• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೊಳ್ಳೆ ಸುದ್ದಿ: 2ನೇ ಬಾರಿ ಕೊರೊನಾ ಗೆದ್ದ ಸಿಎಂ ಯಡಿಯೂರಪ್ಪ

|

ಬೆಂಗಳೂರು, ಏಪ್ರಿಲ್ 22: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕಿನ ಎರಡು ಅಲೆಗಳನ್ನು ಎದುರಿಸಿ ಯಡಿಯೂರಪ್ಪ ಅವರು ಜಯಿಸಿದ್ದಾರೆ.

ಯಡಿಯೂರಪ್ಪ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಡಿಸ್ಚಾರ್ಜ್ ಮಾಡಲಾಗಿದೆ, ಯಡಿಯೂರಪ್ಪ ಅವರ ಮೊಮ್ಮಗಳು ಕೂಡಾ ಗುಣಮುಖರಾಗಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ತಿಳಿಸಿದೆ.

ಆಸ್ಪತ್ರೆಯಿಂದ ನೇರವಾಗಿ ತಮ್ಮ ಅಧಿಕೃತ ನಿವಾಸ ಕಾವೇರಿಗೆ ಯಡಿಯೂರಪ್ಪ ತೆರಳಿದ್ದು, ಇದಕ್ಕೂ ಮುನ್ನ ಮಾತನಾಡಿ, ಕೊರೊನಾ ಸೋಂಕು ಎಲ್ಲೆಡೆ ವೇಗವಾಗಿ ಹಬ್ಬುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಳ್ಳಿ, ಅನಗತ್ಯವಾಗಿ ಹೊರಗಡೆ ಓಡಾಡಬೇಡಿ. ಕರ್ಫ್ಯೂ ನಿಯಮಗಳನ್ನು ಪಾಲಿಸಿ ಎಂದರು.

ವಿಶ್ರಾಂತಿ ಅಗತ್ಯವಿಲ್ಲ: ನಾನು ಈಗಾಗಲೇ ಅಗತ್ಯ ವಿಶ್ರಾಂತಿ ಪಡೆದಿದ್ದೇನೆ, ವೈದ್ಯರ ಸಲಹೆಯಂತೆ ನಡೆದುಕೊಂಡಿದ್ದೇನೆ, ಇಂದು ಸಂಜೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.

   Vaccination ಮಾಡಿಸಿದರೆ ನಿಮಗಾಗುವ ಉಪಯೋಗವೇನು ಗೊತ್ತಾ | Oneindia Kannada

   ಗುರುವಾರ ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ನೈಟ್ ಕರ್ಫ್ಯೂ, ಹೊಸ ಮಾರ್ಗಸೂಚಿ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.

   English summary
   Karnataka CM Yediyurappa Recovered from Covid-19, Discharged from Manipal Hospital, Bengaluru today(April 22).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   loader
   X