ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಸುರಕ್ಷತೆಗೆ 'ಪಿಂಕ್ ಸಾರಥಿ' ಬಿಡುಗಡೆ ಮಾಡಿದ ಸಿಎಂ

|
Google Oneindia Kannada News

ಬೆಂಗಳೂರು, ಜೂನ್ 06: ವಿಧಾನಸೌಧದ ಬಳಿ ಇಂದು ಸಿಎಂ ಕುಮಾರಸ್ವಾಮಿ ಮತ್ತು ಸಚಿವರು, ಶಾಸಕರು ವಿವಿಧ ಹೊಸ ಯೋಜನೆಗಳಿಗೆ ಚಾಲನೆ ನೀಡಿದರು.

ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಬಸ್ ಪಾಸ್ ಅನ್ನು ಇಂದು ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು. ಡಿಜಿಟಲ್ ಬಸ್ ಪಾಸ್‌ನಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದರು.

ಈ ಹಿಂದೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಹಳ್ಳಿ ಈಗ ಹೇಗಿದೆ? ಈ ಹಿಂದೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಹಳ್ಳಿ ಈಗ ಹೇಗಿದೆ?

ಬಿಎಂಟಿಸಿ ವ್ಯಾಪ್ತಿಗೆ ಒಳಪಡುವ ಶಾಲಾಕಾಲೇಜು ವಿದ್ಯಾರ್ತಿಗಳಿಗೆ ಇಂದಿನಿಂದ ಆನ್‍ಲೈನ್‍ನಲ್ಲಿ ರಿಯಾಯ್ತಿ ದರದ ಬಸ್ ಪಾಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿ ತಿಳಿಸಿದರು.

CM Kumaraswamy releases digital buss pass for students

ಪಾಸ್ ವಿತರಣೆಗೆಂದು 92 ವಿಶೇಷ ಕೌಂಟರ್ ಅನ್ನು ತೆರೆಯಲಾಗಿದ್ದು, ಈ ಬಾರಿ 2.5 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಪಾಸ್ ವಿತರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ರಜೆ ಪರಿಷ್ಕರಣೆ, ನೀರಿನ ದರ ಏರಿಕೆ: ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ರಜೆ ಪರಿಷ್ಕರಣೆ, ನೀರಿನ ದರ ಏರಿಕೆ: ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಇದೇ ಸಮಯದಲ್ಲಿ ನಿರ್ಭಯ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಖರೀದಿಸಲಾಗಿರುವ ಪಿಂಕ್ ಸಾರಥಿ ಜೀಪುಗಳನ್ನು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು ವಿಧಾನಸೌಧದ ಮುಂಭಾಗ ಲೋಕಾರ್ಪಣೆ ಮಾಡಿದರು.
ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಬಿಎಂಟಿಸಿ ಅಧ್ಯಕ್ಷ ಎನ್. ಎ. ಹ್ಯಾರಿಸ್ ಕೆಲವು ಪ್ರಮುಖ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
CM Kumaraswamy releases digital bus pass for students. He also releases patrolling vehicles which buys for women safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X