• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು: ಮಳೆ ನೀರು ಮನೆಗೆ ನುಗ್ಗಿದವರಿಗೆ 25 ಸಾವಿರ ರೂ. ಪರಿಹಾರ, ಊಟದ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಮೇ 18: ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದು ಜನಸಾಮಾನ್ಯರು ಹಲವೆಡೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯಿಂದ ಹಾನಿಗೊಳಗಾದ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರಕ್ಕೆ, ಆರ್‌.ಆರ್. ನಗರ ಸಹಿತ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಸಚಿವರಾದ ಆರ್. ಅಶೋಕ್, ಮುನಿರತ್ನ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹಿತ ಹಲವರು ಸಿಎಂ ಜೊತೆಗಿದ್ದರು.

ಮಳೆಯಿಂದ ನೀರು ನುಗ್ಗಿದ ಮನೆಗಳ ಒಳಗೆ ಹೋಗಿ ಪರಿಸ್ಥಿತಿ ನೋಡಿದರು. ಕುಟುಂಬದವರಿಗೆ ಧೈರ್ಯ ತುಂಬಿ ಪರಿಹಾರದ ಭರವಸೆ ನೀಡಿದರು. ಯಾವ ಮನೆಗಳಿಗೆ ನೀರು ನುಗ್ಗಿದೆಯೋ ಕೂಡಲೆ ಬಿಬಿಎಂಪಿ ಸ್ವಚ್ಛತಾ ಸಿಬ್ಬಂದಿ ನೀರನ್ನು ಹೊರಗೆ ಹಾಕುವ ಕೆಲಸ ಮಾಡಬೇಕು, ಅಗತ್ಯ ಇರುವಲ್ಲಿ ಪಂಪ್‌ಸೆಟ್‌ಗಳ ಮೂಲಕ ನೀರು ಹೊರಹಾಕಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್.ಆರ್‌. ನಗರದಲ್ಲಿ ರಾಜಕಾಲುವೆ ಅತೀ ಅಗಲವಾದ ರಾಜಕಾಲುವೆ ಇದೆ. 300 ಮೀಟರ್ ವಿಸ್ತಾರ ಹೊಂದಿದೆ. ಹಣ ಕೊಟ್ಟಿದ್ದೇವೆ. ಈ ವರ್ಷ ಕಾಮಗಾರಿ ಪ್ರಾರಂಭ ಮಾಡುತ್ತೇವೆ. ಮಳೆ ಹೆಚ್ಚಾದಾಗ ತಗ್ಗು ಪ್ರದೇಶದಲ್ಲಿ ನೀರು ನುಗ್ಗುತ್ತದೆ. ಇಡೀ ವಾರ್ಡ್‌ಗಳಲ್ಲಿ ಕೊಳಚೆ ನೀರು ಕಾಲುವೆಗಳನ್ನು ವಾರ್ಡ್‌ ಮಟ್ಟದಲ್ಲಿ ಸ್ವಚ್ಛಗೊಳಿಸಬೇಕು. ದೊಡ್ಡ ಕಾಲುವೆಗಳನ್ನು ಸರ್ಕಾರ ವಿಶೇಷವಾಗಿ ಅನುದಾನ ನೀಡಿ ಸ್ವಚ್ಛಗೊಳಿಸುವ ಕೆಲಸ ಮಾಡಲಾಗುವುದು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

25,000 ರೂ. ಪರಿಹಾರ

25,000 ರೂ. ಪರಿಹಾರ

"ಮನೆಗೆ ನೀರು ನುಗ್ಗಿಯಾದಲ್ಲಿ 25,000 ರೂ. ಪರಿಹಾರ, ಅಗತ್ಯ ಇರುವ ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಣ್ಣೀರಿಟ್ಟ ಮಹಿಳೆಯರು:

ಕಣ್ಣೀರಿಟ್ಟ ಮಹಿಳೆಯರು:

"ಮುಖ್ಯಮಂತ್ರಿ ಮಳೆ ಹಾನಿ ಪ್ರದೇಶಗಳ ಭೇಟಿ ವೇಳೆ ಮಹಿಳೆಯರು ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಪ್ರತಿ ವರ್ಷವೂ ಇದೇ ರೀತಿ ಸಮಸ್ಯೆ ಇದೆ. ಇಲ್ಲಿನ ಜನಪ್ರತಿನಿಧಿಗಳು ನಮ್ಮನ್ನು ನೋಡುತ್ತರೆ ಇದ್ದಾರೆ. ಆದರೆ, ಯಾವುದೇ ಪರಿಹಾರ ಆಗುತ್ತಿಲ್ಲ. ಮನೆಯಲ್ಲಿ ಹಿರಿಯರು, ಮಕ್ಕಳು ಇದ್ದಾರೆ. ಮಳೆ ಬಂದಾಗ ನಾವು ಎಲ್ಲಿಗೆ ಹೋಗಬೇಕು," ಎಂದು ಕಣ್ಣೀರಿಟ್ಟು ಬೇಡಿಕೊಂಡ ಪ್ರಸಂಗ ನಡೆಯಿತು. ಮಹಿಳೆಯರನ್ನು ಸಮಾಧಾನ ಪಡಿಸಿದ ಮುಖ್ಯಮಂತ್ರಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ನೆರವಾಗುತ್ತದೆ ಎಂದು ಹೇಳಿದರು.

ಕಂಟ್ರೋಲ್ ರೂಂಗೆ ಸೂಚನೆ:

ಕಂಟ್ರೋಲ್ ರೂಂಗೆ ಸೂಚನೆ:

"ಬೆಂಗಳೂರಿನ ಹಲವೆಡೆ 100ಎಂಎಂಗೂ ಹೆಚ್ಚಿನ ಮಳೆ ಬಂದಿದೆ. ನಗರದಲ್ಲಿ 80 ಮಿ.ಮೀ. ಮಳೆ ಬಂದರೆ ಸಾಕಷ್ಟು ಸಮಸ್ಯೆ ಆಗುತ್ತದೆ. ಹೆಚ್ಚಿನ ಮಳೆಯನ್ನು ಬೆಂಗಳೂರು ತಡೆದುಕೊಳ್ಳುವುದಿಲ್ಲ. ಇದು ಇಂದಿನ ಸಮಸ್ಯೆ ಅಲ್ಲ, ಮೊದಲಿನಿಂದಲೂ ಇದೆ. ಟಾಸ್ಕ್‌ಫೋರ್ಸ್, ಹೋಂ ಗಾರ್ಡ್, ಎಸ್‌ಟಿಆರ್‌ಫ್ ಸಹಿತ ಹಲವು ಪಡೆಗಳನ್ನು ಸನ್ನದ್ಧವಾಗಿ ಇಟ್ಟುಕೊಳ್ಳುವಂತೆ ಬಿಬಿಎಂಪಿ ಆಯುಕ್ತರು ಮತ್ತು ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಮಳೆಗಾಗಿ ವಿಶೇಷ ಸಹಾಯವಾಣಿ ಪ್ರಾರಂಭಿಸುವಂತೆಯೂ ಸೂಚಿಸಲಾಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ‌ಹಲವು ಪ್ರದೇಶದಲ್ಲಿ ಭಾರಿ ಮಳೆ

ಬೆಂಗಳೂರಿನ ‌ಹಲವು ಪ್ರದೇಶದಲ್ಲಿ ಭಾರಿ ಮಳೆ

ವಿದ್ಯಾಪೀಠ 113 mm ಮಳೆ

ಸಂಪಂಗಿರಾಮನಗರ 100.3 mm ಮಳೆ

ನಾಗಪುರ 100 mm ಮಳೆ

ಅಗ್ರಹಾರ ದಾಸರಹಳ್ಳಿ 97.5 mm ಮಳೆ

ಹಂಪಿ ನಗರ 93.5 mm ಮಳೆ

ರಾಜಮಹಲ್ ಗುಟ್ಟಹಳ್ಳಿ 95 mm ಮಳೆ

ದಯಾನಂದ ನಗರ 82 mm ಮಳೆ

ಬೆಂಗಳೂರಿನಲ್ಲಿ ಸುರಿದ ವರ್ಷದಾರೆ ರಾತ್ರಿ 9:45 ರ ವೇಳೆಗೆ ಒಟ್ಟಾರೆ ಬೆಂಗಳೂರಲ್ಲಿ 95 mm ಮಳೆಯಾಗಿದೆ ಎನ್ನಲಾಗಿದೆ. ಇನ್ನು ಹಲವು ಪ್ರದೇಶಗಳಲ್ಲಿ 100 mm ಗಿಂತ ಹೆಚ್ಚು ಮಳೆಯಾಗಿದೆ. ಕೇವಲ ಎರಡುಗಂಟೆಯಲ್ಲೇ 100 mm ಹೆಚ್ಚು ಮಳೆಯಾಗಿದೆ.

   ಡೇವಿಡ್ ಹೋರಾಟ ವ್ಯರ್ಥ:ಮುಂಬೈ ವಿರುದ್ಧ ರೋಚಕ ಗೆಲುವು ಪಡೆದ ಹೈದರಾಬಾದ್ | Oneindia Kannada
   ಬಸವರಾಜ ಬೊಮ್ಮಾಯಿ
   Know all about
   ಬಸವರಾಜ ಬೊಮ್ಮಾಯಿ

   English summary
   Bengaluru Rains : CM Basavaraj Bommai Announces Compensation of Rs 25,000 and food arrangements for Families Affected Due to Bangalore Rains.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X