ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಕಡ್ಡಾಯ ಬಳಕೆ ಶೀಘ್ರವೇ ಹೊಸ ಕಾನೂನು- ಸಿಎಂ ಬೊಮ್ಮಾಯಿ ಘೋಷಣೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ರಾಜ್ಯದಲ್ಲಿ ಕನ್ನಡವೇ ಅಗ್ರಮಾನ್ಯ ಕನ್ನಡ ಕಡ್ಡಾಯ ಬಳಕೆಗೆ ಕಾನೂನಿನ ಬಲ ನೀಡಲು ಹೊಸ ಕಾಯ್ದೆಯನ್ನು ಜಾರಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಘೋಷಣೆಯನ್ನು ಮಾಡಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯದಲ್ಲಿ ಕನ್ನಡವನ್ನು ಧಿಕ್ಕರಿಸಿ ಹಿಂದಿ ದಿವಸ ಆಚರಿಸುತ್ತಿರುವುದು, ಅದಕ್ಕೆ ರಾಜ್ಯ ಬಿಜೆಪಿ ಸರಕಾರ ಬೆಂಬಲ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ , ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು.

ಕನ್ನಡಪರ ಸಂಘಟನಗೆಳು ಮತ್ತು ಮಾಜಿ ಸಿಎಂ ಕುಮಾರ ಸ್ವಾಮಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಫಷ್ಟನೆಗೆ ಆಗ್ರಹವನ್ನು ವ್ಯಕ್ತಪಡಿಸಿದವು. ಇದಕ್ಕಾಗಿ ಸಿಎಂ ಬೊಮ್ಮಾಯಿ ಸದನದಲ್ಲಿ ಉತ್ತರಿಸಿದ್ದು ಮೋದಿ ತಿಳಿಸಿರುವಂತೆ ದೇಶದ ಪ್ರತಿಯೊಂದು ಪ್ರಾದೇಶಿಕ ಭಾಷೆಯು ರಾಷ್ಟ್ರೀಯ ಭಾಷೆ ಎಂದಿದ್ದಾ ಎಂಬುದನ್ನು ಉಲ್ಲೇಖಿಸಿದರು. ಇನ್ನು ರಾಜ್ಯದಲ್ಲಿ ಕನ್ನಡ ಭಾಷೆಯ ಅಗ್ರಮಾನ್ಯವಾಗಿದ್ದು ಕಾನೂನಿನ ಬಲ ತುಂಬುವುದಾಗಿ ಘೋಷಿಸಿದ್ದಾರೆ.

ನೆಲ ಜಲದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿ ಕನ್ನಡವನ್ನು ಅತ್ಯಂತ ಅಗ್ರಮಾನ್ಯವಾಗಿ ಬಳಕೆ ಮಾಡುತ್ತಿದ್ದೆವೆ. ಕನ್ನಡ ಕಡ್ಡಾಯ ಎಂದು ಇದುವರೆಗೆ ಮಾತನಾಡಿದ್ದೇವೆ. ಇನ್ನು ಮುಂದೆ ಕನ್ನಡ ಕಡ್ಡಾಯ ಮಾಡುವ ನಿಟ್ಟಿನಲ್ಲಿ ಹೊಸ ಕಾನೂನನ್ನೇ ಜಾರಿ ಮಾಡುತ್ತೇವೆ. ಈ ಅಧಿವೇಶನದಲ್ಲೇ ಈ ವಿದೇಯಕವನ್ನು ಮಂಡಿಸಿ ಕಾನೂನು ಜಾರಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಘೋಷಣೆಯನ್ನು ಮಾಡಿದ್ದಾರೆ.

ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕ ಮಾನ್ಯತೆ

ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕ ಮಾನ್ಯತೆ

ಕನ್ನಡ ಜಾರಿ ಮಾಡುವ ನಿಟ್ಟಿನಲ್ಲಿ ವಿವಿಧ ಪ್ರಾಧಿಕಾರ ಮತ್ತು ಸಮಿತಿಗಳು ಇವೆ. ಅವುಗಳಿಗೆ ಶಾಸನಬದ್ದ ಅಧಿಕಾರಗಳಿಲ್ಲ. ಹಾಗಾಗಿ ಕನ್ನಡಕ್ಕೆ ಕಾನೂನಾತ್ಮಕ ರಕ್ಷಣೆಯನ್ನು ನೀಡಲು ಕನ್ನಡ ಬಳಕೆ ಕಡ್ಡಾಯ ಕಾನೂನನ್ನು ಮಾಡುತ್ತಿದ್ದೇವೆ. ಪ್ರಥಮ ಭಾರಿಗೆ ಇಂಥಹ ಒಂದು ಕಾನೂನನನ್ನು ಜಾರಿ ಮಾಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅನ್ಯಭಾಷಿಕರಿಗೂ ಕನ್ನಡ ಕಲಿಕೆ

ಅನ್ಯಭಾಷಿಕರಿಗೂ ಕನ್ನಡ ಕಲಿಕೆ

ನೆಲ, ಜಲ, ಭಾಷೆ ವಿಚಾರದಲ್ಲಿ ಈಗಲೂ ರಾಜಕೀಯವನ್ನು ಮೀರಿ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಈಗಲೂ ಕನ್ನಡ ವಿಚಾರದಲ್ಲಿ ನಮ್ಮ ಬದ್ದತೆ ಪ್ರಶ್ನಾತೀತ. ಕನ್ನಡವನ್ನು ಉಳಿಸಿ ಬೆಳೆಸಲು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತೇವೆ. ಇಲ್ಲಿರುವ ಅನ್ಯ ಭಾಷೆಯವರಿಗೂ ಕನ್ನಡವನ್ನು ಕಲಿಸಲು , ಕನ್ನಡವನ್ನು ಬೆಳೆಸುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್‌ನಲ್ಲೂ ಕನ್ನಡ

ಇಂಜಿನಿಯರಿಂಗ್ ಕೋರ್ಸ್‌ನಲ್ಲೂ ಕನ್ನಡ

ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಒತ್ತನನ್ನು ನೀಡಲಾಗುತ್ತದೆ. ವೃತ್ತಿ ಪರ ಕಾಲೇಜುಗಳಲ್ಲಿ ಕನ್ನಡದಲ್ಲೇ ಕಲಿಕೆ ಮತ್ತು ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ನೀಡಿದ್ದೇವೆ. ಇದನ್ನು ಹಿಂದೆ ಯಾರು ಮಾಡಿರಲಿಲ್ಲ. ಪ್ರಥಮ ಬಾರಿಗೆ ನಮ್ಮ ಸರ್ಕಾರ ಇಂಜಿನಿಯರಿಂಗ್ ನಲ್ಲಿ ಕನ್ನಡ ಬೋಧನೆ , ಪರೀಕ್ಷೆ ಬರೆಯಲು ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ಒಂದು ಸೆಮಿಸ್ಟರ್ ಸಹ ಮುಗಿದಿದೆ. ಕನ್ನಡದಲ್ಲೇ ಪಠ್ಯ ಕ್ರಮವನ್ನು ರೂಪಿಸಿದ್ದೇವೆ. ಹೀಗೆ ಇಂಜಿನಿಯರಿಂಗ್ ಇನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡ ವಿಚಾರದಲ್ಲಿ ರಾಜೀಯಾಗು ಪ್ರಶ್ನೆಯೇ ಇಲ್ಲ

ಕನ್ನಡ ವಿಚಾರದಲ್ಲಿ ರಾಜೀಯಾಗು ಪ್ರಶ್ನೆಯೇ ಇಲ್ಲ

ಭಾರತ ದೇಶ ವಿವಿಧ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದೆ. ಯಾವುದೇ ಒಂದು ಭಾಷೆಯನ್ನು ಇಲ್ಲಿ ಹೇರಲು ಸಾಧ್ಯವಿಲ್ಲ. ಮೋದಿಯವರು ಸಹ ಎಲ್ಲಾ ಪ್ರಾದೇಶಿಕ ಭಾಷೆಗಳು ರಾಷ್ಟ್ರೀಯ ಭಾಷೆಗಳು ಎಂದಿದ್ದಾರೆ. ಕನ್ನಡ ರಕ್ಷಣೆ ಮಾತ್ರವಲ್ಲ ಬೆಳೆಸಲು ನಮ್ಮ ಪಕ್ಷ ಬದ್ದವಾಗಿದೆ. ಅದರಲ್ಲಿ ಆತಂಕಪಡುವ ಅಗತ್ಯವಿಲ್ಲ. ಯಾವುದಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬೊಮ್ಮಾಯಿ ಸದನದಲ್ಲಿ ಖಡಕ್ ಉತ್ತರವನ್ನು ನೀಡಿದ್ದಾರೆ.

English summary
Chief Minister Basavaraja Bommai has announced in the State Legislative Assembly session that he is implementing a new law to give the force of law to the mandatory use of Kannada as the dominant Kannada in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X