ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತ್ಮಾವಲೋಕನದಲ್ಲಿ ಸಿಎಂ?: ಸುದ್ದಿಗೋಷ್ಠಿಯಲ್ಲಿ ಒಂದೂ ಮಾತಿಲ್ಲ!

|
Google Oneindia Kannada News

ಬೆಂಗಳೂರು, ಮೇ 24: ಲೋಕಸಭೆ ಚುನಾವಣೆಯಲ್ಲಿ ಎದುರಾಗಿರುವ ಭಾರಿ ಸೋಲಿನಿಂದ ಸಿಎಂ ಕುಮಾರಸ್ವಾಮಿ ಅವರು ತೀವ್ರ ಆಘಾತ ಅನುಭವಿಸಿದ್ದಾರೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಒಂದೇ-ಒಂದು ಮಾತನ್ನೂ ಆಡಲಿಲ್ಲ. ಎಲ್ಲ ಪ್ರಶ್ನೆಗಳಿಗೂ ಡಿಸಿಎಂ ಪರಮೇಶ್ವರ್ ಅವರೇ ಉತ್ತರಿಸಿದರು.

ಮುಂದಿನ ನಾಲ್ಕು ವರ್ಷ ಕುಮಾರಸ್ವಾಮಿ ಸಿಎಂ: ಪರಮೇಶ್ವರ್ಮುಂದಿನ ನಾಲ್ಕು ವರ್ಷ ಕುಮಾರಸ್ವಾಮಿ ಸಿಎಂ: ಪರಮೇಶ್ವರ್

ಅನೌಪಚಾರಿಕವಾಗಿ ಇಂದು ಕರೆದಿದ್ದ ಸಂಪುಟ ಸಭೆಯ ಬಳಿಕ ಡಿಸಿಎಂ ಪರಮೇಶ್ವರ್ ಮತ್ತು ಕುಮಾರಸ್ವಾಮಿ ಇಬ್ಬರೂ ಸುದ್ದಿಗೋಷ್ಠಿಗೆ ಹಾಜರಾಗಿದ್ದರು, ಆದರೆ ಕುಮಾರಸ್ವಾಮಿ ಅವರು ಒಂದೇ ಒಂದು ಮಾತನ್ನೂ ಆಡಲಿಲ್ಲ.

ಪತ್ರಕರ್ತರು ಉದ್ದೇಶಪೂರ್ವಕವಾಗಿ ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಕೇಳಿದರೂ ಸಹ ಯಾವುದಕ್ಕೂ ಕುಮಾರಸ್ವಾಮಿ ಪ್ರತಿಕ್ರಿಯಿಸಲೇ ಇಲ್ಲ, ಕುಮಾರಸ್ವಾಮಿ ಅವರಿಗೆ ಕೇಳಿದ ಪ್ರಶ್ನೆಗಳ ಬಗ್ಗೆಯೂ ಪರಮೇಶ್ವರ್ ಅವರೇ ಉತ್ತರಿಸಿದರು.

CM Kumaraswamy kept quit in todays press meet

ಕುಮಾರಸ್ವಾಮಿ, ಪರಮೇಶ್ವರ್, ಎಚ್‌.ಕೆ.ಪಾಟೀಲ್, ಎಂಬಿ.ಪಾಟೀಲ್ ಅವರುಗಳು ಸುದ್ದಿಗೋಷ್ಠಿ ನಡೆಸಿದರು ಆದರೆ ಪರಮೇಶ್ವರ್ ಒಬ್ಬರೇ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು, ಮತ್ತು ಪ್ರಶ್ನೆಗಳಿಗೆ ಉತ್ತರಿಸಿದರು.

ಕುಮಾರಸ್ವಾಮಿ ಅವರ ಇಂದಿನ ಮೌನ ನೋಡಿದರೆ ಕುಮಾರಸ್ವಾಮಿ ಅವರು ಸೋಲಿನಿಂದ ಆಘಾತಕ್ಕೆ ಒಳಗಾಗಿ ಆತ್ಮವಿಮರ್ಶೆಯಲ್ಲಿ ತೊಡಗಿರುವಂತೆ ಕಂಡಿತು.

ಎಚ್.ಡಿ.ಕುಮಾರಸ್ವಾಮಿ ಪದತ್ಯಾಗ, ಸಿಎಂ ಪಟ್ಟ ಕಾಂಗ್ರೆಸ್‌ಗೆ? ಎಚ್.ಡಿ.ಕುಮಾರಸ್ವಾಮಿ ಪದತ್ಯಾಗ, ಸಿಎಂ ಪಟ್ಟ ಕಾಂಗ್ರೆಸ್‌ಗೆ?

ಕೆಲವು ವಾಹಿನಿಗಳು ಹೇಳಿದಂತೆ. ನಿಖಿಲ್ ಕುಮಾರಸ್ವಾಮಿ ಸೋಲಿಗೆ ಮಾಧ್ಯಮಗಳೂ ಸಹ ಕಾರಣವಾಗಿವೆ ಎಂಬ ಅಭಿಪ್ರಾಯವನ್ನು ಕುಮಾರಸ್ವಾಮಿ ಅವರು ಹೊಂದಿದ್ದು, ಹಾಗಾಗಿಯೇ ಕುಮಾರಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡದೆ ಪ್ರತಿಭಟನೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಮೈತ್ರಿ ಸರ್ಕಾರಕ್ಕೆ ಈಗ ನಿಜವಾದ ಅಗ್ನಿ ಪರೀಕ್ಷೆ ಕರ್ನಾಟಕ ಮೈತ್ರಿ ಸರ್ಕಾರಕ್ಕೆ ಈಗ ನಿಜವಾದ ಅಗ್ನಿ ಪರೀಕ್ಷೆ

ಕುಮಾರಸ್ವಾಮಿ ಅವರು ಹಿಂದೊಮ್ಮೆ ಮಾಧ್ಯಮಗಳಿಗೆ ಹೇಳಿದ್ದರು, ಮೇ 23ರ ನಂತರ ಮಾಧ್ಯಮಗಳ ಮುಂದೆ ಬರುತ್ತೇನೆ, ಅಂದು ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಸವಾಲು ಎಸೆದಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ಸೋಲನನ್ನುಭವಿಸಿದ್ದಾರೆ ಆದ್ದರಿಂದ ಸಿಎಂ ಅವರು ಮಾಧ್ಯಮಗಳ ಜೊತೆ ಮಾತನಾಡಲಿಲ್ಲ ಎನ್ನಲಾಗಿದೆ.

English summary
CM Kumaraswamy today attend a press meet but did not talk a single word to media people. All questions answeard by DCM G Parameshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X