ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ ಚುನಾವಣೆ ಬಳಿಕ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಲು ಮುಂದಾದ ಸಿಎಂ

|
Google Oneindia Kannada News

ಬೆಂಗಳೂರು, ಡಿಸೆಂಬರ್ 13: ಉಪ ಚುನಾವಣೆ ಬಳಿಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ.

ಎಲ್ಲಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಜತೆ ಸಿಎಂ ಸಭೆ ನಡೆಸುತ್ತಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯುತ್ತಿದೆ. ಎಲ್ಲಾ ಇಲಾಖೆಗಳ ಕಾರ್ಯ ಪ್ರಗತಿ,ಯೋಜನಾ ಪ್ರಗತಿ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

 ಮೊದಲು ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನವಿತ್ತು

ಮೊದಲು ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನವಿತ್ತು

ಉಪ ಚುನಾವಣೆಗೂ ಮುನ್ನ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನವಿತ್ತು. ಅಧಿಕಾರ ವಹಿಸಿಕೊಂಡ ಬಳಿಕ ಅತಿವೃಷ್ಟಿಯಿಂದ ಅನಿರೀಕ್ಷಿತ ಹಾನಿಯಾಗಿತ್ತು. ಆಗ ಜಿಲ್ಲಾಡಳಿತ ನಿರೀಕ್ಷೆ ಮೀರಿ ಕೆಲಸ ಮಾಡಿದೆ. ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

 ಕೇಂದ್ರ ನೀಡಿದ್ದೆಷ್ಟು, ಬೆಳೆ ಪರಿಹಾರವೆಷ್ಟು?

ಕೇಂದ್ರ ನೀಡಿದ್ದೆಷ್ಟು, ಬೆಳೆ ಪರಿಹಾರವೆಷ್ಟು?

ಕೇಂದ್ರ ಸರ್ಕಾರ ಕೂಡಾ ನಮಗೆ ನೆರವು ನೀಡಿತು, ಹಣಕಾಸು ಪರಿಸ್ಥಿತಿ ನೋಡಿಕೊಂಡು ಮನೆ ಹಾನಿ ಆದವರಿಗೆ 5 ಲಕ್ಷ ನೀಡಿದೆವು.ಕೇಂದ್ರ ಕೊಟ್ಟಿದ್ದರ ಜತೆ 10 ಸಾವಿರ ಹೆಚ್ಚು ಬೆಳೆ ಪರಿಹಾರ ನೀಡಿದೆವು.ನೆರೆಹಾನಿ ಸಂಬಂಧ ಕಾರ್ಯದರ್ಶಿ ಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ.ಇಂದಿನಿಂದ ಕೆಲಸ‌ ವೇಗಗೊಳಿಸಬೇಕಿದೆ, ಕಡ್ಡಾಯವಾಗಿ ಜಿಲ್ಲಾ ಪ್ರವಾಸ ಕೈಗೊಳ್ಳಬೇಕು. ತಿಂಗಳಿಗೆ ಒಮ್ಮೆ ಆದರೂ ಸಿಎಸ್ ಕೂಡಾ ಜಿಲ್ಲಾ ಪ್ರವಾಸ ಕೈಗೊಳ್ಳಬೇಕು ಎಂದರು.

ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovationಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation

 ಬೆಳೆ ಪರಿಹಾರ ಸಮರ್ಪಕವಾಗಿಲ್ಲ ಎನ್ನುವ ಟೀಕೆ

ಬೆಳೆ ಪರಿಹಾರ ಸಮರ್ಪಕವಾಗಿಲ್ಲ ಎನ್ನುವ ಟೀಕೆ

ನಾವು ಇಷ್ಟೆಲ್ಲಾ ಪರಿಹಾರ ವಿತರಣೆ ಮಾಡಿದ್ದರೂ ಸಹ ಬೆಳೆ ಪರಿಹಾರ ಸಮರ್ಪಕವಾಗಿ ಆಗಿಲ್ಲ ಎಂದು ಮಾಧ್ಯಮಗಳಲ್ಲಿ ಟೀಕೆ ಬರುತ್ತಿವೆ.ಹಾಗಾಗಿ ವಾಸ್ತವಿಕ ಪರಿಸ್ಥಿತಿ ಏನು ಎಂಬುದನ್ಬು ತಿಳಿದುಕೊಂಡು ಎಲ್ಲಿ ಕೊರತೆ ಇದೆಯೋ ಅಲ್ಲಿ ಸರಿಪಡಿಸಬೇಕು.ಸರ್ಕಾರಿ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು.ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ.ನಾವು ಆಡಳಿತದಲ್ಲಿ ಬಿಗಿ ತರಬೇಕಾಗಿದೆ.ಪ್ರತಿ ತಿಂಗಳು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಪ್ರಗತಿ ಪರಿಶೀಲನೆ ಮಾಡಬೇಕು.ಆದರೆ ಯಾರೂ ಮಾಡುತ್ತಿಲ್ಲ.ಜಿಲ್ಲಾ ಪ್ರವಾಸ ಮಾಡಬೇಕು.ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಹದಿನೈದು ದಿನಗಳಿಗೆ ಒಮ್ಮೆಯಾದರೂ ಜಿಲ್ಲೆಗಳಿಗೆ ಭೇಟಿ ಕೊಟ್ಟು,ಪ್ರಗತಿ ಪರಿಶೀಲನೆ ಮಾಡಬೇಕು.ಮುಖ್ಯಕಾರ್ಯದರ್ಶಿಯವರು ತಿಂಗಳಿಗೊಮ್ಮೆ ಒಟ್ಟು ಪ್ರಗತಿ ಪರಿಶೀಲನೆಯ ಸಮಗ್ರ ವರದಿ ನೀಡಬೇಕು.

 ಸಭೆಯಲ್ಲಿ ಯಾರ್ಯಾರು ಉಪಸ್ಥಿತರಿದ್ದರು?

ಸಭೆಯಲ್ಲಿ ಯಾರ್ಯಾರು ಉಪಸ್ಥಿತರಿದ್ದರು?

ವಿವಿಧ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು,ಅಪರ ಮುಖ್ಯಕಾರ್ಯದರ್ಶಿಗಳೊಂದಿಗೆ ಸಿಎಂ ಸಭೆ.ವಿಧಾನಸೌಧದಲ್ಲಿ ಸಭೆ.ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ,ಗೃಹ ಸಚಿವ ಬಸವರಾಜ ಬೊಮ್ಮಾಯಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ,ಕಂದಾಯ ಸಚಿವ ಆರ್.ಅಶೋಕ್,ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ,ವಸತಿ ಸಚಿವ ವಿ.ಸೋಮಣ್ಣ,ಅರಣ್ಯ ಸಚಿವ ನಾಗೇಶ್,ಪಶುಸಂಗೋಪನಾ ಸಚಿವ ಪ್ರಭುಚೌಹಾಣ್,ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಉಪಸ್ಥಿತರಿದ್ದರು.

English summary
Chief Minister BS Yediyurappa Meeting with all chief secretaries of each and every department in Vidhanasoudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X