ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಸಂತೆಯಲ್ಲಿ ಕಲಾಪ್ರಿಯರ ಮಹಾತ್ಮ ಗಾಂಧಿ ಸ್ಮರಣೆ

|
Google Oneindia Kannada News

ಬೆಂಗಳೂರು, ಜನವರಿ 6: ಕಲಾವಿದರು ಹಾಗೂ ಕಲಾರಸಿಕರ ಸಂಗಮ ಕಲಾಪ್ರಿಯರಿಗೆ ಮುದಕೊಡುವ ಚಿತ್ರಕಲಾ ಪರಿಷತ್ ಹಮ್ಮಿಕೊಂಡಿದ್ದ 16 ನೇ ಚಿತ್ರಸಂತೆಗೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಚಾಲನೆ ನೀಡಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷವಾಗಿರುವುದರಿಂದ ಈ ಬಾರಿಯ ಚಿತ್ರ ಸಂತೆಯನ್ನು ಅವರಿಗೆ ಸಮರ್ಪಿಸಲಾಗಿದೆ. ಕಲಾಚಿತ್ರೋತ್ಸವದಲ್ಲಿ ಗಾಂಧೀಜಿಯವರ ಬಾಲ್ಯ, ಆದರ್ಶ, ಗುರಿ, ಸಾಧನೆ, ಜೀವನ, ತತ್ವಾದರ್ಶಗಳನ್ನು ಕಲಾಕೃತಿಗಳ ಮೂಲಕ ಪ್ರತಿಬಿಂಬಿಬಿಸಿದ್ದಾರೆ.

ಕಲಾ ಸಮುದಾಯದ ಕುಂಭಮೇಳ ಚಿತ್ರಸಂತೆ ಕಲಾವಿದರಿಗೆ ಬಲ ನೀಡಲಿ ಕಲಾ ಸಮುದಾಯದ ಕುಂಭಮೇಳ ಚಿತ್ರಸಂತೆ ಕಲಾವಿದರಿಗೆ ಬಲ ನೀಡಲಿ

ಚಿತ್ರಸಂತೆಯಲ್ಲಿ ದೇಶ ಹಾಗೂ ರಾಜ್ಯದ 1500ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದಾರೆ. ಕರ್ನಾಟಕದಿಂದ 500ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾಪ್ರತಿಗಳನ್ನು ಪ್ರದರ್ಶಿಸಿದ್ದಾರೆ. ನೋಂದಾಯಿತ ಕಲಾವಿದರಿಗೆ ಊಟ, ತಿಂಡಿ, ವಸತಿ, ನೀರು ಒದಗಿಸಲಾಗುತ್ತಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾದಿಂದ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದಾರೆ.

ಗಾಂಧಿ ಚಿತ್ರಗಳ ಸಂತೆ

ಗಾಂಧಿ ಚಿತ್ರಗಳ ಸಂತೆ

ಗಾಂಧಿ 150 ನೇ ವರ್ಷ ವಿಷಯದ ಮೇಲೆ ಈ ಬಾರಿಯ ಚಿತ್ರಸಂತೆ ನಡೆಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಚಿತ್ರಸಂತೆಗಳಲ್ಲಿ ಗಾಂಧಿಯ ಚಿತ್ರಗಳು ಆಕರ್ಷಿಸುತ್ತಿವೆ. ಚಿತ್ರಕಲಾ ಪರಿಷತ್‌ನ ಮುಖ್ಯ ಗ್ಯಾಲರಿಯಲ್ಲಿ ಗಾಂಧೀಜಿ ಜೀವನ ಕುರಿತು ಖ್ಯಾತ ಕಲಾವಿದರು, ಚಿತ್ರಿಸಿರುವ ಅದ್ಭುತ ಕಲಾಕೃತಿಗಳು ಕಂಗೊಳಿಸುತ್ತಿವೆ. ಚಿತ್ರ ಕಲಾವಿದರು ತಮ್ಮ ಕಲ್ಪನೆಗೆ ತಕ್ಕಂತೆ ಗಾಂಧೀಜಿಯನ್ನು ಚಿತ್ರಿಸಿದ್ದಾರೆ. ಪರಿಷತ್ತಿನ ಆವರಣದಲ್ಲಿಯೇ ಗಾಂಧಿ ಕುಟೀರವೆಂಬ ಇನ್ನೊಂದು ವಿಶೇಷ ವಲಯ ಸೃಷ್ಟಿಸಲಾಗಿದೆ. ಈ ಕುಟೀರದಲ್ಲಿ ಗಾಂಧೀಜಿ ಜೀವನ ಕುರಿತಂತೆ ಅಪರೂಪದ ಚಿತ್ರವನ್ನು ಇರಿಸಲಾಗಿದೆ. ಕುಟೀರದ ದ್ವಾರದಲ್ಲೇ ಗಾಂಧೀಜಿಯ ಆಕರ್ಷಕ ಪ್ರತಿಮೆಯನ್ನು ಇರಿಸಲಾಗಿದ್ದು, ಜನರ ಕಣ್ಮನ ಸೆಳೆಯುತ್ತಿದೆ. ಚಿತ್ರಕಲಾ ಪರಿಷತ್ ಪ್ರವೇಶ ದ್ವಾರದ ಬಳಿಯೂ ಗಾಂಧೀಜಿಯ ಆಕರ್ಷಕ ಪ್ರತಿಮೆ ಇರಿಸಲಾಗಿದೆ.

ರಂಗೋಲಿಯಲ್ಲಿ ಗಾಂಧಿ

ರಂಗೋಲಿಯಲ್ಲಿ ಗಾಂಧಿ

ಗಾಂಧಿ ಕುಟೀರದೊಳಗೆ ಕಲಾವಿದರೊಬ್ಬರು ರಂಗೋಲಿ ಮೂಲಕ ಗಾಂಧೀಜಿಯನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಇದು ಕಲಾಭಿಮಾನಿಗಳ ಗಮನ ಸೆಳೆಯುತ್ತಿದೆ.

16ನೇ ಚಿತ್ರ ಸಂತೆಗೆ ಸಿಕೆಪಿ ಸಜ್ಜು, ಗಾಂಧಿ ಪ್ರಮುಖ ಆಕರ್ಷಣೆ16ನೇ ಚಿತ್ರ ಸಂತೆಗೆ ಸಿಕೆಪಿ ಸಜ್ಜು, ಗಾಂಧಿ ಪ್ರಮುಖ ಆಕರ್ಷಣೆ

ಮೂವರಿಗೆ ಚಿತ್ರಕಲಾ ಸಮ್ಮಾನ್

ಮೂವರಿಗೆ ಚಿತ್ರಕಲಾ ಸಮ್ಮಾನ್

ಈ ವರ್ಷದಿಂದ ಆರಂಭಿಸಿರುವ ಡಿ. ದೇವರಾಜು ಅರಸು ಅವರ ಹೆಸರಿನ ಪ್ರಶಸ್ತಿಗೆ ಕಲಾವಿದರಾದ ಜೆಸು ರಾವಲ್ ಅವರನ್ನು ಆಯ್ಕೆಗೊಳಿಸಲಾಗಿದೆ. ಎಚ್‌ಕೆ ಕೆಜರಿವಾಲ್ ಪ್ರಶಸ್ತಿ ಹಾಗೂ ಎಂ ಆರ್ಯಮೂರ್ತಿ ಪ್ರಶಸ್ತಿಯನ್ನು ಕ್ರಮವಾಗಿ ಕಲಾವಿದರಾದ ಜೆಎಂಎಸ್ ಮಣಿ, ನೀಲಾ ಪಂಚ್ ಅವರಿಗೆ ನೀಡಲಾಗುತ್ತದೆ.

ಸಂಚಾರಿ ಎಟಿಎಂ ಸೌಲಭ್ಯ

ಸಂಚಾರಿ ಎಟಿಎಂ ಸೌಲಭ್ಯ

ಚಿತ್ರಸಂತೆಗೆ ಆಗಮಿಸುವ ಕಲಾಸಕ್ತರಿಗೆ ಆಂಬುಲೆನ್ಸ್ ,200 ಮಂದಿ ಭದರತಾ ಸಿಬ್ಬಂದಿ, ಕ್ರೆಡಿಟ್, ಡೆಬಿಟ್ ಕಾರ್ಡ್ ವ್ಯವಸ್ಥೆ, ಮೊಬೈಲ್ ಪೇಟಿಎಂ ವ್ಯವಸ್ಥೆಯೂ ಇದೆ. ಎಸ್‌ಬಿಐ ಬ್ಯಾಂಕ್‌ನ ಎರಡು ಸಂಚಾರಿ ಎಟಿಎಂಗಳು, ಕೆನರಾ ಬ್ಯಾಂಕ್‌ನ ಒಂದು ಸಂಚಾರಿ ಎಟಿಎಂ ಚಿತ್ರಕಲಾ ಪರಿಷತ್ ನ ಮುಂಭಾಗದಲ್ಲಿರುತ್ತದೆ. ಪರಿಷತ್ ಆವರಣದಲ್ಲಿರುವ ಕ್ಯಾಂಟೀನ್ ಸುತ್ತಮುತ್ತ ತಾತ್ಕಾಲಿಕ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. ನಾಲ್ಕು ಮೊಬೈಲ್ ಶೌಚಾಲಯ, ಆಯ್ದ ಸ್ಥಳಗಳಲ್ಲಿ ಕುಡಿಯುವ ನೀರಿನ ಘಟಕ ವ್ಯವಸ್ಥೆಕಲ್ಪಿಸಲಾಗಿದೆ.

ಗಾಂಧಿ ವಿರಮಿಸಿದ್ದ ಸ್ಥಳಗಳಲ್ಲಿ ಕುಟೀರ

ಗಾಂಧಿ ವಿರಮಿಸಿದ್ದ ಸ್ಥಳಗಳಲ್ಲಿ ಕುಟೀರ

ಗಾಂಧೀಜಿ ಬೆಂಗಳೂರಿಗೆ ಬಂದಾಗ ಅವರು ವಿರಮಿಸಿದ್ದ ಸ್ಥಳದಲ್ಲಿ ಬಿದಿರಿನ ಕುಟೀರ ನಿರ್ಮಿಸಿ ಪರಿಷತ್ತು ದೃಶ್ಯಕಲೆ ಮೂಲಕ ಅವರಿಗೆ ಗೌರವ ಅರ್ಪಿಸಲಾಗುತ್ತದೆ. ಕುಟೀರದಲ್ಲಿ ಗಾಂಧಿಯವರ ಛಾಯಾಚಿತ್ರಗಳ ಪ್ರದರ್ಶನವಿದೆ. ಗಾಂಧಿ ಅವರ ಕನ್ನಡದ ಮಾದರಿಯನ್ನು ಸುಮಾರು ಅಡಿ ಅಗಲದ ಲೋಹದಲ್ಲಿ ತಯಾರಿಸಲಾಗಿದೆ.

English summary
Chitra kala parishath organised colourful Chitrasante 2019, in the occassion of 150 Birth Anniversary of Mahatma Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X