ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಪ್ಯಾಕ್ ಸಲಹೆಗಳನ್ನು ಕಾಲಮಿತಿಯೊಳಗೆ ಜಾರಿಗೊಳಿಸಲು ಎಚ್ಡಿಕೆ ಸೂಚನೆ

By Nayana
|
Google Oneindia Kannada News

ಬೆಂಗಳೂರು, ಜೂನ್ 16: ಬೆಂಗಳೂರನ್ನು ಸ್ವಚ್ಛವಾಗಿಡಬೇಕಾದಲ್ಲಿ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯದಿಂದ ಮುಕ್ತಿ ಪಡೆಯುವುದು ಹೇಗೆ ಎನ್ನುವುದರ ಕುರಿತು ಬಿಪ್ಯಾಕ್‌ ನೀಡಿರುವ ಅಭಿಪ್ರಾಯವನ್ನು ಕಾಲಾವಧಿ ಒಳಗೆ ಪೂರ್ಣಗೊಳಿಸುವಂತೆ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಶನಿವಾರ ಬಿ ಪ್ಯಾಕ್ ಕಚೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು, ಬಿ ಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್, ಉಪಾಧ್ಯಕ್ಷ ಮೋಹನ್ ದಾಸ್ ಪೈ, ಸಿಇಓ ರೇವತಿ ಅಶೋಕ್, ಆರ್ ಕೆ ಮಿಶ್ರಾ, ಆನಂದ ಗುಂಡೂರಾವ್ ಅವರಿಂದ ಬೆಂಗಳೂರು ಅಭಿವೃದ್ದಿ ಕುರಿತು ಮಾಹಿತಿ ಪಡೆದರು.

ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪರಮೇಶ್ವರ್ ಭೇಟಿ ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪರಮೇಶ್ವರ್ ಭೇಟಿ

ಬೆಂಗಳೂರು ಅಭಿವೃದ್ದಿಗೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳು, ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್, ವೈಟ್ ಟಾಪಿಂಗ್, ಕಸ ವಿಲೇವಾರಿ ಮತ್ತು ಮೆಟ್ರೋ ಯೋಜನೆ ಕುರಿತಂತೆ ಮುಖ್ಯಮಂತ್ರಿಗಳಿಗೆ ಬಿ ಪ್ಯಾಕ್ ತಂಡ ತನ್ನ ನೋಟವನ್ನು ಹಂಚಿಕೊಂಡಿತು.

CM directs to implement B-PAC advises

ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕು. ಪೋಸ್ಟರ್ ಫ್ಲೆಕ್ಸ್ ರಹಿತವಾಗಿಸಬೇಕು, ಕಸ ವಿಲೇವಾರಿಗೆ ಆಧುನಿಕ ತಂತ್ರಜ್ಞಾನ ಬಳಸಬೇಕು ಎಂದು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತಾ ಬಿ ಪ್ಯಾಕ್ ತಂಡ ತಿಳಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು. ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿರುವ ಉಪ ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸಿ ಬೆಂಗಳೂರು ಅಭಿವೃದ್ದಿಗೆ ಇರುವ ಹಲವು ಏಜೆನ್ಸಿಗಳ ಸಭೆ ಕರೆಯುವುದಾಗಿ ತಿಳಿಸಿದರು. ಅವಶ್ಯವಿರುವ ಎಲ್ಲಾ ಕಾರ್ಯ ಒಂದು ವರ್ಷದೊಳಗೆ ಪೂರ್ಣಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

English summary
Chief minister H.D.Kumaraswamy has given direction to BBMP officials to implement advisories given by B-PAC to curb plastic usage in Bangalore city within limited time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X