ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ: ಪರಿಹಾರ ಪ್ಯಾಕೇಜ್ ಬಗ್ಗೆ ಬಿಎಸ್ವೈ ಮೌನ

|
Google Oneindia Kannada News

ಬೆಂಗಳೂರು, ಮೇ 13: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಂದ ಒಂದಿಲ್ಲೊಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಕೊರೊನಾ ನಿಯಂತ್ರಣಕ್ಕೆ ಜನತಾ ಕರ್ಫ್ಯೂ ಜಾರಿಗೆ ತರಲಾಗಿತ್ತು, ನಂತರ ಸಂಪೂರ್ಣ ಅಲ್ಲದಿದ್ದರೂ ತಕ್ಕಮಟ್ಟಿಗೆ ಲಾಕ್‌ಡೌನ್ ಘೋಷಿಸಲಾಗಿದೆ.

ಈ ಲಾಕ್‌ಡೌನ್ ನಿಂದ ಸೋಂಕು ಪ್ರಕರಣ ಸಂಖ್ಯೆಯಲ್ಲಿ ಅಷ್ಟೇನೂ ವ್ಯತ್ಯಾಸ ಕಂಡುಬಂದಿಲ್ಲ. ಆದರೆ, ಈ ಲಾಕ್‌ಡೌನ್ ನಿಂದಾಗಿ ಕೈಗಾರಿಕೆಗಳು, ವ್ಯಾಪಾರಿಗಳು, ಬಡವರು, ರೈತರ ಸಂಕಷ್ಟ ಅನುಭವಿಸುವಂತಾಗಿದೆ.

ಹೀಗಾಗಿ ಇಂದು (ಗುರುವಾರ) ಸಿಎಂ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಸಂಪುಟ ಸಹೋದ್ಯೋಗಿಗಳಾದ ಆರ್ ಅಶೋಕ, ಅಶ್ವಥನಾರಾಯಣ, ಸುಧಾಕರ್ ಅವರ ಉಪಸ್ಥಿತಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ, ಕೋವಿಡ್-19 ನಿಯಂತ್ರಣದ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಮುಖ್ಯಮಂತ್ರಿಗಳ ಸುದ್ದಿಗೋಷ್ಠಿಯ ಪ್ರಮುಖಾಂಶಗಳು

ಮುಖ್ಯಮಂತ್ರಿಗಳ ಸುದ್ದಿಗೋಷ್ಠಿಯ ಪ್ರಮುಖಾಂಶಗಳು

ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇವತ್ತು ಕೇವಲ ಕೊವಿಡ್-19ರ ಬಗ್ಗೆೆ ಜನರಿಗೆ ಮಾಹಿತಿ ಕೊಡುವುದು ಪ್ರಮುಖ ಉದ್ದೇಶವಾಗಿದೆ. ಕೊವಿಡ್ ಸೋಂಕು ನಿಯಂತ್ರಣಕ್ಕಾಾಗಿ ರಾಜ್ಯದಲ್ಲಿ ಏಪ್ರಿಲ್ 24 ರಿಂದ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಅಲ್ಲದೆ, ಮೇ 10 ರಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.

ರಾಜ್ಯದಲ್ಲಿ ಮೇ 5 ರಂದು ಗರಿಷ್ಠ 50,112 ಪ್ರಕರಣಗಳು ವರದಿಯಾಗಿದ್ದು, ಕಠಿಣ ಕ್ರಮದಿಂದ 39,900ಕ್ಕೆೆ ಇಳಿದಿದೆ. ಇದು ಸಮಾಧಾನದ ಸಂಗತಿಯಾಗಿದ್ದು, ನಿರ್ಬಂಧದಿಂದ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣ ಕಾಣುತ್ತಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಬೆಂಗಳೂರಿನಲ್ಲಿ ಮೇ 6ರಂದು 23,000 ಪ್ರಕರಣ ಇದ್ದವು. ಬುಧವಾರದಂದು ಅದು 16,280ಕ್ಕೆೆ ಇಳಿಕೆಯಾಗಿದೆ. ಪ್ರಾರಂಭದಲ್ಲಿ ಮರಣದ ಸಂಖ್ಯೆ ಬೆಂಗಳೂರು ಮತ್ತು ಕಲಬುರಗಿಯಲ್ಲಿ ಪಾಸಿಟಿವ್ ದರ ಕಡಿಮೆಯಾಗುತ್ತಿದೆ.

ರಾಜ್ಯಕ್ಕೆ ಆಮ್ಲಜನಕ ಪೂರೈಕೆ

ರಾಜ್ಯಕ್ಕೆ ಆಮ್ಲಜನಕ ಪೂರೈಕೆ

ಕಳೆದ ವರ್ಷ ಮಾರ್ಚ್‌ನ‌ಲ್ಲಿ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ 1970 ಆಕ್ಸಿನೇಟೆಡ್ ಬೆಡ್‌ಗಳು, 444 ಐಸಿಯುಗಳು, 676 ವೆಂಟಿಲೇಟರ್ ಗಳು ಇದ್ದವು. ಪ್ರಸ್ತುತ 24,000 ಆಕ್ಸಿನೇಟೆಡ್ ಬೆಡ್‌ಗಳು, 1185 ಐಸಿಯು ಬೆಡ್‌ಗಳು, 2019 ವೆಂಟಿಲೇಟರ್‌ಗಳು, 1348 ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ, 4700 ರಿಂದ 9708ಕ್ಕೆ ಹೆಚ್ಚಿಸಲಾಗಿದೆ. ವೆಂಟಿಲೇಟರ್ 348 ರಿಂದ 646ಕ್ಕೆ ಹೆಚ್ಚಿಸಲಾಗಿದೆ. ಆಸ್ಪತ್ರೆಗಳ ಮೂಲ ಸೌಕರ್ಯ ಹೆಚ್ಚಿಸುವ ಕಾರ್ಯ ಮುಂದುವರೆದಿದೆ. ವೆಂಟಿಲೇಟರ್ ಹಾಗೂ ಇತರ ಸೌಲಭ್ಯ ನಿರಂತರ ಹೆಚ್ಚಳವಾಗುತ್ತಿವೆ ಎಂದು ಸಿಎಂ ಮಾಹಿತಿ ನೀಡಿದರು.

ಖಾಸಗಿ ವೈದ್ಯಕೀಯ ಆಸ್ಪತ್ರೆಗಳು, ಆಕ್ಷಿಜನ್ ಉತ್ಪಾದನೆ ಮಾಡುವ ಆಸ್ಪತ್ರೆಗಳಲ್ಲಿ ಶೇ.70ರಷ್ಟು ಸರ್ಕಾರ ವೆಚ್ಚ ಭರಿಸುತ್ತಿದೆ. ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ. ಆಕ್ಸಿಜನ್ ಜರನೇಟರ್ ಮೂಲಕ ಆಮ್ಲಜನಕ ಉತ್ಪಾದನೆ. ಆಕ್ಸಿನೇಟರ ಮೂಲಕ ಕಾನ್ಸಂಟ್ರೆೆಟರ್ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಪ್ರಯತ್ನ ಮಾಡಲಾಗಿದೆ ಎಂದರು.

ರಾಜ್ಯದಲ್ಲಿಯೂ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೆಚ್ಚಳ

ರಾಜ್ಯದಲ್ಲಿಯೂ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೆಚ್ಚಳ

ಕೇಂದ್ರ ಸರ್ಕಾರ 965 ಮೆ. ಟನ್ ನಿಂದ 1100ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿಯೇ 750 ಮೆ. ಟನ್ ದೊರೆಯತ್ತಿದೆ. ವಿಶಾಖಪಟ್ಟಣದಿಂದ 30 ಮೆ.ಟನ್ ದೊರೆಯತ್ತಿದೆ. ಇತರ ರಾಜ್ಯಗಳಿಂದ ದೊರೆಯುವ ಆಮ್ಲಜನಕ ಪಡೆಯಲಾಗಿದೆ. ಬಹ್ರೇನ್ 40, ಕುವೈತ್‌ನಿಂದ 100, ಜೇಮಷೆಡ್ ಪುರದಿಂದ ಟ್ರೇನ್ ಮೂಲಕ 120 ಮೆ.ಟನ್ ಆಮ್ಲಜನಕ ತರಲಾಗಿದೆ. ರಾಜ್ಯದಲ್ಲಿಯೂ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆೆ ಕ್ರಮ ಕೈಗೊಳ್ಳಲಾಗುತ್ತಿದೆ. 120 ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಲಾಗಿದೆ. 65 ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ, 20 ಕೇಂದ್ರ, 20 ಎನ್‌ಎಸ್‌ಯುಐ, ಬೇರೆ ಸಂಸ್ಥೆೆಗಳ ಮೂಲಕವೂ ಪಡೆಯಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

3 ಲಸಿಕೆ ಆರ್ಡರ್ ಮಾಡಿದ್ದೇವೆ

3 ಲಸಿಕೆ ಆರ್ಡರ್ ಮಾಡಿದ್ದೇವೆ

ಓಲಾ ಮತ್ತು ಉಬರ್ 1 ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡುತ್ತಿರುವುದು ಸ್ವಾಗತಾರ್ಹ. ಸಂಚಾರಿ ಆಕ್ಸಿಲೇಟರ್ ಸೂಕ್ತವಾಗಿ ನೆರವಾಗುತ್ತಿವೆ. 10 ಸಾವಿರದವರೆಗೆ ಆಕ್ಸಿಜನ್ ಸಿಲಿಂಡರ್ ಪಡೆಯಲು ತೀರ್ಮಾನಿಸಲಾಗಿದೆ. 730 ಸಿಲಿಂಡರ್ ಕಳೆದ 10 ದಿನದಲ್ಲಿ ಪಡೆಯಲಾಗಿದೆ. 380 ಕೇಂದ್ರ ಸರ್ಕಾರ ಉಳಿದವರು ವಿದೇಶಗಳಿಂದ ಪಡೆಯಲಾಗಿದೆ. 3000 ಆಕ್ಸಿಜನ್ ಕಾನ್ಸಂಟ್ರೆೆಟರ್‌ಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದರು. ಇನ್ನೂ 7 ಸಾವಿರ ಕಾನ್ಸಂಟ್ರೇಟರ್ ಹಂಚಿಕೆ ಮಾಡಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರ ಲಸಿಕೆ ಹಂಚಿಕೆ ಮಾಡುತ್ತಿದೆ. 9 ಲಕ್ಷ ಕೋವಿಶೀಲ್ಡ್, 18 ರಿಂದ 44 ವರ್ಷದವರಿಗೆ ಲಸಿಕೆ ನೀಡಲು 3 ಕೋಟಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. 2 ಕೋಟಿ ಕೋವಿಶೀಲ್ಡ್ ಹಾಗೂ 1 ಕೋಟಿ ಕೊವ್ಯಾಕ್ಸಿನ್ ಆರ್ಡರ್ ಮಾಡಿದ್ದೇವೆ ಎಂದು ತಿಳಿಸಿದರು.

ಪರಿಹಾರ ಪ್ಯಾಕೇಜ್ ಬಗ್ಗೆ ಚಕಾರವೆತ್ತದ ಸಿಎಂ

ಪರಿಹಾರ ಪ್ಯಾಕೇಜ್ ಬಗ್ಗೆ ಚಕಾರವೆತ್ತದ ಸಿಎಂ

3.5 ಲಕ್ಷ ಕೋವಿಶೀಲ್ಡ್, 1.4 ಕೊವ್ಯಾಕ್ಸಿನ್ ಒಟ್ಟು 8.4 ಲಕ್ಷ ಲಸಿಕೆಗಳು ಸದ್ಯ ಲಭ್ಯವಿದೆ ಎಂದು ಇದೇ ವೇಳೆ ಹೇಳಿದ ಸಿಎಂ ಯಡಿಯೂರಪ್ಪ, 14 ಲಕ್ಷ ಫಲಾನುಭವಿಗಳು ಎರಡನೇ ಲಸಿಕೆಗೆ ಅರ್ಹರಾಗಿದ್ದಾರೆ ಎಂದರು. ಏ.20 ರಿಂದ ಮೇ 9 ರವರೆಗೆ 3.01 ಲಕ್ಷ ರೆಮ್ಡೆಸಿವಿಯರ್ ಔಷಧವನ್ನು ಕೇಂದ್ರ ಸರ್ಕಾರ ಸರಬರಾಜು ಮಾಡಿದೆ. ರಾಜ್ಯದಲ್ಲಿ ರೆಮ್ಡೆಸಿವಿಯರ್ ಬೇಡಿಕೆ ಹೆಚ್ಚಿರುವ ಕಾರಣ, ಇನ್ನೂ ಹೆಚ್ಚಿಸುವಂತೆ ಕೇಂದ್ರಕ್ಕೆೆ ಮನವಿ ಮಾಡಿದ್ದೇವೆ. ಸಮಾನವಾಗಿ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ ಮಾಡಿದ್ದು, ಕಠಿಣ ಕ್ರಮ ಕೈಗೊಂಡ ನಂತರ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಜನತೆ ಎಲ್ಲ ನಿರ್ಬಂಧಗಳನ್ನು ಸ್ವೀಕರಿಸಿ ಅಗತ್ಯವಿದ್ದಾಗ ಮಾತ್ರ ಸಂಚರಿಸಲು ಮನವಿ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

English summary
Karnataka CM Yediyurappa Press Meet Highlights on managing and controlling Covid-19 in the state. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X