ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಮ ವಾಸ್ತವ್ಯ: ರಾಯಚೂರಿಗೆ ರೈಲಿನಲ್ಲಿ ತೆರಳಿದ ಕುಮಾರಸ್ವಾಮಿ

|
Google Oneindia Kannada News

Recommended Video

ಬೆಂಗಳೂರಿನಿಂದ ರಾಯಚೂರಿಗೆ ಬಂದ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜೂನ್ 25: ರಾಯಚೂರಿನ ಮಾನ್ವಿಯಲ್ಲಿ ನಾಳೆ (ಬುಧವಾರ) ನಡೆಯಲಿರುವ ಎರಡನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರು ರೈಲಿನಲ್ಲಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ.

ಇಂದು ಸಂಜೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ರೈಲಿನಲ್ಲಿ ಕುಮಾರಸ್ವಾಮಿ ಅವರು ಪ್ರಯಾಣ ಬೆಳೆಸಿದರು, ಈ ಸಮಯ ಅವರೊಂದಿಗೆ ಸಚಿವರಾದ ಸಾ.ರಾ.ಮಹೇಶ್ ಮತ್ತು ಇನ್ನೂ ಕೆಲವರು ಇದ್ದರು.

ರಾಯಚೂರಲ್ಲಿ ಗ್ರಾಮ ವಾಸ್ತವ್ಯ, ಕುಮಾರಸ್ವಾಮಿ ಕಾರ್ಯಕ್ರಮಗಳು ರಾಯಚೂರಲ್ಲಿ ಗ್ರಾಮ ವಾಸ್ತವ್ಯ, ಕುಮಾರಸ್ವಾಮಿ ಕಾರ್ಯಕ್ರಮಗಳು

ನಾಳೆ (ಬುಧವಾರ) ರಾಯಚೂರಿನ ಮಾನ್ವಿಯ ಕರೆಗುಡ್ಡ ಊರಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಕಲ ತಯಾರಿಗಳನ್ನು ನಡೆಸಲಾಗಿದೆ.

CM Kumaraswamy traveling in train to Raichuru to do village stay

ಜೂನ್ 21 ರಂದು ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆದಿತ್ತು, ಆ ಕಾರ್ಯಕ್ರಮಕ್ಕೆ ಸಹ ಕುಮಾರಸ್ವಾಮಿ ಅವರು ರೈಲಿನಲ್ಲಿಯೇ ಪ್ರಯಾಣ ಬೆಳೆಸಿದ್ದರು.

CM Kumaraswamy traveling in train to Raichuru to do village stay

ರಾಯಚೂರು : ಜೂ.26ರಂದು ಕರೇಗುಡ್ಡದಲ್ಲಿ ಸಿಎಂ ಗ್ರಾಮ ವಾಸ್ತವ್ಯರಾಯಚೂರು : ಜೂ.26ರಂದು ಕರೇಗುಡ್ಡದಲ್ಲಿ ಸಿಎಂ ಗ್ರಾಮ ವಾಸ್ತವ್ಯ

ಕುಮಾರಸ್ವಾಮಿ ಅವರು ನಾಳೆ ಬೆಳಿಗ್ಗೆ 5:30 ಸುಮಾರಿಗೆ ರಾಯಚೂರು ತಲುಪಲಿದ್ದಾರೆ. ಅಲ್ಲಿನ ಪ್ರವಾಸಿ ಮಂದಿರದಲ್ಲಿ ನಿತ್ಯಕರ್ಮಗಳನ್ನು ಸರ್ಕಾರಿ ಬಸ್ಸಿನಲ್ಲಿ ಮಾನ್ವಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಕರೆಗುಡ್ಡ ಗ್ರಾಮಕ್ಕೆ ಆಗಮಿಸಲಿದ್ದಾರೆ.

CM Kumaraswamy traveling in train to Raichuru to do village stay

ಗ್ರಾಮ ವಾಸ್ತವ್ಯ ಟೀಕಿಸಿದ ಯಡಿಯೂರಪ್ಪ: ಹಳೆ ಘಟನೆ ನೆನಪಿಸಿದ ಎಚ್‌ಡಿಕೆ ಗ್ರಾಮ ವಾಸ್ತವ್ಯ ಟೀಕಿಸಿದ ಯಡಿಯೂರಪ್ಪ: ಹಳೆ ಘಟನೆ ನೆನಪಿಸಿದ ಎಚ್‌ಡಿಕೆ

10 ಗಂಟೆ ಸುಮಾರಿಗೆ ಕರೆಗುಡ್ಡ ಸರ್ಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ಸಭೆ ಪ್ರಾರಂಭವಾಗಲಿದ್ದು, ಉದ್ಘಾಟನೆ ನಂತರ ಅವಹಾಲು ಸ್ವೀಕಾರ ಆರಂಭವಾಗಲಿದೆ. ಸಂಜೆ 6 ಗಂಟೆ ವರೆಗೆ ಅವಹಾಲು ಸ್ವೀಕಾರ ನಡೆಯಲಿದೆ.

English summary
CM Kumaraswamy traveling in train to Raichuru from Bengaluru. He is doing village stay tomorrow (June 26) in Raichuru's Karegudda village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X