ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರ ಸಂತೆಯಲ್ಲಿ ಮಿಂದೆದ್ದ ಬೆಂಗಳೂರು ಜನ...!

|
Google Oneindia Kannada News

ಬೆಂಗಳೂರು, ಜನವರಿ 5: ಇಲ್ಲಿನ ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರ ಸಂತೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟಿಸಿದರು.

"ಮನೆಗೊಂದು ಕಲಾಕೃತಿ' ಶೀರ್ಷಿಕೆಯಡಿ ಆಯೋಜಿಸಿದ್ದ ಈ ಚಿತ್ರಸಂತೆಯನ್ನು ಸಾವಿರಾರು ಬೆಂಗಳೂರು ಜನ ಕಣ್ತುಂಬಿಕೊಂಡರು. ರೈತರಿಗೆ ಈ ಬಾರಿಯ ಚಿತ್ರಸಂತೆಯನ್ನು ಅರ್ಪಣೆ ಮಾಡಲಾಗಿತ್ತು. ಕುಮಾರಕೃಪ ರಸ್ತೆಯಿಂದ ಕ್ರಸೆಂಟ್​ ರಸ್ತೆ ತನಕ ರಸ್ತೆ ಬಂದ್​ ಮಾಡಲಾಗಿತ್ತು. ಚಿತ್ರ ಸಂತೆಯಲ್ಲಿ ರಾಜ್ಯದ ಕಲಾವಿದರು ಸೇರಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಒಡಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ 1500ಕ್ಕೂ ಹೆಚ್ಚಿ ಕಲಾವಿದರು ಭಾಗಿಯಾಗಿದ್ದರು. ಅಪರೂಪದ ಕಲಾಕೃತಿಗಳು ಗಮನ ಸೆಳೆದವು.

ಮನಕಲುಕಿದ ನೆರೆ ಹಾವಳಿ ಚಿತ್ರಗಳು

ಮನಕಲುಕಿದ ನೆರೆ ಹಾವಳಿ ಚಿತ್ರಗಳು

ಚಿತ್ರ ಸಂತೆಯಲ್ಲಿ ಕಳೆದ ಮಳೆಗಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ನೆರೆ ಹಾವಳಿ ಪ್ರದರ್ಶನ ಗಮನ ಸೆಳೆಯಿತು. ಕರ್ನಾಟಕ ಫೋಟೊ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ವಿಶಿಷ್ಟ ಪ್ರದರ್ಶನ ಏರ್ಪಡಿಸಲಾಗಿತ್ತು. ನೆರೆ ಸಂದರ್ಭದಲ್ಲಿ ಉಂಟಾದ ಮನಕಲುಕುವ ಪರಿಸ್ಥಿತಿಗಳು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲಾಗಿತ್ತು.

ಬೆಂಗಳೂರಿನಲ್ಲೇ ತೆರೆದುಕೊಂಡ ಕ್ರಿಸ್ ಮಸ್ ಆಚರಣೆಯ 'ಹೊಸಲೋಕ'!ಬೆಂಗಳೂರಿನಲ್ಲೇ ತೆರೆದುಕೊಂಡ ಕ್ರಿಸ್ ಮಸ್ ಆಚರಣೆಯ 'ಹೊಸಲೋಕ'!

ಸಿಎಂ ಏನಂದ್ರು?

ಸಿಎಂ ಏನಂದ್ರು?

ಚಿತ್ರ ಸಂತೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಚಿತ್ರಸಂತೆ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರಕಲೆಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಣೆ ಮಾಡಿರುವುದು ನನ್ನ ಮನಸ್ಸಿಗೆ ಹತ್ತಿರವಾಗಿದೆ. ಗ್ರಾಮೀಣ ಸ್ವರಾಜ್ಯದ ವಿಚಾರ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ. ಬಜೆಟ್ ನಲ್ಲಿ 1 ಕೋಟಿ ರೂ ಕೊಡುವ ಮೂಲಕ ನಿಮ್ಮ ಸರ್ಕಾರ ಜೊತೆಗಿದೆ ಎಂದು ಹೇಳಲು ಹರ್ಷ ಪಡುತ್ತೇನೆ ಎಂದು ಹೇಳಿದರು.

ಬಿ ಎಲ್ ಶಂಕರ ಮನವಿ

ಬಿ ಎಲ್ ಶಂಕರ ಮನವಿ

ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿಎಲ್ ಶಂಕರ್ ಅವರು ಸಿಎಂ ಯಡಿಯೂರಪ್ಪ ಬಳಿ ಚಿತ್ರಕಲಾ ಪರಿಷತ್ ಬೆಳವಣಿಗೆಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಪೂರ್ಣಚಂದ್ರ ತೇಜಸ್ವಿ ಹೆಸರಲ್ಲಿ ಜಾಗ ಕೇಳಿದ್ವಿ, ಅದನ್ನು ಕೊಟ್ಟಿದ್ದಾರೆ. ಚಿತ್ರಸಂತೆಗೆ ಎಷ್ಟು ಖರ್ಚಾಗುತ್ತೋ ಅಷ್ಟರಲ್ಲಿ ಅರ್ಧ ವೆಚ್ಚ ಭರಿಸಬೇಕು. ಈ ಬಾರಿ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಹಣವನ್ನ ಚಿತ್ರಸಂತೆಗೆ ಕೊಡಬೇಕು. ಡಿಸೈನ್ ಕಾಲೇಜ್ ಮಾಡ್ಬೇಕು ಅನ್ನೋ ಉದ್ದೇಶ ಇದ್ದು, ಇದಕ್ಕೆ ಪ್ರೊತ್ಸಾಹ ನೀಡಬೇಕು ಎಂದರು.

ಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು ಕೃತಿ ಬಿಡುಗಡೆಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು ಕೃತಿ ಬಿಡುಗಡೆ

ದಸರಾ ಉತ್ಸವದಂತೆ ಮಾಡಿ

ದಸರಾ ಉತ್ಸವದಂತೆ ಮಾಡಿ

ರೈತಗೀತೆಯೊಂದಿಗೆ ಚಿತ್ರ ಸಂತೆ ಆರಂಭಗೊಂಡು ಗಮನ ಸೆಳೆದಿತ್ತು. ಮೈಸೂರು ದಸರಾ-ಹಂಪಿ ಉತ್ಸವದಂತೆ ಚಿತ್ರಸಂತೆಯನ್ನೂ ದೊಡ್ಡ ಮಟ್ಟದ ಸಮಾರಂಭವಾಗಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಚಿತ್ರಕಲಾಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಬೇಡಿಕೆ ಇಟ್ಟರು. ಸಂಸದ ಪಿ ಸಿ ಮೋಹನ್, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.

English summary
CM B S Yediyurappa Inaugurates Bengaluru Chitra Sante On Sunday. it was held in Bengaluru Chitra Kala parishath, Kumarakrupa road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X