28.56 ಕಿ.ಮೀ. ಉದ್ದದ 36 ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಸದ್ಯ ನಗರದಲ್ಲಿ ಹೆಚ್ಚುತ್ತಿರುವ ಹರಡುತ್ತಿರುವ ಕೋವಿಡ್-19 ಸೋಂಕನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸುವುದರ ಜೊತೆಗೆ ಮೂಲಸೌಲಭ್ಯ-ಸೇವೆಗಳನ್ನು ಒದಗಿಸುವ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪಡೆದು ಪೂರ್ಣಗೊಳಿಸಲಾಗುವುದು. ಹಾಗೆಯೇ ಇಂದು ಚಾಲನೆ ನೀಡಿರುವ ಈ ಕಾಮಗಾರಿಗಳು ನಿಗದಿತ ವೇಳೆಯಲ್ಲಿ ಪೂರ್ಣಗೊಂಡು ಬೆಂಗಳೂರಿನ ವಾಹನ ದಟ್ಟಣೆಯನ್ನು ನಮ್ಮ ಮೆಟ್ರೋ ನಿವಾರಿಸಲಿ ಎಂದು ಆಶಿಸಿದರು.

English summary
Commencement of Tunneling work between Cantonment and Shivajinagar Metro stations by CM Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X