ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ : ಕ್ಷೌರಿಕರ ಸಂಕಷ್ಟಕ್ಕೆ ಮಿಡಿದ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಮೇ 6: ಕೊರೊನಾ ಹಾವಳಿಯಿಂದಾಗಿ ಕಳದ 45 ದಿನಗಳಿಂದ ಲಾಕ್‌ಡೌನ್ ಜಾರಿಯಾಗಿತ್ತು. ಸಮಾಜದಲ್ಲಿ ಇದರಿಂದ ಎಲ್ಲ ವರ್ಗದವರಿಗೂ ಬಿಸಿ ತಟ್ಟಿದೆ. ಅದರಲ್ಲೂ ಅಂದು ಕೆಲಸ ಮಾಡಿದರೆ ಮಾತ್ರ ಊಟ ಎನ್ನುವಂತೆ ಇರುವ ಕ್ಷೌರಿಕರ ವೃತ್ತಿಯಲ್ಲಿ ಇರುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ಎಲ್ಲ ವರ್ಗದ ಜನರ ನೆರವಿಗೆ ಕರ್ನಾಟಕ ಸರಕಾರ ಸ್ಪಂದಿಸಿದ್ದು 1,610 ಕೋಟಿ ರೂ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಇದರಲ್ಲಿ ಕ್ಷೌರಿಕಕರಿಗೂ ನೆರವು ನೀಡುವುದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಕೊರೊನಾ ಕಂಟಕ: 1,610 ಕೋಟಿ ರೂ ಬಿಡುಗಡೆ ಮಾಡಿದ ರಾಜ್ಯ ಸರ್ಕಾರಕೊರೊನಾ ಕಂಟಕ: 1,610 ಕೋಟಿ ರೂ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ಸುಮಾರು 2,30,000 ಕ್ಷೌರಿಕ ವೃತ್ತಿಯಲ್ಲಿ ಇದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದು, ಇವರಿಗೆ ಕೊರೊನಾ ಸಂಕಷ್ಟ ಪರಿಹಾರವಾಗಿ 5,000 ರೂ.ಗಳನ್ನು (ಒಂದು ಬಾರಿ ಮಾತ್ರ) ಸರಕಾರ ಘೋಷಣೆ ಮಾಡಿದೆ.

5000 Rupees for Barber Shops Labours Says CM BS Yediyurappa

ರಾಜ್ಯದ ಆರ್ಥಿಕ ಸ್ಥಿತಿಗತಿ ಉತ್ತಮ ಇಲ್ಲದೇ ಇದ್ದರೂ ರೈತರು ಹಾಗೂ ಸಣ್ಣ ಪುಟ್ಟ ಉದ್ಯೋಗಸ್ಥರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

English summary
5000 Rupees for Barber Shops Labours Says CM BS Yediyurappa. this is lockdown relief fund he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X