• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವ ಸ್ತನ್ಯಪಾನ ಸಪ್ತಾಹ : ಕ್ಲೌಡ್ ನೈನ್ ನಿಂದ ವಿಶೇಷ ಪೋಗ್ರಾಂ

By Mahesh
|

ಬೆಂಗಳೂರು, 29 ಜುಲೈ 2016: ವಿಶ್ವ ಸ್ತನ್ಯಪಾನ ಸಪ್ತಾಹ 2016ರ ಅಂಗವಾಗಿ ಭಾರತದ ಅತ್ಯಂತ ಬೇಡಿಕೆಯಲ್ಲಿರುವ ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಅತ್ಯುತ್ತಮ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಸ್ತನ್ಯಪಾನ ಸಪ್ತಾಹಕ್ಕೆ ಶುಕ್ರವಾರದಂದು ಚಾಲನೆ ಕೊಟ್ಟಿದೆ.

ಬೆಂಗಳೂರಿನಲ್ಲಿ ನಡೆದ ದುಂಡುಮೇಜಿನ ಸಭೆಯೊಂದರಲ್ಲಿ ಕ್ಲೌಡ್ ನೈನ್ ಆಸ್ಪತ್ರೆ, ನ್ಯಾಷನಲ್ ನಿಯೋನೇಟಾಲಜಿ ಫೋರಮ್ ಆಫ್ ಇಂಡಿಯಾದ ಕರ್ನಾಟಕ ವಿಭಾಗ ಮತ್ತು ಬೆಂಗಳೂರು ಸೊಸೈಟಿ ಆಫ್ ಒಬ್ಸ್ಟೆರಿಕ್ಸ್ ಅಂಡ್ ಗೈನಕಾಲಜಿಯ ಪ್ರತಿನಿಧಿಗಳು ಸ್ತನ್ಯಪಾನ ಮತ್ತು ಸರಿಯಾದ ಸ್ತನ್ಯಪಾನ ಅಭ್ಯಾಸಗಳ ಕುರಿತು ಅತ್ಯಂತ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.

ಡಾ ಆರ್. ಕಿಶೋರ್ ಕುಮಾರ್, ಸಂಸ್ಥಾಪಕರು ಮತ್ತು ಅಧ್ಯಕ್ಷರು, ಕ್ಲೌಡ್ ನೈನ್ ಆಸ್ಪತ್ರೆ ಇವರು "ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು ಕಾರ್ಪೊರೇಟ್ ಗಳ ಜೊತೆ ಕೈಜೋಡಿಸಿ ಕ್ಲೌಡ್ ನೈನ್ ಆಸ್ಪತ್ರೆಯು ಭಾರತದಲ್ಲಿ ಸ್ತನ್ಯಪಾನ ಅಭ್ಯಾಸ ಸ್ನೇಹಿ ಸಂಸ್ಕೃತಿಯನ್ನು ಬೆಳೆಸಲು ಯೋಜನೆ ರೂಪಿಸಿರುವುದಾಗಿ ಹೇಳಿದರು.[ಹೀಗೊಂದು ಎದೆಹಾಲಿನ ಸ್ವಗತ!]

ಇದೇ ಸಂದರ್ಭದಲ್ಲಿ ಕ್ಲೌಡ್ ನೈನ್ ಆಸ್ಪತ್ರೆಯು ಬೆಂಗಳೂರಿನಲ್ಲಿರುವ ತನ್ನ ಮೂರು ಕೇಂದ್ರಗಳಲ್ಲಿ ಜನ್ಮ ನೀಡಿದ ತಾಯಂದಿರ ಸ್ತನ್ಯಪಾನ ಅಭ್ಯಾಸಗಳ ಆಧಾರದ ಮೇಲೆ ನಡೆಸಿದ ಪ್ರಮುಖ ಅಧ್ಯಯನದ ಅಂಶಗಳನ್ನು ಬಹಿರಂಗಪಡಿಸಿತು.

ನವೆಂಬರ್ 2015ರಿಂದ ಸೆಪ್ಟೆಂಬರ್ 2015ವರೆಗೆ, ಜನ್ಮ ನೀಡಿದ ಮೊದಲ 6 ತಿಂಗಳವರಗೆ ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಸ್ತನಪಾನ ಮಾಡಿಸಿದ ತಾಯಂದಿರ ಸಂಖ್ಯೆಯನ್ನು ನಮೂದಿಸಲಾಯಿತು. ಈ ಅಧ್ಯಯನದ ಪ್ರಕಾರ ಸರಾಸರಿ ಶೇಕಡಾ 67ರಷ್ಟು ತಾಯಂದಿರು ಮಾತ್ರ ಜನ್ಮ ನೀಡಿದ ಮೊದಲ 6 ತಿಂಗಳವರಗೆ ತಮ್ಮ ಮಕ್ಕಳಿಗೆ ತಪ್ಪದೇ ಹಾಲುಣಿಸಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ಚಿನ ವಿವರಗಳಿಗಾಗಿ www.cloudninecare.com ಸಂಪರ್ಕಿಸಿ ಅಥವಾ info@cloudninecare.com ಗೆ ಬರೆಯಿರಿ.

ಆಗಸ್ಟ್ 1-7, 2016ರ ವಿಶ್ವ ಸ್ತನ್ಯಪಾನ ಸಪ್ತಾಹದ

ಆಗಸ್ಟ್ 1-7, 2016ರ ವಿಶ್ವ ಸ್ತನ್ಯಪಾನ ಸಪ್ತಾಹದ

ಆಗಸ್ಟ್ 1-7, 2016ರ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ತನ್ನ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ, ಕ್ಲೌಡ್ ನೈನ್ ಆಸ್ಪತ್ರೆಯು ತನ್ನ ಕಡೆಯಿಂದ ಓರ್ವ ಸೂಕ್ತ ತರಬೇತಿ ಪಡೆದ ಅರ್ಹ ನರ್ಸ್ ಮತ್ತು ಓರ್ವ ಎದೆಹಾಲಿನ ಸಲಹೆಗಾರರನ್ನು ಬೆಂಗಳೂರು, ಚೆನೈ, ಮುಂಬೈ ಮತ್ತು ಗುರ್ ಗಾಂವ್ ನಗರ ಪ್ರದೇಶಗಳ ಒಟ್ಟು 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ.

ಪಾಲಕರಿಗೆ ಸ್ತನಪಾನ ಮಾಡಿಸುವ ಸರಿಯಾದ ವಿಧಾನ

ಪಾಲಕರಿಗೆ ಸ್ತನಪಾನ ಮಾಡಿಸುವ ಸರಿಯಾದ ವಿಧಾನ

ಇವರು ಅಲ್ಲಿನ ಪಾಲಕರಿಗೆ ಸ್ತನಪಾನ ಮಾಡಿಸುವ ಸರಿಯಾದ ವಿಧಾನ, ಪೂರಕ ಆಹಾರ ಕೊಡುವಿಕೆ, ಸ್ತನದ ಸಂರಕ್ಷಣೆ, ಸ್ತನಪಾನ ನೀಡುವ ತಾಯಂದಿರ ಪೌಷ್ಟಿಕತೆಯ ಕುರಿತು ಸೂಕ್ತ ಸಮಾಲೋಚನೆ ನಡೆಸುತ್ತಾರೆ. ಇದರ ಜೊತೆಗೆ ಸ್ತನಪಾನ ಮಾಡಿಸುವಾಗ ಉಂಟಾಗಬಹುದಾದ ಯಾವುದೇ ಸಮಸ್ಯೆಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾರೆ.

ಡಾ ಕಿಶೋರ್ ಕುಮಾರ್, ಸಂಸ್ಥಾಪಕ ಮತ್ತು ಅಧ್ಯಕ್ಷರು

ಡಾ ಕಿಶೋರ್ ಕುಮಾರ್, ಸಂಸ್ಥಾಪಕ ಮತ್ತು ಅಧ್ಯಕ್ಷರು

ಜನ್ಮ ನೀಡಿದ ಕೂಡಲೇ, ಅದರಲ್ಲೂ ಮೊದಲ ಒಂದು ಗಂಟೆಯೊಳಗೆ ಹಾಲುಣಿಸುವ ಅವಶ್ಯಕತೆಯನ್ನು ಗರ್ಭಿಣಿಯರಿಗೆ ಮನದಟ್ಟು ಮಾಡಿಕೊಡುವುದು ಬಹಳ ಮುಖ್ಯ. ಮೊದಲ ಕೆಲವು ಗಂಟೆಗಳಲ್ಲೇ ಹಾಲುಣಿಸುವುದರಿಂದ ತಾಯಂದಿರಗೂ ಬಹಳ ಅನುಕೂಲಗಳಿವೆ.

ಮಗು ಎದೆಹಾಲನ್ನು ಹೀರುವುದರಿಂದ ಎದೆಹಾಲಿನ ಉತ್ಪತ್ತಿಯನ್ನು ಉತ್ತೇಜಿಸುವುದರ ಜೊತೆ ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆಗೆ ಸಹಕಾರಿಯಾಗುತ್ತದೆ. ಆಕ್ಸಿಟೋಸಿನ್ ಗರ್ಭಕೋಶವನ್ನು ಕುಗ್ಗಿಸುವುದರ ಜೊತೆಗೆ ಪ್ರಸವದ ನಂತರದ ರಕ್ತಸ್ರಾವವನ್ನು ಕಡಿಮೆಮಾಡುತ್ತದೆ. ಕೊಲೊಸ್ಟ್ರಮ್ ಎಂದು ಕರೆಯಲ್ಪಡುವ ಮೊದಲ ಎದೆಹಾಲಿನಲ್ಲಿ ನವಜಾತ ಶಿಶುವನ್ನು ರೋಗಗಳಿಂದ ಕಾಪಾಡಲು ಅಗತ್ಯ ಪೌಷ್ಟಿಕಾಂಶ ಮತ್ತು ರೋಗನಿರೋಧಕ ಶಕ್ತಿ ಇರುತ್ತದೆ.
ಆರು ತಿಂಗಳು ಕಡ್ಡಾಯವಾಗಿ ಹಾಲುಣಿಸುವುದು ಒಳ್ಳೆಯದು

ಆರು ತಿಂಗಳು ಕಡ್ಡಾಯವಾಗಿ ಹಾಲುಣಿಸುವುದು ಒಳ್ಳೆಯದು

ಮೊದಲ ಆರು ತಿಂಗಳು ಕಡ್ಡಾಯವಾಗಿ ಹಾಲುಣಿಸುವುದನ್ನು ಪ್ರೋತ್ಸಾಹಿಸುವುದು ಏಕೆಂದರೆ ತಾಯಿಹಾಲು ಅತ್ಯಂತ ಶುದ್ಧವಾಗಿರುತ್ತದೆ ಮತ್ತು ಮಗುವಿನ ಬದುಕಿನ ಮೊದಲ ಕೆಲವು ತಿಂಗಳವರಗೆ ಅತ್ಯಗತ್ಯವಾಗಿ ಬೇಕಾಗಿರುವ ಪೌಷ್ಟಿಕಾಂಶ ಇದರಲ್ಲಿರುತ್ತದೆ. ಇದರ ಜೊತೆಗೆ ತಾಯಿಯಲ್ಲಿರುವ ಪ್ರತಿಕಾಯಗಳು ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಭಾರತದಲ್ಲಿ ಸಾಮಾನ್ಯವಾಗಿ ಸ್ತನಪಾನ ಚಾಲ್ತಿಯಲ್ಲಿದ್ದರೂ ಕೂಡ ಅತ್ಯಂತ ಕಡಿಮೆ ಮಕ್ಕಳಿಗೆ ಜನಿಸಿದ ಕೂಡಲೇ ಅಥವಾ ಮೊದಲ ಆರು ತಿಂಗಳವರಗೆ ಸ್ತನಪಾನ ದೊರೆಯುವ ಸಾಧ್ಯತೆ ಇದೆ."

ಡಾ ಆಶಾ ಬನಕಪ್ಪ, ನ್ಯಾಷನಲ್ ನಿಯೋನೆಟಾಲಜಿ ಫೋರಮ್

ಡಾ ಆಶಾ ಬನಕಪ್ಪ, ನ್ಯಾಷನಲ್ ನಿಯೋನೆಟಾಲಜಿ ಫೋರಮ್

ಕಳೆದ ದಶಕದಲ್ಲಿ ಭಾರತದಲ್ಲಿ ಸ್ತನಪಾನ ಅಭ್ಯಾಸಗಳು ಬಹಳಷ್ಟು ಸುಧಾರಿಸಿವೆ. ಆದ್ರೆ ನಾವು ಇನ್ನೂ ಕಡ್ಡಾಯ ಸ್ತನಪಾನ ವಿಚಾರದಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ. 2015ರ ವರ್ಲ್ಡ್ ಬ್ರೆಸ್ಟ್ ಫೀಡಿಂಗ್ ಟ್ರೆಂಡ್ಸ್ ಇನಿಶಿಯೇಟಿವ್(WBTI) ನಡೆಸಿದ ಮೌಲ್ಯಮಾಪನದಲ್ಲಿ ಭಾರತ 150ಕ್ಕೆ 78 ಅಂಕ ಗಳಿಸಿದೆ. 2014ರಲ್ಲಿ ಭಾರತಕ್ಕೆ ಈ ವಿಚಾರದಲ್ಲಿ 150ಕ್ಕೆ 74 ಅಂಕಗಳಷ್ಟೇ ದೊರಕಿದ್ದವು. ಈ ನಿಟ್ಟಿನಲ್ಲಿ ಇದೊಂದು ಸುಧಾರಣೆ ಎಂದೇ ಪರಿಗಣಿಸಬಹುದು.

ಕ್ಲೌಡ್ ನೈನ್ ಆಸ್ಪತ್ರೆಯ ಕುರಿತು

ಕ್ಲೌಡ್ ನೈನ್ ಆಸ್ಪತ್ರೆಯ ಕುರಿತು

ಖ್ಯಾತ ನವಜಾತ ಶಿಶುತಜ್ಞ ಡಾ ಆರ್ ಕಿಶೋರ್ ಕುಮಾರ್ 2007ರಲ್ಲಿ ಪ್ರಾರಂಭಿಸಿದ ಕ್ಲೌಡ್ ನೈನ್ ಆಸ್ಪತ್ರೆಗೆ ಮ್ಯಾಟ್ರಿಕ್ಸ್ ಪಾರ್ಟನರ್ಸ್ ಅಂಡ್ ಸಿಕ್ವಿಯಾ ಕ್ಯಾಪಿಟಲ್, ಇಂಡಿಯಾ ವಾಲ್ಯೂ ಫಂಡ್ ಅಡ್ವೈಸರ್ಸ್ (IVFA) ಹೂಡಿಕೆಯಿದೆ. ದೇಶದ ಅತ್ಯುತ್ತಮ ತಾಯ್ತನ, ಸ್ತ್ರೀರೋಗ, ನವಜಾತ ಶಿಶು ಮತ್ತು ಮಕ್ಕಳ ಚಿಕಿತ್ಸೆ ಮತ್ತು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಆರೋಗ್ಯ ಕ್ಷೇತ್ರದಲ್ಲಿ ಭಾರತ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವ ಅಂತರವನ್ನು ಕಡಿಮೆ ಮಾಡುವುದೇ ಸಂಸ್ಥೆಯ ಮೂಲ ಧ್ಯೇಯೋದ್ದೇಶವಾಗಿದ್ದು ಇದಕ್ಕಾಗಿ ವೈದ್ಯಕೀಯ ಶ್ರೇಷ್ಠತೆ, ಸಮಗ್ರ ರಕ್ಷಣೆ ಮತ್ತು ಯೋಗಕ್ಷೇಮಕ್ಕೆ ಸಹಕಾರಿಯಾದ ವಾತಾವರಣ ನಿರ್ಮಿಸಿ ಮಹಿಳೆ ಮತ್ತು ಮಕ್ಕಳ ಆರೋಗ್ಯದ ವಿಚಾರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ.

English summary
Cloudnine, India’s leading chain of maternity hospitals grandly celebrated the World Breastfeeding Week from the 1st of August to the 7th of August and conducted Breastfeeding Awareness Sessions at its various centers across India- Bengaluru, Chennai, Gurgaon, Pune and Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X