ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕದಲ್ಲಿ ಕರ್ನಾಟಕದ ಹಿರಿಮೆ ಹೆಚ್ಚಿಸಿದ ವೈದ್ಯೆ: ಸಿಎಂ ಅಭಿನಂದನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ಅಮೆರಿಕದಲ್ಲಿ 'ಡ್ರೈವ್ ಆಫ್ ಹಾನರ್' ಪಡೆದ ಮೈಸೂರು ಮೂಲದ ವೈದ್ಯೆ ಉಮಾ ಮಧುಸೂಧನ್ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಉಮಾ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

''ದೂರದ ಅಮೆರಿಕೆಯಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರು ಮೂಲದ ಕನ್ನಡತಿ ಡಾ.ಉಮಾ ಮಧುಸೂದನ್ ಅಲ್ಲಿನ ಜನರ ಹಾಗೂ ಸರಕಾರದ ಮೆಚ್ಚುಗೆಗೆ ಪಾತ್ರರಾಗಿ 'ಡ್ರೈವ್ ಆಫ್ ಹಾನರ್ ' ವಿಶೇಷ ಗೌರವ ಪಡೆದುಕೊಳ್ಳುತ್ತಿದ್ದಾರೆ. ಸೇವೆ, ಸಮರ್ಪಣೆ ನಮ್ಮ ಕನ್ನಡನಾಡಿನ ಹಿರಿಮೆ ಎಂದು ಸಾರುತ್ತಿರುವ ಈ ಹೆಣ್ಣು ಮಗಳನ್ನು ಅಭಿನಂದಿಸುವೆ.'' ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

 CM Yediyurappa Congratulates Doctor Uma Madhusudan

ಕೊರೊನಾ ಚಿಕಿತ್ಸೆ; ಮೈಸೂರು ಮೂಲದ ವೈದ್ಯೆ ಡಾ. ಉಮಾರಿಗೆ ಅಮೆರಿಕದಲ್ಲಿ ಕೃತಜ್ಞತೆ! ಕೊರೊನಾ ಚಿಕಿತ್ಸೆ; ಮೈಸೂರು ಮೂಲದ ವೈದ್ಯೆ ಡಾ. ಉಮಾರಿಗೆ ಅಮೆರಿಕದಲ್ಲಿ ಕೃತಜ್ಞತೆ!

ಮೈಸೂರು ಮೂಲದ ಡಾ ಉಮಾ ಮಧುಸೂಧನ್ ಅಮೆರಿಕದಲ್ಲಿ ಕೊರೊನಾ ತಡೆಗೆ ಶ್ರಮಿಸಿದ್ದಾರೆ. ಅಮೆರಿಕದ ಸೌತ್ ವಿಂಡ್ಸರ್‌ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಕೆಲಸವನ್ನು ಅಮೆರಿಕ ಸರ್ಕಾರ ಗುರುತಿಸಿ, ವಿಶೇಷ ಗೌರವ ನೀಡಿದೆ.

ಡಾ. ಉಮಾ ಅವರ ಮನೆಯ ಎದುರು ಹತ್ತಾರು ಕಾರುಗಳಲ್ಲಿ ಪರೇಡ್ ನಡೆಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಡಾ. ಉಮಾ ಮಧುಸೂಧನ್ ಅವರನ್ನು, "Dr Uma Madhusudhana has been recognized as one of the South Windsor's Unsung heroes' ಎಂಬ ಸಂದೇಶದೊಂದಿಗೆ ಗೌರವಿಸಲಾಗಿದೆ. ಉಮಾ ಅವರ ಸೇವೆಯನ್ನು ಮೆಚ್ಚಿರುವ ಅಲ್ಲಿನ ಸ್ಥಳಿಯರು ಹಾಗೂ ಸರ್ಕಾರ ವಿಶೇಷವಾಗಿ ಪರಿಗಣಿಸಿ 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಸಿದ್ದಾರೆ.

ಡಾ. ಉಮಾರಾಣಿ ಮಧುಸೂದನ್ ಅವರು ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 1997ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ.

English summary
CM Yediyurappa congratulates doctor Uma Madhusudan. The doctor got tribute from america government as Drive Of Honour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X