ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಗಳ ಜೊತೆ ಸಿಎಂ ಸಭೆ: 'ರಾಜ್ಯ ಲಾಕ್‌ಡೌನ್‌' ಕುರಿತು ಅಂತಿಮ ತೀರ್ಮಾನ!

|
Google Oneindia Kannada News

ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಮತ್ತೊಮ್ಮೆ ಲಾಕ್‌ಡೌನ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಮಧ್ಯೆ ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

Recommended Video

Rashid Khan : ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ | Oneindia Kannada

ಬೆಂಗಳೂರು ಮಾತ್ರವಲ್ಲ ಲಾಕ್‌ಡೌನ್ ಮಾಡಿದ್ರೆ ಸಾಲದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿದೆ. ಗಂಭೀರ ಜಿಲ್ಲೆಗಳಗಳಲ್ಲಾದರೂ ಲಾಕ್‌ಡೌನ್‌ ಮಾಡಿ ಎಂದು ವಿಪಕ್ಷಗಳು ಹೇಳುತ್ತಿದೆ.

'ಮುಖ್ಯಮಂತ್ರಿಗಳೇ ಗಡಿಭಾಗದಲ್ಲೂ ವಿಪರೀತ ಸೋಂಕಿದೆ'- ಕಾಂಗ್ರೆಸ್ ನಾಯಕ'ಮುಖ್ಯಮಂತ್ರಿಗಳೇ ಗಡಿಭಾಗದಲ್ಲೂ ವಿಪರೀತ ಸೋಂಕಿದೆ'- ಕಾಂಗ್ರೆಸ್ ನಾಯಕ

ಈ ಎಲ್ಲ ಬೆಳವಣಿಗೆ ಗಮನಿಸಿದ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಳ ಜೊತೆ ಸಭೆ ಮಾಡಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳ ಸಭೆ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ. ಮುಂದೆ ಓದಿ...

ಎರಡು ಹಂತದಲ್ಲಿ ಡಿಸಿ ಸಭೆ

ಎರಡು ಹಂತದಲ್ಲಿ ಡಿಸಿ ಸಭೆ

ಗೃಹ ಕಚೇರಿ ಕೃಷಾದಲ್ಲಿ ಪ್ರತಿಕ್ರಿಯೆ ನೀಡಿದ ಆರ್ ಅಶೋಕ್ 'ಸಿಎಂ‌ ನೇತ್ರತ್ವದಲ್ಲಿ ಡಿಸಿಗಳ ಸಭೆ ನಡೆಯುತ್ತದೆ. ಹೆಚ್ಚು ಪಾಸಿಟಿವ್ ಕೇಸ್ ಗಳ ಬಂದಿರುವ ಜಿಲ್ಲೆಗಳ ಸಭೆ ಬೆಳಿಗ್ಗೆ ಮಾಡಲಾಗುತ್ತದೆ. ಸ್ವಲ್ಪ ಕಡಿಮೆ ಕೇಸ್ ಗಳು ಇರೋ ಕಡೆ ಸಂಜೆ ಸಭೆ. ಬೆಂಗಳೂರಿನಲ್ಲಿ ಒಂದು ವಾರ ಲಾಕ್ ಡೌನ್ ಮಾಡಲಾಗಿದೆ. ಕೆಲ‌ ಜಿಲ್ಲೆಗಳಲ್ಲಿ ಕೂಡ ಪ್ರಕರಣ ಹೆಚ್ಚಾಗುತ್ತಾ ಇದೆ. ಈ ಬಗ್ಗೆ ಡಿಸಿಗಳ ಸಭೆ ಬಳಿಕ ಸಿಎಂ ಅಂತಿಮ ತೀರ್ಮಾನ ಮಾಡುತ್ತಾರೆ' ಎಂದು ತಿಳಿಸಿದ್ದಾರೆ.

ಸಚಿವರು, ಡಿಸಿಗಳ ಜೊತೆ ಚರ್ಚಿಸಿ ತೀರ್ಮಾನ

ಸಚಿವರು, ಡಿಸಿಗಳ ಜೊತೆ ಚರ್ಚಿಸಿ ತೀರ್ಮಾನ

ಬೆಂಗಳೂರಿನಲ್ಲಿ ಮಾತ್ರ ಲಾಕ್‌ಡೌನ್‌ ಮಾಡಿದ್ರೆ ಸಾಲದು, ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಜಿಲ್ಲೆಗಳಲ್ಲೂ ಲಾಕ್‌ಡೌನ್ ಮಾಡಬೇಕು ಎಂದು ಕುಮಾರಸ್ವಾಮಿ, ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಆರ್ ಅಶೋಕ್, 'ಉಳಿದ ಜಿಲ್ಲೆಗಳಲ್ಲೂ ಲಾಕ್ ಡೌನ್ ಮಾಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಸೇರಿದಂತೆ ಸಚಿವರ ಜೊತೆ ಚರ್ಚೆ ಮಾಡಿನೇ ತೀರ್ಮಾನ ಮಾಡಬೇಕಾಗುತ್ತೆ' ಎಂದು ಹೇಳಿದ್ದಾರೆ.

ಬೆಂಗಳೂರು ಲಾಕ್‌ಡೌನ್‌: ಸರ್ಕಾರದ ಮುಂದೆ ಮತ್ತೊಂದು ಬೇಡಿಕೆಯಿಟ್ಟ ದೇವೇಗೌಡಬೆಂಗಳೂರು ಲಾಕ್‌ಡೌನ್‌: ಸರ್ಕಾರದ ಮುಂದೆ ಮತ್ತೊಂದು ಬೇಡಿಕೆಯಿಟ್ಟ ದೇವೇಗೌಡ

ತೊಂದರೆಯಾಗದಂತೆ ಕ್ರಮ ವಹಿಸುತ್ತೇವೆ

ತೊಂದರೆಯಾಗದಂತೆ ಕ್ರಮ ವಹಿಸುತ್ತೇವೆ

ಇಡೀ ರಾಜ್ಯ ಲಾಕ್ ಡೌನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್ 'ಈ ಹಿಂದೆ ಲಾಕ್ ಡೌನ್ ಮಾಡಿದಾಗ ಸಾಕಷ್ಟು ದಿನಗೂಲಿ ನೌಕರರಿಗೆ ಸಮಸ್ಯೆ ಆಗಿದೆ. ಹಾಗಾಗೀ ಈ ಬಾರಿ ಏನೇ ತೀರ್ಮಾನ ಮಾಡಿದ್ರು ಸೂಕ್ತ ಕ್ರಮ ಕೈಗೊಂಡು ಮುಂದಿನ ತೀರ್ಮಾನ ಮಾಡುತ್ತೇವೆ' ಎಂದಿದ್ದಾರೆ.

ಬೇರೆ ಜಿಲ್ಲೆಯಲ್ಲಿ ಲಾಕ್ ಡೌನ್ ಅವಶ್ಯಕತೆ ಇಲ್ಲ

ಬೇರೆ ಜಿಲ್ಲೆಯಲ್ಲಿ ಲಾಕ್ ಡೌನ್ ಅವಶ್ಯಕತೆ ಇಲ್ಲ

'ಬೇರೆ ಜಿಲ್ಲೆಯಲ್ಲಿ ಲಾಕ್ ಡೌನ್ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇನೆ. ಆದ್ರೆ ಅಂತಿಮ ತೀರ್ಮಾನ ಸಿಎಂ ತೆಗೆದುಕೊಳ್ಳುತ್ತಾರೆ. ಈಗ ಬೆಂಗಳೂರಲ್ಲಿ ಮಾಡಿರುವ ಲಾಕ್ ಡೌನ್ ಎರಡನೇ ಹಂತದಲ್ಲಿ ಆಗಿರೋದು. ಈ ಚೈನ್ ಕಟ್ ಮಾಡುವ ಸಲುವಾಗಿ ಈ ನಿರ್ಧಾರ ಮಾಡಿದ್ದೇವೆ. ಜನರು ಸಹಕಾರ ನೀಡಬೇಕು. ಹತ್ತು ವರ್ಷದ ಮಕ್ಕಳು, ಎಪ್ಪತ್ತು ವರ್ಷ ದಾಟಿದವರು ಮನೆಯಲ್ಲೇ ಇದ್ದು ಸಹಕಾರ ನೀಡಿ' ಎಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಒಂದು ವಾರ ಬೆಂಗಳೂರು ಲಾಕ್‌ಡೌನ್

ಒಂದು ವಾರ ಬೆಂಗಳೂರು ಲಾಕ್‌ಡೌನ್

ಜುಲೈ 14ರ ರಾತ್ರಿ 8 ಗಂಟೆಯಿಂದ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಲಿದೆ. ಈ ವೇಳೆ ಅಗತ್ಯವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ತುರ್ತು ಸೇವೆ ಮಾತ್ರ ಲಭ್ಯವಿರುತ್ತದೆ.

English summary
Karnataka CM Yediyurappa will Hold Meeting with all District Collector regarding state Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X