ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಪರೀಕ್ಷಾ ಮಂಡಳಿಗೆ ಮುಖ್ಯಮಂತ್ರಿಗಳಿಂದ ಚೆಕ್ ಹಸ್ತಾಂತರ

ವಿಧಾನ ಸೌಧದಲ್ಲಿ ವಿವಿಧ ಇಲಾಖೆಯೊಂದಿಗೆ ಸಭೆ ನಡೆಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಂದಿನ ಕಾರ್ಯಕ್ರಮದ ವಿವರ ಇಲ್ಲಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ ಮಕ್ಕಳ ಶೈಕ್ಷಣಿಕ ಶುಲ್ಕಕ್ಕೆ ಸಂಬಂಧಿಸಿದಂತೆ 20 ಕೋಟಿ ರೂ. ಚೆಕ್ ಅನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಪರೀಕ್ಷಾ ಮಂಡಳಿಗೆ ಹಸ್ತಾಂತರಿಸಲಿದ್ದಾರೆ. ವಿಧಾನ ಸೌಧದ ಮುಖ್ಯಮಂತ್ರಿ ಕೊಠಡಿಯಲ್ಲಿ ಇಂದು ಬೆಳಗ್ಗೆ 10: 30 ಕ್ಕೆ ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

10:45ಕ್ಕೆ ಕರ್ನಾಟಕ ಸಣ್ಣ ಕೈಗಾರಿಕಾಭಿವೃದ್ಧಿ ನಿಗಮವು ಇಲಾಖೆಯ ಲಾಭಾಂಶ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಅನ್ನು ಸಹ ನೀಡಲಿದೆ. ಈ ಕಾರ್ಯಕ್ರಮ ಸಹ ವಿಧಾನಸೌಧದ ಮುಖ್ಯಮಂತ್ರಿ ಕೊಠಡಿಯಲ್ಲಿ ನಡೆಯಲಿದೆ. [ಸಿದ್ದು ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ, ತಪ್ಪಿದ ಭಾರೀ ಅನಾಹುತ]

CM Siddaramaiah's todays programmes

ನಂತರ 11 ಗಂಟೆಗೆ ಪರಿಶಿಷ್ಠ ಜಾತಿ ಮತ್ತು ಪಂಗಡ ನಿಯಮ- 1995 ರ ಅಡಿಯಲ್ಲಿ ನಿರ್ಮಾಣವಾದ ರಾಜ್ಯಮಟ್ಟದ ವಿಜಿಲೆನ್ಸ್ ಮತ್ತು ಸುಪ್ರವೈಸರಿ ಸಮಿತಿಯ ಸಭೆ ವಿಧಾನ ಸೌಧದ ಮೂರನೇ ಮಹಡಿಯ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಲಿದೆ.

ರಾಜ್ಯ ಆಹಾರ ಸಮಿತಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸುವ ಕುರಿತಂತೆ ನೇಮಕಾತಿ ಸಮಿತಿಯೊಂದಿಗೆ ಸಭೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಅಪರಾಹ್ನ 4:30ಕ್ಕೆ ನಡೆಯಲಿದೆ.

ನಂತರ ಸಂಜೆ 5:30 ಕ್ಕೆ ಇಂದಿರಾ ಕ್ಯಾಂಟಿನ್ ಉದ್ಘಾಟನೆಯ ಕುರಿತಂತೆ ವಿಧಾನ ಸೌಧದ ಮೂರನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಲಿದೆ.

ಸಂಜೆ 6:30 ಕ್ಕೆ ಅಡ್ವೊಕೇಟ್ ಜನರಲ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಇತರ ಸರ್ಕಾರಿ ನ್ಯಾಯವಾಧಿಗಳಿಂದ ಸೌಜನ್ಯದ ಕರೆಯನ್ನು ಮುಖ್ಯಮಂತ್ರಿಗಳು ವಿಧಾನ ಸೌಧದ ಮೂರನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಸ್ವೀಕರಿಸಲಿದ್ದಾರೆ.

English summary
Chief Minister of Karanataka, Siddaramaiah will hand over Rs.20 crore cheque as teaching fee for minority students selected under Arivu educational loan scheme of Minorities development corporation to Karanataka examination Authority at 10: 30 am, in chief minister's chamber Vidana soudha today. Here is the details of today's CM programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X