ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೂ ಎರಡು ದಿನ ಬೆಂಗಳೂರು ಹವಾಮಾನ ಬದಲಾಗಲ್ಲ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 8 : ಬೆಂಗಳೂರು ನಗರದ ಹವಾಮಾನ ಗಂಟೆಗೊಮ್ಮೆ ಬದಲಾಗುತ್ತಿದೆ. ಆಗಾಗ ಇಬ್ಬನಿಯಂತೆ ತುಂತುರು ಮಳೆಯಾಗುತ್ತಿದ್ದು ಜನರಿಗೆ ಕಿರಿಕಿರಿ ಉಂಟಾಗಿದೆ.

ಉದ್ಯಾನ ನಗರಿಯಲ್ಲಿ ಇನ್ನೂ ಎರಡು ದಿನ ಹವಾಮಾನ ಹೀಗೆ ಇರಲಿದೆ. ಮೋಡ ಕವಿದ ವಾತಾವರಣ ಎರಡು ದಿನ ಮುಂದುವರೆಯಲಿದ್ದು, ಆಗಾಗ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ವೈಪರಿತ್ಯ : ಭವಿಷ್ಯದಲ್ಲಿ ಹನಿ ನೀರಿಗೂ ಸಂಕಷ್ಟ ಹವಾಮಾನ ವೈಪರಿತ್ಯ : ಭವಿಷ್ಯದಲ್ಲಿ ಹನಿ ನೀರಿಗೂ ಸಂಕಷ್ಟ

ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಅಪ್ಪಳಿಸಿರುವ 'ಪವನ್' ಚಂಡಮಾರುತದಿಂದ ಕರ್ನಾಟಕ ಪಾರಾಗಿದೆ. ಆದರೆ, ಇದರ ಪರಿಣಾಮ ರಾಜ್ಯದಲ್ಲಿ ತಾಪಮಾನ ಕುಸಿದಿದೆ. ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ.

 ಶಿವಮೊಗ್ಗ; ಇನ್ನೂ ಮೂರು ದಿನ ಅಕಾಲಿಕ ಮಳೆ? ರೈತರಲ್ಲಿ ಮತ್ತೆ ಆತಂಕ ಶಿವಮೊಗ್ಗ; ಇನ್ನೂ ಮೂರು ದಿನ ಅಕಾಲಿಕ ಮಳೆ? ರೈತರಲ್ಲಿ ಮತ್ತೆ ಆತಂಕ

Cloudy Weather For Two Days In Bengaluru

ಚಂಡಮಾರುತದ ಪ್ರಭಾವದಿಂದ ಶನಿವಾರ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳ ಅಲ್ಲಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಸಂಜೆ ತುಂತುರು ಮಳೆಯಾಗಿತ್ತು.

 ಹವಾಮಾನ ವೈಪರೀತ್ಯಕ್ಕೆ ನೆಲಕಚ್ಚಿದ ಕೊಡಗಿನ ಕಾಫಿ ಬೆಳೆ ಹವಾಮಾನ ವೈಪರೀತ್ಯಕ್ಕೆ ನೆಲಕಚ್ಚಿದ ಕೊಡಗಿನ ಕಾಫಿ ಬೆಳೆ

'ಪವನ್' ಚಂಡಮಾರುತ ಪಶ್ಚಿಮ ಮತ್ತು ನೈಋತ್ಯ ದಿಕ್ಕಿನಡೆಗೆ ಸಾಗುತ್ತಿದ್ದು, ಸೊಮಾಲಿಯಾ ಕರಾವಳಿ ಭಾಗದತ್ತ ಮುಖ ಮಾಡಿದೆ. ರಾಜ್ಯದಲ್ಲಿ ಅಲ್ಲಲ್ಲಿ ಶುಷ್ಕ ವಾತಾವರಣ ಇರಲಿದ್ದು, ಆಗಾಗ ತುಂತುರು ಮಳೆಯಾಗಬಹುದು.

ಶನಿವಾರ ದಿನವಿಡೀ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಭಾನುವಾರ ಆಗಾಗ ಬಿಸಿಲು ಬಂದರೆ ಆಗಾಗ ಮೋಡವಾಗುತ್ತಿದೆ. ಶುಷ್ಕವಾತಾವರಣ ಇರಲಿದ್ದು, ತುಂತುರು ಮಳೆಯೂ ಆಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

ಕಳೆದ ವಾರ ಬೆಂಗಳೂರಿನಲ್ಲಿ ತುಂತುರು ಮಳೆಯಾಗಿತ್ತು. ಬಳಿಕ ಎರಡು ದಿನ ಬಿಸಿಲು ಬಂದಿತ್ತು. ಈಗ ಪುನಃ ಮೋಡ ಕವಿದ ವಾತಾವರಣ ಉಂಟಾಗಿದೆ. ನಗರದ ಹವಾಮಾನ ದಿನ ದಿನಕ್ಕೆ ಬದಲಾಗುತ್ತಲೇ ಇದೆ

English summary
The weather in Bengaluru has become rather unusual from past few days. Cloudy weather will continue in the city till two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X