ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಲಸೆ ಕಾರ್ಮಿಕರಿಗೆ ನಗರ ಬಿಟ್ಟು ಹೋಗದಂತೆ ಯಡಿಯೂರಪ್ಪ ಮನವಿ

|
Google Oneindia Kannada News

ಬೆಂಗಳೂರು, ಮೇ 5: ಕೆಲಸ ಹುಡುಕಿಕೊಂಡು ದೇಶದ ಪ್ರಮುಖ ನಗರಗಳಿಗೆ ಬಂದಿದ್ದ ಕಾರ್ಮಿಕರು, ಈಗ ಕೊರೊನಾ ವೈರಸ್ ಭೀತಿ ಮತ್ತು ಲಾಕ್‌ಡೌನ್‌ ಸಮಸ್ಯೆಯಿಂದ ನಗರಗಳನ್ನು ಬಿಟ್ಟು ಸ್ವ-ಗ್ರಾಮಗಳಿಗೆ ತೆರಳುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೂ ಅನುಮತಿ ನೀಡಿದ್ದು, ರಾಜ್ಯ ಸರ್ಕಾರಗಳು ಬಸ್ ಮತ್ತು ರೈಲಿನ ವ್ಯವಸ್ಥೆ ಮಾಡಿಕೊಟ್ಟಿದೆ.

ಆದರೆ, ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 'ವಲಸೆ ಕಾರ್ಮಿಕರು ರಾಜ್ಯ ಬಿಟ್ಟು ಹೋಗಬೇಡಿ, ನಿಮಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತೇವೆ. ಇಲ್ಲಿ ಉಳಿದುಕೊಂಡು ರಾಜ್ಯ ಆರ್ಥಿಕತೆ ಪುನರಾರಂಭಕ್ಕೆ ಸಹಾಯ ಮಾಡಿ' ಎಂದು ಮನವಿ ಮಾಡಿದ್ದಾರೆ.'

ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ 2 ದಿನ ವಿಸ್ತರಣೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ 2 ದಿನ ವಿಸ್ತರಣೆ

'ಉಳಿದ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದಲ್ಲಿ ಕೊವಿಡ್ ಹರಡುವಿಕೆ ನಿಯಂತ್ರಣದಲ್ಲಿದೆ. ರೆಡ್ ಜೋನ್ ಬಿಟ್ಟು ರಾಜ್ಯಾದ್ಯಂತ ಆರ್ಥಿಕ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಸಜ್ಜಾಗುತ್ತಿದ್ದೇವೆ. ಕಾರ್ಮಿಕರು ಯಾರೂ ನಿಮ್ಮ ರಾಜ್ಯಗಳಿಗೆ ಹೋಗಬೇಡಿ. ನೀವು ಇಲ್ಲಿ ಉಳಿದುಕೊಳ್ಳಿ, ನಿಮಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತೆ. ಆದಷ್ಟೂ ಬೇಗ ಕಟ್ಟಡ ನಿರ್ಮಾನ ಕೆಲಸ, ಇತರೆ ಕೈಗಾರಿಕೆ ಕೆಲಸ ಆರಂಭಿಸುವ ಬಗ್ಗೆ ನಿರ್ಧರಿಸಿದ್ದೇವೆ' ಎಂದು ಹೇಳಿದ್ದಾರೆ.

ನಗರದಲ್ಲಿಂದು ನಿರ್ಮಾಣ ವಲಯದ ಪ್ರಮುಖರ ಜೊತೆ ಸಭೆ ನಡೆಸಿದ ಸಿಎಂ ರೆಡ್‌ಜೋನ್ ಹೊರತುಪಡಿಸಿ ಉಳಿದ ಎಲ್ಲ ಕಡೆ ವ್ಯಾಪಾರ, ವಹಿವಾಟು, ಕಟ್ಟಡ ನಿರ್ಮಾಣ ಕೆಲಸ, ಕೈಗಾರಿಕೆ ಕಾರ್ಖಾನೆಗಳ ಕೆಲಸ ಅಗತ್ಯ ಪ್ರಮಾಣದಲ್ಲಿ ಆರಂಭಿಸಬಹುದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Travel Of Migrant Workers Was Prohibited

ಈ ಸಂಬಂಧ ಸಚಿವರ ಜೊತೆ ಚರ್ಚೆ ನಡೆಸಿದ ಯಡಿಯೂರಪ್ಪ ''ವಲಸೆ ಕಾರ್ಮಿಕರನ್ನು ಹೋಗದಂತೆ ಮನವೊಲಿಸಿ, ಬಿಲ್ಡರ್‌ಗಳು ಕಾರ್ಮಿಕರಿಗೆ ಅಗತ್ಯ ವಸ್ತುಗಳು ಹಾಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟು ಅವರನ್ನು ಹೋಗದಂತೆ ನೋಡಿಕೊಳ್ಳಿ'' ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

English summary
COVID19 situation in the state is under control as compared to other states. Due to this, travel of migrant workers was prohibited- CM yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X