ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾತೃಹೃದಯಿ ಮಹಿಳಾ ಪೇದೆ ಅಭಿನಂದಿಸಲು ಮುಂದಾದ ಕುಮಾರಸ್ವಾಮಿ

By Nayana
|
Google Oneindia Kannada News

ಬೆಂಗಳೂರು, ಜೂನ್ 6: ಅನಾಥ ಮಗುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್‌ ಠಾಣೆಯ ಪೇದೆ ಅರ್ಚನಾ ಅವರನ್ನು ಅಭಿನಂದಿಸಲು ಎಚ್‌ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ.

ಆಗ ತಾನೇ ಜನಿಸಿದ್ದ ಮಗುವನ್ನು ಯಾರೋ ಕಟುಕರು ದೊಡ್ಡತೂಗೂರಿನ ತೊಟ್ಟಿಯೊಂದರಲ್ಲಿ ಎಸೆದು ಹೋಗಿದ್ದರು. ಅದನ್ನು ನೋಡಿದ್ದ ಸ್ಥಳೀಯರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣವೇ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಧಾವಿಸಿದ್ದ ಕಾನ್‌ಸ್ಟೆಬಲ್ ಅರ್ಚನಾ ಮಗುವನ್ನು ಕೈಗೆತ್ತಿಕೊಂಡಿದ್ದರು.

ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್ ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್

ಅನಾಥ ಶಿಶು ಪತ್ತೆಯಾಗಿದೆ ಎಂದು ತಿಳಿಯುತ್ತಿದ್ದಂತೇ ಕಾನ್‌ಸ್ಟೆಬಲ್ ಅರ್ಚನಾ ಅವರು ಖುದ್ದಾಗಿ ಮಗುವನ್ನು ಕರೆತರಲು ಹೊಯ್ಸಳ ವಾಹನದಲ್ಲಿ ತೆರಳಿದ್ದರು.

ನಂತರ ಮಗು ಅಳಲಾರಂಭಿಸಿತ್ತು. ಮಗುವಿನ ಜತೆಗೆ ವಾಹನದೊಳಗೆ ತೆರಳಿ ಮಗುವಿಗೆ ಎದೆಹಾಲು ಉಣಿಸಿ ಅದಕ್ಕೆ ಮರುಜೀವ ನೀಡಿದ್ದರು.

CM wish to meet Lady constable who breast feed Orphan baby

ಅರ್ಚನಾ ಎಲೆಕ್ಟ್ರಾನಿಕ್‌ ಸಿಟಿಯ ಪೊಲೀಸ್‌ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಂತರ ವಾಹನದಲ್ಲೇ ಶಿಶುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಮಗುವನ್ನು ವಿಲ್ಸನ್‌ ಗಾರ್ಡನ್‌ನಲ್ಲಿರುವ ಶಿಶುಗೃಹಕ್ಕೆ ನೀಡಲಾಗಿದೆ. ಆ ಮಗುವಿಗೆ ಕುಮಾರಸ್ವಾಮಿ ಎಂದೂ ನಾಮಕರಣ ಮಾಡಲಾಗಿದೆ. ಮಹಿಳಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಅರ್ಚನಾ ಅವರ ಭೇಟಿಗೆ ಮುಂದಾಗಿದ್ದಾರೆ.

English summary
Chief minister H.D.Kumaraswamy has said he will meet lady constable Archana at electronic city police station who had breast feed with an orphan baby recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X