ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಜಯಂತಿಗೆ ಗೈರು: ವಿಶ್ರಾಂತಿಯಲ್ಲಿರುವ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದೇನು?

|
Google Oneindia Kannada News

Recommended Video

Tipu Jayanti 2018 : ಕಾರ್ಯಕ್ರಮಕ್ಕೆ ಬರದೇ ಇರೋದಕ್ಕೆ ಕಾರಣ ತಿಳಿಸಿದ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು, ನವೆಂಬರ್ 10: ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿಯಿಂದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ವ್ಯಾಪಕ ಟೀಕೆಗೆ ಕೊನೆಗೂ ಸಿಎಂ ಕುಮಾರಸ್ವಾಮಿ ಮೌನ ಮುರಿದಿದ್ದಾರೆ.

ಶಾಸಕ ಪತ್ನಿ ಸಮೇತರಾಗಿ ಮೂರು ದಿನಗಳ ಕಾಲ ಮೈಸೂರು ಸಮೀಪದ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿಎಂ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ವ್ಯಾಪಕ ಟೀಕೆಗೆ ಕೊನೆಗೂ ಉತ್ತರ ನೀಡಿದ್ದು, ತಮ್ಮ ಆರೋಗ್ಯ ಸಂಬಂಧಿ ಕಾರಣದಿಂದಾಗಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸುತ್ತಿಲ್ಲ ಎಂದಿದ್ದಾರೆ.

ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಕ್ಕರ್ ಹಾಕಿದ್ದೇಕೆ? ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಕ್ಕರ್ ಹಾಕಿದ್ದೇಕೆ?

ಈ ಕುರಿತು ವಿಶ್ರಾಂತಿ ಪಡೆಯುತ್ತಿರುವ ರೆಸಾರ್ಟ್ ನಿಂದಲೇ ಸಂದೇಶ ರವಾನಿಸಿರುವ ಅವರು ವೈದ್ಯರ ಸಲಹೆ ಮೇರೆಗೆ 3 ದಿನಗಳ ಕಾಲ ವಿಶ್ರಾಂತಿಯಲ್ಲಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಟಿಪ್ಪು ಸುಲ್ತಾನ್ ಜಯಂತಿಯ ಶುಭ ಸಂದೇಶ ರವಾನಿಸಿರುವ ಕುಮಾರಸ್ವಾಮಿ ಹಜರತ್ ಟಿಪ್ಪು ಸುಲ್ತಾನರ ಆಡಳಿತ ಸುಧಾರಣಾ ಕ್ರಮಗಳು, ಪ್ರಯೋಗಶೀಲತೆಯ ಗುಣಗಳು ಅನುಕರಣೀಯ ಎಂದಿದ್ದಾರೆ.

ಎಚ್ಡಿಕೆ ತಾವು ಸಿಎಂ ಆದ್ರೆ ಟಿಪ್ಪು ಜಯಂತಿ ಆಚರಿಸೊಲ್ಲ ಎಂದಿದ್ರು: ಈಶ್ವರಪ್ಪಎಚ್ಡಿಕೆ ತಾವು ಸಿಎಂ ಆದ್ರೆ ಟಿಪ್ಪು ಜಯಂತಿ ಆಚರಿಸೊಲ್ಲ ಎಂದಿದ್ರು: ಈಶ್ವರಪ್ಪ

ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಮೂಢನಂಬಿಕೆಯ ವಿರೋಧಿಯಾದ ನಾನು ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎನ್ನುವುದು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ಟಿಪ್ಪು ಬಗ್ಗೆ ಬ್ರಿಟಿಷ್ ಇತಿಹಾಸಕಾರರಿಂದ ತಿಳಿದುಕೊಳ್ಳಬೇಕಾಗಿಲ್ಲ

ಟಿಪ್ಪು ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ವೈರಿಗಳಾಗಿದ್ದ ಬ್ರಿಟಿಷ್ ಇತಿಹಾಸಕಾರರಿಂದಲ್ಲ. ಟಿಪ್ಪು ಬಗ್ಗೆ ಮೈಸೂರು ಭಾಗದಲ್ಲಿ ಲಾವಣಿಗಳಿವೆ. ಅವುಗಳಲ್ಲಿ ಟಿಪ್ಪುವಿನ ದೇಶಪ್ರೇಮ,ಜಾತ್ಯತೀತ ಧೋರಣೆ,ಅಭಿವೃದ್ದಿಯ ಕಲ್ಪನೆಗಳ ಮಾಹಿತಿ ಇದೆ. ಈ ಲಾವಣಿ, ಪದ,ಹಾಡುಗಳೇನಿಜವಾದ ಇತಿಹಾಸ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ಮೂರು ದಿನ ವಿಶ್ರಾಂತಿ

ಕುಮಾರಸ್ವಾಮಿ ಮೂರು ದಿನ ವಿಶ್ರಾಂತಿ

ಅನಾರೋಗ್ಯದ ಕಾರಣದಿಂದಾಗಿ ಸಿಎಂ ಕುಮಾರಸ್ವಾಮಿ ಮೂರು ದಿನಗಳ ಕಾಲ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಾಗಾಗಿ ಅವರು ಟಿಪ್ಪು ಜಯಂತಿಗೆ ಗೈರಾಗಿದ್ದಾರೆ. ಈ ಕುರಿತು ಸ್ಪಷ್ಟ ಸಂದೇಶವನ್ನು ಕೂಡ ಅವರು ರವಾನಿಸಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿಗೆ ಗೈರಾಗಲು ಅನಾರೋಗ್ಯವೇ ಕಾರಣ ಹಾಗಾಗಿ ಬೇರೆ ರೀತಿಯ ತಪ್ಪು ಕಲ್ಪನೆಯನ್ನು ಮಾಡಿಕೊಳ್ಳುವುದು ಬೇಡ ಎಂದಿದ್ದಾರೆ.

ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?

ಬ್ಯಾಂಕ್ವೆಟ್ ಹಾಲ್‌ನಲ್ಲಿ ಟಿಪ್ಪು ಜಯಂತಿ

ಬ್ಯಾಂಕ್ವೆಟ್ ಹಾಲ್‌ನಲ್ಲಿ ಟಿಪ್ಪು ಜಯಂತಿ

ಈ ಹಿಂದೆ ಮೂರು ವರ್ಷಗಳು ಬ್ಯಾಂಕ್ವೆಟ್ ಹಾಲ್‌ನಲ್ಲಿಯೇ ಟಿಪ್ಪು ಜಯಂತಿ ಆಚರಣೆ ಮಾಡಲಾಗಿತ್ತು, ಆದರೆ ಹಲವು ಕಾರಣಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುವುದಾಗಿ ಸರ್ಕಾರ ನಿರ್ಧರಿಸಿತ್ತು.ಆದರೆ ಭದ್ರತೆ ದೃಷ್ಟಿಯಿಂದ ಅಂತಿಮವಾಗಿ ಬ್ಯಾಂಕ್ವೆಟ್ ಹಾಲ್‌ನಲ್ಲಿಯೇ ಟಿಪ್ಪು ಜಯಂತಿಯನ್ನು ಮಾಡಲು ನಿರ್ಧರಿಸಿದೆ.

ಟಿಪ್ಪು ಜಯಂತಿ, ಕೊಡಗಿನಲ್ಲಿ ತೀವ್ರ ಹೋರಾಟ

ಟಿಪ್ಪು ಜಯಂತಿ, ಕೊಡಗಿನಲ್ಲಿ ತೀವ್ರ ಹೋರಾಟ

ಟಿಪ್ಪು ಜಯಂತಿ ವಿರುದ್ಧ ಕೊಡಗಿನಲ್ಲಿ ತೀವ್ರ ಪ್ರತಿಭಟನೆ ಆರಂಭವಾಗಿದೆ.ಕೊಡಗು, ಮಂಗಳೂರು, ಮಂಡ್ಯ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕೊಡಗಿನಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಇದಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ಜಿಲ್ಲೆಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

ಇಂದು ಟಿಪ್ಪು ಜಯಂತಿ: ಪ್ರತಿಭಟನೆ, ನಿಷೇಧಾಜ್ಞೆ, ಕೊಡಗು ಬಂದ್ಇಂದು ಟಿಪ್ಪು ಜಯಂತಿ: ಪ್ರತಿಭಟನೆ, ನಿಷೇಧಾಜ್ಞೆ, ಕೊಡಗು ಬಂದ್

English summary
Chief minister H.D.Kumaraswamy has clarified that he had advice from the doctors to take some rest following his health issues and that is the only reason for not attending Tipu Jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X