ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Hampi Utsav 2023: ಹಂಪಿ ಉತ್ಸವದ ಲಾಂಛನ ಬಿಡುಗಡೆ, ಹೀಗಿದೆ ಐತಿಹಾಸಿಕ ನಗರಿಯ ಉತ್ಸವದ ಲೋಗೋ

|
Google Oneindia Kannada News

ಬೆಂಗಳೂರು, ಜನವರಿ, 20: ಐತಿಹಾಸಿಕ, ವಿಶ್ವವಿಖ್ಯಾತ ನಗರ ಹಂಪಿಯ ಉತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಶುಕ್ರವಾರ ಮುಖ್ಯಮಂತ್ರಿಗ ಬಸವರಾಜ ಬೊಮ್ಮಾಯಿ ಹಂಪಿ ಉತ್ಸವ 2023 ರ ಭಿತ್ತಿಪತ್ರ ಹಾಗೂ ಲಾಂಛನ ಬಿಡುಗಡೆ ಮಾಡಿದ್ದಾರೆ.

ಇದೇ ತಿಂಗಳು 27 ರಂದು ಹಂಪಿ ಉತ್ಸವ ಆರಂಭವಾಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಈ ಹಿಂದೆ ಮಾಹಿತಿ ನೀಡಿದ್ದರು.

ತಹಶೀಲ್ದಾರ್ ಕೆಲಸಕ್ಕೆ ಪ್ರಧಾನಿ ಕರೆಸಿದ ಸಿಎಂ ಬಸವರಾಜ ಬೊಮ್ಮಾಯಿ: ಎಎಪಿ ಲೇವಡಿತಹಶೀಲ್ದಾರ್ ಕೆಲಸಕ್ಕೆ ಪ್ರಧಾನಿ ಕರೆಸಿದ ಸಿಎಂ ಬಸವರಾಜ ಬೊಮ್ಮಾಯಿ: ಎಎಪಿ ಲೇವಡಿ

ಜನವರಿ 27, 28 ಮತ್ತು 29 ರಂದು ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿಪಡಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನವರಿ 27 ರಂದು ಉದ್ಘಾಟನೆ ಮಾಡಲಿದ್ದಾರೆ.

CM Basavaraj Bommai Launched Hampi Utsav 2023 Logo and Poster

ಶುಕ್ರವಾರ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಎಂಟಿಬಿ ನಾಗರಾಜ್, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವೆ ಶಶಿಕಲಾ ಜೊಲ್ಲೆ, ಗೋವಿಂದ್ ಕಾರಜೋಳ, ಆನಂದ್ ಸಿಂಗ್ ಹಂಪಿ ಉತ್ಸವ 2023 ರ ಭಿತ್ತಿಪತ್ರ ಹಾಗೂ ಲಾಂಛನ ಬಿಡುಗಡೆ ಮಾಡಿದ್ದಾರೆ.

ಈ ಬಾರಿಯ ಹಂಪಿ ಉತ್ಸವವನ್ನು ಅದ್ಧೂರಿಯಿಂದ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾ ವಹಿಸಲಾಗುತ್ತಿದೆ. ಉತ್ಸವಕ್ಕೆ ಬರುವವರಿಗೆ ಶುದ್ಧ ಕುಡಿಯುವ ನೀರು, ಆಹಾರ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇನ್ನು, ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಗಣ್ಯ ವ್ಯಕ್ತಿಗಳು ಹಾಗೂ ಕಲಾವಿದರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ. ಸ್ಥಳೀಯ ಕಲಾತಂಡಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ದಸರಾ ಹಬ್ಬದ ಮಾದರಿಯಲ್ಲಿ ಹಂಪಿ ಹಾಗೂ ಹೊಸಪೇಟೆಯಲ್ಲಿ ದೀಪದ ಆಲಂಕಾರ ಮಾಡುವ ಬಗ್ಗೆ ಯೋಜಿಸಲಾಗಿದೆ. ಇದಕ್ಕಾಗಿ ದೀಪಾಲಂಕಾರ ಸಮಿತಿ ರಚನೆ ಮಾಡಲಾಗಿದ್ದು ಸದರಿ ಸಮಿತಿಯ ಸದಸ್ಯರು ಹೊಸಪೇಟೆ, ಕಮಲಾಪುರ, ಹಂಪಿ ಈ ಮೂರು ಸ್ಥಳಗಳ ಮುಖ್ಯ ರಸ್ತೆಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲು ಸಿದ್ಧತೆ ನಡೆಸಲಾಗಿದೆ.

CM Basavaraj Bommai Launched Hampi Utsav 2023 Logo and Poster

ಉತ್ಸವಕ್ಕಾಗಿ ಹಂಪಿ ಪ್ರದೇಶದಲ್ಲಿ ಸಂಪೂರ್ಣ ಸಿಸಿಟಿವಿಗಳನ್ನು ಅಳವಡಿಸಬೇಕು. ಕಡ್ಡಿರಾಂಪುರ ಸ್ವಾಗತ ಕಮಾನಿನಿಂದ ಕಡ್ಡಿರಾಂಪೂರ, ಕೃಷ್ಣಾ ದೇವಸ್ಥಾನ, ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಮಾರ್ಗದ ಮೂಲಕ ಕಮಲಾಪುರದವರೆಗೆ ಏಕಮುಖ ಮಾರ್ಗ ಸಂಚಾರ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ .

English summary
Chief minister Basavaraj Bommai Launched Hampi Utsav 2023 Logo and Poster in Bengaluru. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X