ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ್ ಗೊತ್ತಿಲ್ಲ? ಫೋನಿನಲ್ಲೇ ಕನ್ನಡ ಕಲಿಸಲು ಮುಂದಾದ ಯುವ ಬ್ರಿಗೇಡ್

|
Google Oneindia Kannada News

ಬೆಂಗಳೂರು, ನವೆಂಬರ್ 11: ಕರ್ನಾಟಕದಲ್ಲಿದ್ದೂ ಕನ್ನಡ ಮಾತನಾಡಲು ಬರದೆ ಪರದಾಡುತ್ತಿರುವವರಿಗಾಗಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರ ಯುವ ಬ್ರಿಗೆಡ್ ಫೋನ್ ಇನ್ ಕನ್ನಡ ತರಬೇತಿ ತರಗತಿಯನ್ನು ಆರಂಭಿಸಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ, "ಕರ್ನಾಟಕದಲ್ಲಿದ್ದು ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಆತಂಕಪಡುತ್ತಿದ್ದೀರಾ? ನಿಮಗೆ ಯುವ ಬ್ರಿಗೆಡ್ ಸಹಾಯ ಮಾಡಲಿದೆ. ನಮ್ಮ ಕಾರ್ಯಕರ್ತರು ನಿಮಗೆ ಪ್ರತಿದಿನ 15 ನಿಮಿಷ ಫೋನಿನಲ್ಲೇ ಕನ್ನಡ ಕಲಿಸುತ್ತಾರೆ. ತಡವೇಕೆ? ಈಗಲೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ" ಎಂದು ಟ್ವಿಟ್ಟರ್ ನಲ್ಲಿ ಸಂಪರ್ಕ ಸಂಖ್ಯೆಯನ್ನೂ ನೀಡಿದ್ದಾರೆ.

ಅಚ್ಚುಮೊಳೆಯಿಂದ ಕಂಪ್ಯೂಟರ್ ಕೀಲಿಮಣೆಯವರೆಗೆ.... ಕನ್ನಡ 'ಇ' ಲೋಕ ಬೆಳೆದಿದ್ದು.... ಅಚ್ಚುಮೊಳೆಯಿಂದ ಕಂಪ್ಯೂಟರ್ ಕೀಲಿಮಣೆಯವರೆಗೆ.... ಕನ್ನಡ 'ಇ' ಲೋಕ ಬೆಳೆದಿದ್ದು....

ಬೆಂಗಳೂರಿನಲ್ಲಿ ಕನ್ನಡಿಗರ ಹೊರತಾಗಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಹಿಂದಿ, ಗುಜರಾತಿ, ಮರಾಠಿ ಸೇರಿದಂತೆ ಹಲವಾರು ಭಾಷೆಗಳನ್ನು ಮಾತನಾಡುವವರು ಸಾಕಷ್ಟು ಜನರಿದ್ದಾರೆ. ಆದರೆ ಕನ್ನಡ ಭಾಷಿಕರನ್ನು ಹೆಚ್ಚಿಸುವ, ಆ ಮೂಲಕ ಕನ್ನಡವನ್ನು ಉಳಿಸುವ, ಬೆಳೆಸುವ ದೃಷ್ಟಿಯಿಂದ ಯುವ ಬ್ರಿಗೆಡ್ ಈ ಕೆಲಸಕ್ಕೆ ಮುಂದಾಗಿದೆ.

Columnist Chakravarty Sulibeles Yuva Brigade To Start Phone in Kannada Class

ಆದರೆ ಕರ್ನಾಟಕದಲ್ಲಿದ್ದರೂ ಕನ್ನಡ ಬಾರದ, ಮಾತನಾಡುವ ಆಸಕ್ತಿಯಿದ್ದರೂ ತರಗತಿಗೆ ಸೇರಿಕೊಳ್ಳಲು ಸಮಯವಿಲ್ಲದಿರುವವರಿಗಾಗಿ ಫೋನಿನಲ್ಲೇ ಕನ್ನಡ ಕಲಿಸುವ ಕೈಂಕರ್ಯಕ್ಕೆ ಯುವ ಬ್ರಿಗೆಡ್ ಮುಂದಾಗಿದೆ.

English summary
Columnist Chakravarty Sulibele's Yuva Brigade To Start Phone in Kannada Class For Non Kananadigas,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X