ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ಹೋಟೆಲ್ ನಲ್ಲಿ 'ತಿಂಡಿ ತಿಂದೆ' ಎಂದ ಸಿಎಂಗೆ ಟ್ವಿಟ್ಟಿಗರ ಕಿವಿಮಾತು

|
Google Oneindia Kannada News

ಬೆಂಗಳೂರು, ಜ 12: ರೇಸ್ ಕೋರ್ಸ್ ರಸ್ತೆ ಬಳಿಯಿರುವ ಜನಾರ್ದನ ಹೋಟೆಲ್ ಮುಖ್ಯಮಂತ್ರಿ ಯಡಿಯೂರಪ್ಪನವರ ಫೇವರೇಟ್ ಅಡ್ಡಾ.. ಕೆಲಸದ ಜಂಜಾಟದ ನಡುವೆ ಅಲ್ಲಿ ಹೋಗಿ ಅವರು ಆವಾಗಾವಾಗ ಉಪಹಾರ ಸೇವಿಸುವುದುಂಟು.

ಕೆಲವು ದಿನಗಳ ಕೆಳಗೆ, ತಮ್ಮ ಸಂಪುಟ ಸಹದ್ಯೋಗಿಗಳ ಜೊತೆ ಸಿಎಂ ಲಾಲ್ ಬಾಗ್ ಬಳಿಯಿರುವ ಮಾವಳ್ಳಿ ಟಿಫಿನ್ ರೂಂ (ಎಂಟಿಆರ್) ನಲ್ಲೂ ತಿಂಡಿ ಸೇವಿಸಿದ್ದರು.

ಮುಂದಿನ ವಾರ ಸಂಪುಟ ವಿಸ್ತರಣೆ: ಸ್ಥಾನ ಕಳೆದುಕೊಳ್ಲಲಿರುವ 6 ಸಚಿವರ ಪಟ್ಟಿ?ಮುಂದಿನ ವಾರ ಸಂಪುಟ ವಿಸ್ತರಣೆ: ಸ್ಥಾನ ಕಳೆದುಕೊಳ್ಲಲಿರುವ 6 ಸಚಿವರ ಪಟ್ಟಿ?

ಮುಖ್ಯಮಂತ್ರಿಗಳು ಎಂದ ಮಾತ್ರಕ್ಕೆ ಬರೀ ಪಂಚತಾರಾ ಹೋಟೆಲ್ ನಲ್ಲೇ ಊಟ, ತಿಂಡಿ ಮಾಡಬೇಕೇಂದಿನಲ್ಲಾ. ಆದರೆ, ಜನಾರ್ದನ ಹೋಟೆಲ್ ನಲ್ಲಿ ತಿಂಡಿ ತಿಂದಿದ್ದನ್ನು, ಟ್ವಿಟ್ಟರ್ ನಲ್ಲಿ, ಫೋಟೋ ಸಮೇತ ಪೋಸ್ಟ್ ಹಾಕಿರುವುದು, ಕೆಲವು ಟ್ವಿಟ್ಟಿಗರ ಕಣ್ಣು ಕಾಯಿಸಿದೆ.

ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ರದ್ದುಗೊಳಿಸಿದ್ದು ಈ ಕಾರಣಕ್ಕಾ?ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ರದ್ದುಗೊಳಿಸಿದ್ದು ಈ ಕಾರಣಕ್ಕಾ?

ಹೋಟೆಲ್ ನಲ್ಲಿ ತಿಂಡಿ ತಿಂದಿದ್ದನ್ನು ತಮ್ಮ ವೈಯಕ್ತಿಕ ಅಕೌಂಟ್ ನಿಂದ ಪೋಸ್ಟ್ ಮಾಡದೇ ಸಿಎಂ ಅಕೌಂಟ್ ಮೂಲಕ ಹಾಕಿರುವುದಕ್ಕೆ ಟ್ವಿಟ್ಟಿಗರು ಕೆಲವೊಂದು ಕಿವಿಮಾತನ್ನು ಹೇಳಿದ್ದಾರೆ.

ಜನಾರ್ದನ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸೇವಿಸಿದ ಬಿಎಸ್ವೈ

ಜನಾರ್ದನ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸೇವಿಸಿದ ಬಿಎಸ್ವೈ

"ಮುಖ್ಯಮಂತ್ರಿ ಶ್ರೀ. ಬಿ.ಎಸ್. ಯಡಿಯೂರಪ್ಪ ಅವರು, ಸಂಜೆ (ಜ 11) ನಗರದ ಜನಾರ್ದನ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸೇವಿಸಿದರು" ಎಂದು @cmofkarnataka ಅಕೌಂಟ್ ನಿಂದ ಫೋಟೋ ಸಮೇತ ಟ್ವೀಟ್ ಮಾಡಲಾಗಿತ್ತು" ಅದಕ್ಕೆ @bsybjp ಹ್ಯಾಂಡಲ್ ಅನ್ನು ಟ್ಯಾಗ್ ಮಾಡಲಾಗಿತ್ತು.

ಫೈವ್ ಸ್ಟಾರ್ ಸಿಎಂ ಕುಮಾರಸ್ವಾಮಿ, ಕಾಮನ್ ಮ್ಯಾನ್ ಸಿಎಂ ಬಿಎಸ್ವೈ

ಫೈವ್ ಸ್ಟಾರ್ ಸಿಎಂ ಕುಮಾರಸ್ವಾಮಿ, ಕಾಮನ್ ಮ್ಯಾನ್ ಸಿಎಂ ಬಿಎಸ್ವೈ

ಮುಖ್ಯಮಂತ್ರಿಗಳ ಈ ಪೋಸ್ಟಿಗೆ ಟ್ವಿಟ್ಟಿಗರೊಬ್ಬರು ಸಣ್ಣ ಸಮೀಕ್ಷೆಯನ್ನೇ ನಡೆಸಿಬಿಟ್ಟರು. ಫೈವ್ ಸ್ಟಾರ್ ಸಿಎಂ ಕುಮಾರಸ್ವಾಮಿ, ಕಾಮನ್ ಮ್ಯಾನ್ ಸಿಎಂ ಯಡಿಯೂರಪ್ಪ, ಈ ಇಬ್ಬರಲ್ಲಿ ಯಾರನ್ನು ನಂಬಬಹುದು ಎನ್ನುವ ಸಮೀಕ್ಷೆ ಇದಾಗಿತ್ತು. ಇದಕ್ಕೆ ಬಿಎಸ್ವೈ ಪರವಾಗಿ ಶೇ. 72.7, ಕುಮಾರಸ್ವಾಮಿ ಪರವಾಗಿ ಶೇ. 27.3 ಫಲಿತಾಂಶ ಬಂತು. ಇನ್ನು, ಟ್ವಿಟ್ಟಿಗರ ಕೆಲವೊಂದು ಬುದ್ದಿಮಾತು, ಮುಂದಿನ ಸ್ಲೈಡಿನಲ್ಲಿದೆ..

ಇಂತಹದೆಲ್ಲಾ ಹಾಕಬೇಕಾ ?! ಯಾರು ಇದನ್ನು ಸಲಹೆ ಮಾಡಿದರೋ ಅವರನ್ನು‌ ದೂರಯಿಡಿ

ಇಂತಹದೆಲ್ಲಾ ಹಾಕಬೇಕಾ ?! ಯಾರು ಇದನ್ನು ಸಲಹೆ ಮಾಡಿದರೋ ಅವರನ್ನು‌ ದೂರಯಿಡಿ

ಇಂತಹದೆಲ್ಲಾ ಹಾಕಬೇಕಾ ?! ಯಾರು ಇದನ್ನು ಸಲಹೆ ಮಾಡಿದರೋ ಅವರನ್ನು‌ ದೂರಯಿಡಿ.‌ ನಿಮ್ಮ‌ಹಲವು ಉತ್ತಮ‌ ಕೆಲಸ ಕಾರ್ಯಗಳನ್ನು , ಬಡವರ ಭೇಟಿ ಮಾಡಿ ಅವರಿಗೆ ಸಹಕರಿಸುವುದನ್ನೋ , ಸ್ಲಮ್ ಗಳಿಗೆ ಭೇಟಿ ನೀಡಿ ಅವರ ಕಷ್ಟಸುಖಗಳನ್ನು ಕೇಳುತ್ತಿರುವುದೋ ಹಾಕಿ. ಅಂದ ಹಾಗೆ ಈ ಟ್ವಿಟರ್ ಗೆ ನಾವು ಬರೆದದ್ದು ನಿಮಗೆ ತಲುಪತ್ತೊ ? ಸಲಹೆಗಳು ಬಂದರೆ ಓದಿ.

ಸ್ಟೇಟ್ ಡೆವಲಪ್ಮೆಂಟ್ ಬಗ್ಗೆ ಮಾಹಿತಿ ನೀಡಿ ಅಂದ್ರೆ

ಸ್ಟೇಟ್ ಡೆವಲಪ್ಮೆಂಟ್ ಬಗ್ಗೆ ಮಾಹಿತಿ ನೀಡಿ ಅಂದ್ರೆ

"ಸ್ಟೇಟ್ ಡೆವಲಪ್ಮೆಂಟ್ ಬಗ್ಗೆ ಮಾಹಿತಿ ನೀಡಿ ಅಂದ್ರೆ, CM ಉಪಾಹಾರ ಸೇವಿಸಿದ್ರು, ಅಲ್ಲಿದ್ದ ಶೌಚಾಲಯಕ್ಕೆ ಹೋದರು ಅಂತ ಹಾಕುತ್ತಿರಲ್ಲ, ಎನ್ ಹೇಳಬೇಕು". "ತಿಂಡಿ ತಿಂದ ಮೇಲೆ ಮುಖ್ಯಮಂತ್ರಿಗಳು ಅದರ ದುಡ್ಡನ್ನು ಕೊಟ್ರಾ" ಎಂದು ಟ್ವಿಟ್ಟಿಗರೊಬ್ಬರು ಕೇಳಿದ್ದಾರೆ.

ಇದನ್ನೂ @tweet ಮಾಡಬೇಕಾ ? ಇದೂ ಒಂದು ಸುದ್ದಿಯಾ ಸ್ವಾಮಿ

ಇದನ್ನೂ @tweet ಮಾಡಬೇಕಾ ? ಇದೂ ಒಂದು ಸುದ್ದಿಯಾ ಸ್ವಾಮಿ

"ಇದನ್ನೂ @tweet ಮಾಡಬೇಕಾ ? ಇದೂ ಒಂದು ಸುದ್ದಿಯಾ ಸ್ವಾಮಿ", "ಏನು ಉಪಾಹಾರ ಸೇವಿಸಿದು ದೊಡ್ಡ ಸುದ್ದಿ, ರೈತರ ಹಾಗೂ ಕಾರ್ಮಿಕರ ಕುಂದು ಕೊರತೆ ಬಗ್ಗೆ ಗಮನ ಹರಿಸಿ ಸುದ್ದಿ ಪ್ರಕಟಿಸಿ ಸರಿ ಪಡಿಸಿ", "ಹಾಗೆ ಸರ್ಕಾರಿ ವಸತಿ ನಿಲಯಗಳು ಹಾಗೂ ಸರ್ಕಾರಿ ಕ್ಯಾಂಟೀನ್ ಗಳಲ್ಲೂ ಊಟಮಾಡಿ ಅಲ್ಲಿನ ಸಿಬ್ಬಂದಿಗಳಿಗೆ ಒಳ್ಳೆಯ ಊಟವನ್ನು ಪ್ರತಿದಿನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳು ಆದೇಶಿಬೇಕಾಗಿ ಮನವಿ" ಈ ರೀತಿಯ ಪ್ರತಿಕ್ರಿಯೆಗಳು ಸಿಎಂ ಟ್ವೀಟಿಗೆ ಬಂದಿದೆ.

English summary
Chief Minister Yediyurappa Tweet About Had Food In Hotel And Twitterite Reply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X