ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಕೋರ್ಟ್‌ನಿಂದ ಹೇಳಿಸಿಕೊಳ್ಳಬಾರದು: ಸಿಎಂ ವಾರ್ನಿಂಗ್

|
Google Oneindia Kannada News

Recommended Video

ಬಿಬಿಎಂಪಿ ಗೆ ವಾರ್ನಿಂಗ್ ಮಾಡಿದ ಸಿ ಎಂ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಸೆ.26: ಬಿಬಿಎಂಪಿಯು ಹೈಕೋರ್ಟ್‌ನಿಂದ ಹೇಳಿಸಿಕೊಂಡು ಕೆಲಸ ಮಾಡಬಾರದು ತನ್ನ ಕರ್ತವ್ಯವನ್ನು ತಾನೇ ಅರಿತು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಸ್ವಚ್ಛತೆಯನ್ನು ಕಾಪಾಡಲು ಫ್ಲೆಕ್ಸ್, ಬ್ಯಾನರ್ ತೆರವು , ಜನರ ಪ್ರಾಣವನ್ನು ಉಳಿಸಲು ರಸ್ತೆಗುಂಡಿ ಭರ್ತಿ ಕಾರ್ಯವೇ ಆಗಿರಲಿ ಇದು ಬಿಬಿಎಂಪಿಯ ಕೆಲಸ ಅದನ್ನು ಕೋರ್ಟ್ ನಿಂದ ಹೇಳಿಕೊಂಡು ಮಾಡಬಾರದಿತ್ತು ತಾವಾಗಿಯೇ ಮಾಡಿದ್ದರೆ ಜನರ ಪ್ರಶಂಸೆಗೆ ಪಾತ್ರವಾಗುತ್ತಿತ್ತು ಎಂದು ಅಭಿಪ್ರಾಯ ಪಟ್ಟರು.

ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್ ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್

ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು, ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿದರು.

CM warns against BBMP sorry status of administration objected by HC

ಬಿಬಿಎಂಪಿ ಶಾಲೆಯ ಗುಣಮಟ್ಟದ ವಿಚಾರ ಕುರಿತು ಮಾತನಾಡಿದ ಅವರು, ಬಿಬಿಎಂಪಿ ಶಾಲೆಗಳಿಗೆ ಸಧ್ಯದಲ್ಲೇ ಬೇಟಿ ನೀಡುತ್ತೇವೆ, ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತೇವೆ, ಈ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕೊಡಲು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 500 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಇನ್ನೆರಡು ದಿನ ಮುಂದುವರಿಯುವ ಸೂಚನೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಇನ್ನೆರಡು ದಿನ ಮುಂದುವರಿಯುವ ಸೂಚನೆ

ಬಸ್ ಪ್ರಯಾಣ ದರ ಏರಿಕೆ ವಿಚಾರದ ಕರಿತು ಮಾತನಾಡಿದ ಅವರು, ದರ ಏರಿಕೆ ಪ್ರಸ್ತಾವನೆಗೆ ನಾನೇ ತಡೆ ನೀಡಿದ್ದೇನೆ, ಜನ ಸಾಮಾನ್ಯರಿಗೆ ಹೊರೆ ಆಗದಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

English summary
Chief minister H.D.Kumaraswamy has warned BBMP officials about their administration which was critically objected by high court in recent days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X