• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೇ ತಿಂಗಳಿನಿಂದ ಸಬ್ ಅರ್ಬನ್ ರೈಲು ಕಾಮಗಾರಿ ಶುರು?

By Mahesh
|

ಬೆಂಗಳೂರು, ಮಾರ್ಚ್ 26: ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರವು ಈಗಾಗಲೇ ಶೇ. 50 ರ ಯೋಜನಾ ವೆಚ್ಚವನ್ನು ನೀಡಲು ಸಮ್ಮತಿಸಿದ್ದು, ಮೇ ತಿಂಗಳಿನಲ್ಲಿ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಯಮ್ಯ ಹೇಳಿದರು.

ಬಹುವರ್ಷಗಳ ಬೇಡಿಕೆಯಾದ ಹಾಸನ-ಬೆಂಗಳೂರು ರೈಲು ಮಾರ್ಗಕ್ಕೆ ಭಾನುವಾರದಂದು ಹಸಿರು ನಿಶಾನೆ ತೋರಿಸಿದ ಬೆನ್ನಲ್ಲೇ ಮಾತನಾಡಿದ ಸಿದ್ದರಾಮಯ್ಯ, ಬಹುದಿನಗಳ ಬೇಡಿಕೆಯ ಸಬ್ ಅರ್ಬನ್ ರೈಲಿಗೆ ಮೇ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲು ರೈಲ್ವೆ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದರು. ಇದೇ ವೇಳೆ ಹಾಸನ-ಮಂಗಳೂರು ನಡುವಿನ ರೈಲು ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದರು.[ಹಾಸನ- ಬೆಂಗಳೂರು ರೈಲಿನ ವೇಳಾಪಟ್ಟಿ]

ರಾಜ್ಯ ಸರ್ಕಾರ ಸಬ್ ಅರ್ಬನ್ ರೈಲಿಗೆ ಈಗಾಗಲೇ ಶೇ. 50 ರ ಯೋಜನಾ ವೆಚ್ಚವನ್ನು ನೀಡಲು ಸಮ್ಮತಿಸಿದ್ದು, ಅತಿ ಶೀಘ್ರವೇ ಸಬ್ಅರ್ಬನ್ ರೈಲು ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ಶೇ. 50 ರಷ್ಟು ಹಣ ನೀಡುವುದು ಸ್ವಾಗತಾರ್ಹ, ಬೆಂಗಳೂರು ಜನರ ಬಹುದಿನಗಳ ಬೇಡಿಕೆಯಾದ ಸಬ್ ಅರ್ಬನ್ ರೈಲು ಯೋಜನೆಗೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಪ್ರತಿಕ್ರಿಯಿಸಿದರು.

2018ರ ಫೆಬ್ರವರಿಯಲ್ಲಿ ಗೊಮ್ಮಟೇಶ್ವರಮೂರ್ತಿಯ ಮಹಾಮಸ್ತಕಾಭಿಷೇಕ ನಡೆಯಲಿದ್ದು, ದೇಶದ ವಿವಿಧೆಡೆಯಿಂದ ಲಕ್ಷಾಂತರ ಮಂದಿ ಯಾತ್ರಾರ್ಥಿಗಳು ಆಗಮಿಸುವ ಹಿನ್ನೆಲೆಯಲ್ಲಿ ವಿಶೇಷ ರೈಲು ಓಡಿಸುವಂತೆ ಇದೇ ವೇಳೆ ಅವರು ಮನವಿ ಮಾಡಿದರು.

ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ

ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ

ಬೆಂಗಳೂರಿನಲ್ಲಿನ ರೈಲು ನಿಲ್ದಾಣಗಳ ಮೂಲಕ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಒಟ್ಟು 204 ಕಿ.ಮೀ. ಉದ್ದದ 15 ಮಾರ್ಗಗಳು ಇದರಲ್ಲಿ ಬರಲಿವೆ. ಯೋಜನೆಯ ವೆಚ್ಚ 8.5 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.ರಾಜ್ಯ ಭೂ ಸಾರಿಗೆ ನಿರ್ದೇಶನಾಲಯದ ಪ್ರಸ್ತಾವನೆಯಂತೆ ಯೋಜನೆಗೆ ರಾಜ್ಯ ಸರ್ಕಾರ 2013ರಲ್ಲೇ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಯೋಜನೆಯಂತೆ ಮಂಡ್ಯ, ತುಮಕೂರಿಗೂ ರೈಲು ಸಂಪರ್ಕ ಸಿಗಲಿದೆ

ಮನವಿ ಸಲ್ಲಿಸಿದ್ದ ಸಚಿವ ಅನಂತ ಕುಮಾರ್

ಮನವಿ ಸಲ್ಲಿಸಿದ್ದ ಸಚಿವ ಅನಂತ ಕುಮಾರ್

ಬೆಂಗಳೂರಿನ ನಗರಾಭಿವೃದ್ಧಿಯ ಅಧ್ಯಯನ ವರದಿ ಪಡೆದು, ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಜತೆ ಒಪ್ಪಂದ ಕೇಂದ್ರ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರ ಪ್ರಸ್ತುತ ರಾಮನಗರ ಹಾಗೂ ವೈಟ್ ಫೀಲ್ಡ್ ಮಾರ್ಗದ ಯೋಜನೆಗೆ ಶೇ 80ರಷ್ಟು ಯೋಜನಾ ವೆಚ್ಚವನ್ನು ಭರಿಸುತ್ತಿದೆ. ರಾಜ್ಯದಲ್ಲಿ ಇನ್ನೂ 13ಕ್ಕೂ ಅಧಿಕ ವಿದ್ಯುತ್ ಚಾಲಿತ ಮೆಮು ರೈಲಿಗಾಗಿ ಮನವಿ ಸಲ್ಲಿಸಲಾಗಿದೆ.

ನೈಋತ್ಯ ರೈಲ್ವೆ ಬಿಡುಗಡೆ

ನೈಋತ್ಯ ರೈಲ್ವೆ ಬಿಡುಗಡೆ

* ಬೆಳಗ್ಗೆ 8.45ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ(KRS)ದಿಂದ ಹೊರಟು 9.40ಕ್ಕೆ ವೈಟ್​ಫೀಲ್ಡ್ ತಲುಪುತ್ತದೆ.

* ವೈಟ್​ಫೀಲ್ಡ್​ನಿಂದ 10.30ಕ್ಕೆ ಹೊರಡುವ ರೈಲು 11.10ಕ್ಕೆ ಕೆಎಸ್​ಆರ್ ರೈಲು ನಿಲ್ದಾಣಕ್ಕೆ ತಲುಪಲಿದೆ.

* ಎರಡನೇ ರೈಲು 11.20 am ಕ್ಕೆ ಕೆಎಸ್ ಆರ್ ತೊರೆದು 1.45pm ಗೆ ಕುಪ್ಪಂ ಸೇರಲಿದೆ. * 2.45 pmಗೆ ಕುಪ್ಪಂ ಬಿಟ್ಟು 5.20 pm.ಕ್ಕೆ ಕೆಎಸ್ ಆರ್ ಸೇರಲಿದೆ.

ತಪ್ಪಲಿದೆ ಟ್ರಾಫಿಕ್ ಸಮಸ್ಯೆ

ತಪ್ಪಲಿದೆ ಟ್ರಾಫಿಕ್ ಸಮಸ್ಯೆ

ಬೈಯಪ್ಪನಹಳ್ಳಿ-ವೈಟ್​ಫೀಲ್ಡ್ ನಡುವೆ ಫೆಬ್ರವರಿ ವೇಳೆಗೆ ಮೆಟ್ರೋ ಮಾರ್ಗ ವಿಸ್ತರಣಾ ಕಾಮಗಾರಿ ಆರಂಭವಾಗಲಿದೆ. ಇದಕ್ಕಾಗಿ ಬಿಎಂಆರ್​ಸಿಎಲ್ ತಯಾರಿ ನಡೆಸಿದೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ವಿಸ್ತರಿಸುವ ಕಾಮಗಾರಿಯೂ ನಡೆಯಲಿದೆ. ಹೀಗಾಗಿ ಈ ಭಾಗದಲ್ಲಿ ವಾಹನದಟ್ಟಣೆ ಸಮಸ್ಯೆ ಹೆಚ್ಚಾಗಲಿದೆ. ಈ ಸಮಸ್ಯೆಯಿಂದ ಪಾರಾಗಲು ಈ ಭಾಗದ ಜನರಿಗೆ ರಾಮನಗರ-ಕುಪ್ಪಂ ಮೆಮು ರೈಲು ಅನುಕೂಲಕರ. ಸಬ್ ಅರ್ಬನ್ ಬಂದ ಮೇಲೆ ಟ್ರಾಫಿಕ್ ಸಮಸ್ಯೆ ಇಲ್ಲವಾಗುತ್ತದೆ.

ಸಬ್ ಅರ್ಬನ್ ಗಾಗಿ ಹೋರಾಟ

ನಾಗರಿಕರ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು #Chukubukkubeku ಎಂಬ ಅಭಿಯಾನ ಆರಂಭಿಸಿ, ಹೋರಾಟ ನಡೆಸುತ್ತಾ ಬಂದಿದ್ದಾರೆ. ಸಬ್ ಅರ್ಬನ್ ರೈಲಿನ ಬಗ್ಗೆ ರಾಜ್ಯ ಬಜೆಟ್ ನಲ್ಲೂ ಪ್ರಸ್ತಾವನೆ ಕೇಳಿ ಬಂದಿತ್ತು. ಈಗ ಬಹುತೇಕ ಕಾಮಗಾರಿ ಸಿದ್ಧತೆ ನಡೆದಿದೆ. ಇದಕ್ಕಾಗಿ ಪ್ರತ್ಯೇಕ ಹಳಿ ಅಗತ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ.

English summary
Work on the sub-urban rail project for the city will commence from the month of May, State government has released 50% of the project amount said CM Siddaramaiah. As per the DPR it is 440 km of sub-urban rail and had sanctioned Rs. 345 crore for the first phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X