ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಕ್ಕೆ ಹೊಸ ಐಟಿ ಹಬ್, ಭರಪೂರ ಉದ್ಯೋಗ ಅವಕಾಶ

By Mahesh
|
Google Oneindia Kannada News

ಬೆಂಗಳೂರು, ಜ.21: ರಾಜ್ಯದಲ್ಲಿ ಐಟಿ, ಬಿಟಿ ಕಂಪನಿಗಳ ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. 10,500 ಎಕರೆ ಪ್ರದೇಶದಲ್ಲಿ ಹೊಸ ಐಟಿ ಹಬ್ ಸ್ಥಾಪಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವೈಟ್‌ಫೀಲ್ಡ್‌ನಲ್ಲಿ ಕ್ಯಾಪ್‌ಜೆಮಿನೈ(Cap gemini) ಕಂಪೆನಿ ನಿರ್ಮಿಸಿರುವ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಐಟಿ ಹಬ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಮೊದಲ ಹಂತದ 2,023 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕೆಐಎಡಿಬಿಗೆ ಸೂಚಿಸಲಾಗಿದೆ ಎಂದರು. [80 ಲಕ್ಷ ಉದ್ಯೋಗ ಅವಕಾಶ ಏರಿಕೆ ಗುರಿ : ಪಾಟೀಲ್]

Karnataka Chief Minister Siddaramaiah promises all help for IT, BT sectors expansion

ಬೆಂಗಳೂರಿನ ಹೊರಕ್ಕೆ ಐಟಿ : ರಾಜ್ಯದ ಇತರೆ ನಗರಗಳಾದ ಮೈಸೂರು, ಬೆಳಗಾವಿ ಸೇರಿದಂತೆ ಇನ್ನಿತರೆಡೆ ಐಟಿ ಕಂಪನಿಗಳನ್ನು ಕರೆದೊಯ್ಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸರ್ಕಾರ ದೇಶದಲ್ಲೇ ನೂತನವಾದ ಐಟಿ ಹಾಗೂ ಕೈಗಾರಿಕಾ ನೀತಿ ಜಾರಿಗೆ ತಂದಿದೆ. ಇದರಿಂದ ಹೆಚ್ಚು ಮಂದಿಗೆ ಉದ್ಯೋಗ ದೊರೆಯಲು ಅನುವಾಗಿದೆ ಎಂದರು.

ಉದ್ಯೋಗ ಅವಕಾಶ: ಸಚಿವ ಎಸ್.ಆರ್.ಪಾಟೀಲ್ ಮಾತನಾಡಿ, ಪ್ರಸ್ತುತ ಐಟಿ ಕ್ಷೇತ್ರದಲ್ಲಿ 40 ಲಕ್ಷ ಉದ್ಯೋಗಿಗಳಿದ್ದಾರೆ. 2020ರ ವೇಳೆಗೆ ಇದು 80 ಲಕ್ಷ ಮುಟ್ಟುವ ಸಾಧ್ಯತೆಯಿದೆ. ಬೆಂಗಳೂರಿನ ವಿವಿಧೆಡೆ ಈಗಾಗಲೇ ಉಚಿತ ವೈ-ಫೈ ಸೌಲಭ್ಯವಿದೆ. ಇಂತಹ ವಿಶಿಷ್ಟ ಅತ್ಯುಪಯುಕ್ತ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿದೆ ಎಂದರು. [ಇನ್ನು 3 ತಿಂಗಳಲ್ಲಿ ಬೆಂಗಳೂರು ವೈ ಫೈಮಯ]

ಫ್ರಾನ್ಸ್ ಮೂಲದ ಕ್ಯಾಪ್‌ಜೆಮಿನೈ ಹೊಸ ಘಟಕ 4.6 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಮೂಲ ಸೌಕರ್ಯ, ಬಿಪಿಒ, ಕನ್ಸಲ್ಟೆನ್ಸಿ, ಮುಂತಾದ ಸೇವೆಗಳನ್ನು ನೀಡುತ್ತಿದೆ ಎಂದು ಕ್ಯಾಪ್‌ಜೆಮಿನೈ ಸಿಇಒ ಅರುಣಾ ಜಯಂತಿ ಹೇಳಿದರು. (ಪಿಟಿಐ)

English summary
Karnataka Chief Minister Siddaramaiah today said his government will provide all necessary infrastructure facilities for the growth and expansion of IT and BT sectors in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X