ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ. ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕಾಲ ಕೂಡಿ ಬಂತು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 24: ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುವುದು ಯಾವಾಗ...? ಇದು ವಿಷ್ಣು ಅಭಿಮಾನಿಗಳು ಬಹುದಿನಗಳಿಂದ ಕೇಳುತ್ತಿದ್ದ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಿ. 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಂಗಳವಾರ ಭಾರತೀ ವಿಷ್ಣುವರ್ಧನ್ ಸುದ್ದಿಗೋಷ್ಠಿ ಕರೆದು ಈ ಕುರಿತು ತಿಳಿಸಿದ್ದಾರೆ. ವಿಷ್ಣುವರ್ಧನ್ ಪುಣ್ಯ ಸ್ಮರಣೆ ಅಂಗವಾಗಿ ಅಂದು ಅಭಿಮಾನ್ ಸ್ಟುಡಿಯೋದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರೋಗ್ಯ ತಪಾಸಣೆ ಶಿಬಿರವನ್ನೂ ನಡೆಸಲಾಗುವುದು ಎಂದು ತಿಳಿಸಿದರು. [ವಿಷ್ಮು ಪ್ರೀತಿ, ಸ್ನೇಹ ನನ್ನ ಜೀವಮಾನದ ಸಾಧನೆ]

vishnu

ಸಾಹಸಸಿಂಹ ಕಾಮಿಕ್ ಪುಸ್ತಕ : ನಟ ಅನಿರುದ್ಧ ಮಾತನಾಡಿ, ಈ ವರ್ಷ 2ನೇ ಸಾಹಸಸಿಂಹ ಕಾಮಿಕ್ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಮನೋರಂಜನೆಯ ಜೊತೆ ನೈತಿಕ ಪಾಠವೂ ಸಿಗಲಿದೆ ಎಂದರು. [ಡಾ. ರಾಜ್ ನಂತರ ಯಾರು : ಹೈ ಕೋರ್ಟ್]

ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ಈಗ ಎರಡು ಎಕರೆ ಭೂಮಿ ಸಿಕ್ಕಿದೆ. ಇನ್ನೂ ಮೂರು ಎಕರೆ ಭೂಮಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಅನಿರುದ್ಧ ವಿವರಿಸಿದರು. [ಡಾ. ವಿಷ್ಣು ಸ್ಮಾರಕಕ್ಕೆ ಸರ್ಕಾರದಿಂದ ಭೂಮಿ ಹಸ್ತಾಂತರ]

ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ ಒಂದು ಭಾಗವಾಗಿ ಸ್ಮಾರಕದ ಕಾರ್ಯಚಟುವಟಿಕೆಗಳು ನಡೆಯಲಿವೆ ಎಂದು ಅನಿರುದ್ಧ ತಿಳಿಸಿದ್ದಾರೆ.

English summary
CM Siddaramaiah will lay the foundation stone for Dr. Vishnuvardhan memorial in Abhimaan studio on Dec 30. Many programmes and health check up are also held at the venue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X