ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆ ಗುಂಡಿ ಬಗ್ಗೆ ವಾಟ್ಸಾಪ್ ಮಾಡಿ,ಹೈಕೋರ್ಟ್ ತಲುಪುತ್ತೆ

|
Google Oneindia Kannada News

ಬೆಂಗಳೂರು,ಜನವರಿ 20: ಬೆಂಗಳೂರಿನ ರಸ್ತೆಗುಂಡಿಗಳ ಚಿತ್ರವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಿದರೆ ಚಿತ್ರಗಳು ಹೈಕೋರ್ಟ್ ತಲುಪಲಿವೆ.
ಸಾರ್ವಜನಿಕರಿಂದಲೇ ನಗರದ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾಧಿಕಾರ ಮುಂದಾಗಿದೆ.

ಬಿಬಿಎಂಪಿ ನಡೆಸಿರುವ ರಸ್ತೆಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸಾಲ್ವ್ ನಿಂಜಾ ಎಂಬ ಸ್ವಯಂ ಸೇವಕ ಸಂಸ್ಥೆಯ ಸಹಕಾರದೊಂದಿಗೆ ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರಿಂದಲೇ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸಲಾಗುತ್ತದೆ. ಅದಕ್ಕಾಗಿ ವಾಟ್ಸಾಪ್‌ ಸಂಖ್ಯೆಯನ್ನು ನಿಗದಿಪಡಿಸಿದೆ.

ಕೊರೊನಾ ಕಾಲದಲ್ಲೂ ಬಿಬಿಎಂಪಿಗೆ ಸಂದಾಯವಾದ ಆಸ್ತಿ ತೆರಿಗೆ ಎಷ್ಟು ಗೊತ್ತಾ? ಕೊರೊನಾ ಕಾಲದಲ್ಲೂ ಬಿಬಿಎಂಪಿಗೆ ಸಂದಾಯವಾದ ಆಸ್ತಿ ತೆರಿಗೆ ಎಷ್ಟು ಗೊತ್ತಾ?

ಮನೆ ಹಾಗೂ ಕಚೇರಿ ಸೇರಿ ನಿತ್ಯ ಸಂಚರಿಸುವ ಪ್ರದೇಶಗಳಲ್ಲಿ ರಸ್ತೆ ಗುಂಡಿಗಳು ಅಥವಾ ಪಾದಚಾರಿ ಮಾರ್ಗಗಳ ಸಮಸ್ಯೆ ಕಂಡರೂ ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಾಧಿಕಾರಕ್ಕೆ ವಾಟ್ಸಾಪ್ ಮೂಲಕ ಕಳುಹಿಸಬಹುದು.

Click Pics Of Potholes And Bad Roads And They Will Be Submitted To The High Court

ಜ.30ರವರೆಗೆ ಎಷ್ಟು ಸಾಧ್ಯವೋ ಅಷ್ಟು ರಸ್ತೆಗುಂಡಿಗಳ ಮಾಹಿತಿ ನೀಡಲು ಅವಕಾಶವಿದೆ. ಸಾರ್ವಜನಿಕರು ಒದಗಿಸುವ ಎಲ್ಲಾ ವಿವರಗಳನ್ನು ಒಟ್ಟುಗೂಡಿಸಿ, ಹೈಕೋರ್ಟ್‌ಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಾಧಿಕಾರ ನೀಡಲಾಗಿರುವ 8095500118 ವಾಟ್ಸಾಪ್ ಸಂಖ್ಯೆಗೆ ಸಾರ್ವಜನಿಕರು helpbengaluru ಎಂಬ ಕೋಡ್ ಕಳುಹಿಸಬೇಕು. ಕನ್ನಡ ಅಥವಾ ಇಂಗ್ಲಿಷ್ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಬರುವ ಸೂಚನೆಗಳನ್ನು ಅನುಸರಿಸಬೇಕು.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada

ಬಳಿಕ ರಸ್ತೆ ಗುಂಡಿಗಳು,ಪಾದಚಾರಿ ಮಾರ್ಗಗಳ ಸಮಸ್ಯೆ ಕುರಿತು ಫೋಟೊ ಲೊಕೇಷನ್‌ನೊಂದಿಗೆ ವರದಿ ಮಾಡಬಹುದಾಗಿದೆ.

English summary
Around a month ago, Karnataka High Court ordered Karnataka State Legal Services Authority (KSLSA) and Bengaluru Urban District Legal Services Authority to create a panel to understand the condition of roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X