ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ.11ರಂದು ಕಾಮೆಡ್ ಕೆ ಪ್ರವೇಶ ಪರೀಕ್ಷೆ

By Mahesh
|
Google Oneindia Kannada News

ಬೆಂಗಳೂರು, ಮೇ 10: ರಾಜ್ಯದಲ್ಲಿನ ಕಾಮೆಡ್-ಕೆ ಮೂಲಕ ವೃತ್ತಿಪರ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರ್ ಕೋರ್ಸ್‌ಗಳಿಗೆ ಮೇ 11ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

ಬೆಂಗಳೂರಿನ 97 ಕಾಲೇಜುಗಳು ಸೇರಿದಂತೆ ರಾಜ್ಯದ ಒಟ್ಟು 134 ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗೆ 18 ಸಾವಿರ ಇಂಜಿನಿಯರ್, 38,295 ದಂತ ವೈದ್ಯಕೀಯ ಹಾಗೂ 45,235 ವೈದ್ಯಕೀಯ ವಿಭಾಗಗಳಿಗೆ ಒಟ್ಟು 96,100 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

* ಬೆಳಗ್ಗೆ 10ರಿಂದ 1ರವರೆಗೆ ನಡೆಯುವ ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ,
* 10 ರಿಂದ 12ರ ವರೆಗೆ ನಡೆಯುವ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಾಸಾಯನಶಾಸ್ತ್ರ
* 2.30ರಿಂದ 4ರವರೆ ನಡೆಯುವ ಪರೀಕ್ಷೆಯಲ್ಲಿ ಜೀವಶಾಸ್ತ್ರ ಮತ್ತು ಇಂಗ್ಲಿಷ್ ಪರೀಕ್ಷೆಗಳು

COMEDK UGET 2014 examination dates

ಪ್ರಸಕ್ತ ವರ್ಷದಲ್ಲಿ 2012ಕ್ಕೂ ಮುನ್ನ ಪದವಿಪೂರ್ವ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಅವಕಾಶವಿಲ್ಲ. ಅಲ್ಲದೆ, ಈ ಹಿಂದೆ ಪ್ರವೇಶ ಪರೀಕ್ಷೆಯ ಮೂಲಕ ಸೀಟು ಪಡೆದು ಮಧ್ಯದಲ್ಲಿಯೇ ಬಿಟ್ಟು ಹೋಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನಿರಾಕರಿಸಲಾಗಿದೆ ಎಂದು ಕಾಮೆಡ್ ಕೆ(Consortium of Medical Engineering and Dental Colleges of Karnataka) ಪ್ರಕಟಣೆ ತಿಳಿಸಿದೆ.

ರೈಲು ವ್ಯವಸ್ಥೆ: ದರ್ಭಾಂಗ ಹಾಗೂ ಬೆಂಗಳೂರು ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ಮೇ.8ರಂದು ಹೊರಟಿರುವ ರೈಲು ಬೆಂಗಳೂರಿಗೆ ಶನಿವಾರ ರಾತ್ರಿ 10 ಗಂಟೆಗೆ ತಲುಪುವ ನಿರೀಕ್ಷೆಯಿದೆ. ಇದೇ ರೈಲು ಬೆಂಗಳೂರಿನಿಂದ ಸೋಮವಾರ ಮೇ.12 ರಂದು ಸಂಜೆ 5 ಗಂಟೆಗೆ ಹೊರಟು ದರ್ಭಾಂಗವನ್ನು ಬುಧವಾರ(ಮೇ.14) 1 ಗಂಟೆಗೆ ತಲುಪಲಿದೆ.

ಬಸ್ ವ್ಯವಸ್ಥೆ: ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನದಂದು ಕಾಲೇಜು ಬಸ್ ನಲ್ಲಿ ಸಂಚರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಜೆಸ್ಟಿಕ್ ನ ಶಾಂತಲಾ ಸಿಲ್ಕ್ ಹೌಸ್ ಬಳಿಯಿಂದ ಎರಡು ಬಸ್ ಗಳು ಅಭ್ಯರ್ಥಿಗಳನ್ನು ಕಾಲೇಜಿಗೆ ಕರೆದೊಯ್ಯಲಿದೆ. ಬೆಳಗ್ಗೆ 7.45ಕ್ಕೆ ಹೊರಡಲಿರುವ ಬಸ್ ಗಳು ಹೆಬ್ಬಾಳ, ಯಲಹಂಕ ಮಾರ್ಗವಾಗಿ ಕಾಲೇಜು ತಲುಪಲಿವೆ. ಪರೀಕ್ಷೆ ಮುಗಿದ ನಂತರ ಮೆಜೆಸ್ಟಿಕ್ ಗೆ ವಾಪಸ್ ಹೋಗಲಿವೆ.

ಎಸ್ ಜೆ ಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೂಡಾ ಇದೇ ರೀತಿ ಬಸ್ ವ್ಯವಸ್ಥೆ ಕಲ್ಪಿಸಿದೆ. ವಿವಿಧ ಸ್ಥಳಗಳಿಂದ 12ಕ್ಕೂ ಅಧಿಕ ಬಸ್ ಗಳು ಕಾಲೇಜಿಗೆ ಅಭ್ಯರ್ಥಿಗಳನ್ನು ಕರೆದೊಯ್ಯಲಿದೆ. ಹೆಚ್ಚಿನವಿವರಗಳನ್ನು ಕಾಮೆಡ್ ಕೆ ವೆಬ್ ತಾಣದಲ್ಲಿ ಪಡೆಯಬಹುದು.

English summary
COMEDK UGET 2014 examination will be held on 11th May 2014 across 134 centres across Karnataka. Train and Bus facility is providing to the candidates on the date of examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X