ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿಲ್ಲದ ನಾಮಫಲಕಗಳ ತೆರವು

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಬೆಂಗಳೂರು ನಗರದಲ್ಲಿರುವ ಉದ್ದೆಮೆಗಳು, ಅಂಗಡಿ ಮುಂಗಟ್ಟುಗಳಲ್ಲಿ ಶೇ. 60 ರ ಪ್ರಮಾಣದಲ್ಲಿ ಕನ್ನಡ ಬಳಕೆವಿಲ್ಲದ ನಾಮಫಲಕ ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.

ಕನ್ನಡ ಅಭಿವೃದ್ದಿ ಪ್ರಾಧಿಕಾರ ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಉದ್ಯಮ ಮಳಿಗೆಗಳು ಹಾಗೂ ಅಂಗಡಿಗಳ ಮುಂದೆ ಶೇ. 60 ರಷ್ಟು ಕನ್ನಡ ಅಕ್ಷರಗಳು ಬಿಂಬಿತವಾಗಿರುವ ನಾಮಫಲಕಗಳನ್ನು ಅಳವಡಿಸಲು ಅಕ್ಟೋಬರ್ 20 ರಂದು ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು.

ಬೆಂಗಳೂರಿನ 12 ಮೇಲ್ಸೇತುವೆಗಳಿಗೆ ಕಾಯಕಲ್ಪ: ಎಲ್ಲೆಲ್ಲಿ?ಬೆಂಗಳೂರಿನ 12 ಮೇಲ್ಸೇತುವೆಗಳಿಗೆ ಕಾಯಕಲ್ಪ: ಎಲ್ಲೆಲ್ಲಿ?

ಆದೇಶದ ಹಿನ್ನೆಲೆಯಿಂದಾಗಿ ಉದ್ದಿಮೆಗಳ ನವೀಕರಣ ಹಾಗೂ ಹೊಸ ಉದ್ದಿಮೆಗಳ ಪರವಾನಗಿ ಕೊಡುವುದನ್ನು ನಿಲ್ಲಿಸಲಾಗಿತ್ತು. ಬೆಂಗಳೂರು ನಗರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಉದ್ದಿಮೆಗಳಿಗೆ ಕನ್ನಡ ನಾಮಫಲಕ ಅಳವಡಿಸಲು ನೋಟಿಸ್ ನೀಡಲಾಗಿತ್ತು.

Clearance Of Name Board Not Priority For Kannada In Bengaluru

ಕನ್ನಡ ನಾಮಫಲಕ ಅಳವಡಿಸಲು ನೋಟಿಸ್ ನೀಡಿ 2 ತಿಂಗಳು ಕಳೆದರೂ ನಿರ್ಲಕ್ಷ್ಯ ಮಾಡಿದ ಅಂಗಡಿ, ಉದ್ದೆಮೆಗಳ ಮಾಲೀಕರಿಗೆ ಬಿಬಿಎಂಪಿ ನಾಮಫಲಕಗಳನ್ನು ತೆರವು ಮಾಡುವುದರ ಮೂಲಕ ಬಿಸಿ ಮುಟ್ಟಿಸಿದೆ. ಮಂನಗಳವಾರ ಮಹದೇವಪುರ ವ್ಯಾಪ್ತಿಯ 86 ನೇ ವಾರ್ಡ್ ನ ವಾಣಿಜ್ಯ ಮಳಿಗೆಗಳ ನಾಮಫಲಕ ತೆರವುಗೊಳಿಸಿದರು.

ಬೆಂಗಳೂರಿಗರಿಗೆ ಹೊಸ ವರ್ಷದ ಕೊಡುಗೆ ನೀಡಲಿದ್ದಾರೆ ಯಡಿಯೂರಪ್ಪಬೆಂಗಳೂರಿಗರಿಗೆ ಹೊಸ ವರ್ಷದ ಕೊಡುಗೆ ನೀಡಲಿದ್ದಾರೆ ಯಡಿಯೂರಪ್ಪ

ಬುಧವಾರದಿಂದ ಜಯನಗರ ವ್ಯಾಪ್ತಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ವಾಣಿಜ್ಯ ಮಳಿಗೆಗಳ ನಾಮಫಲಕ ತೆರವು ಕಾರ್ಯಾಚರಣೆ ಮಾಡುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

English summary
Businesses and store fronts for about 60% Unused Kannada name Board. BBMP has undertaken the task of clearing nameplate In Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X