ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಿಲ್ಲು ಕೊಡಿ ಸ್ವಾಮಿ, ಊಟ ಕೊಡ್ತೀವಿ' ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಅಳಲು

|
Google Oneindia Kannada News

ಬೆಂಗಳೂರು ಮೇ 18: ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆಗುಣಮಟ್ಟದ ಆಹಾರ ಪೂರೈಕೆ, ಆಹಾರ ಮಾರಾಟ, ಹಣ ವಸೂಲಿ ಇಂತೆಲ್ಲಾ ಆರೋಪಗಳನ್ನು ಗುತ್ತಿಗೆದಾರರ ಮೇಲೆ ಮಾಡಲಾಗುತ್ತಿತ್ತು. ಆದರೆ ಇಂತೆಲ್ಲಾ ಆರೋಪಗಳ ಬಗ್ಗೆ ಕೇಳಿದಾಗ ಇಂದಿರಾಕ್ಯಾಂಟೀನ್ ಗುತ್ತಿಗೆದಾರರು ಹೇಳುವುದೇ ಬೇರೆ. ಬಿಬಿಎಂಪಿ ವಿರುದ್ಧ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಅಸಮಾಧಾನ ಹೊರ ಹಾಕಿದ್ದಾರೆ. ಬಿಬಿಎಂಪಿಯಿಂದ 10ತಿಂಗಳಿಂದ ಬಿಲ್ಲು ಪಾವತಿಯಾಗಿಲ್ಲ ಎಂದು ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಬೆಂಗಳೂರಿನಲ್ಲಿ ಶೆಫ್ ಟಾಕ್ ವ್ಯವಸ್ಥಾಪಕ ನಿರ್ದೇಶಕ ಗೋವಿಂದಬಾಬು ಪೂಜಾರಿ, 'ಬಿಬಿಎಂಪಿಯಿಂದ 10ತಿಂಗಳಿಂದ ಊಟದ ಬಿಲ್ಲು ಪಾವತಿಸಲಾಗಿಲ್ಲ. ಕೊರೊನಾ ಸಂದರ್ಭದಲ್ಲಿ ಎರಡು ವರ್ಷ ಪೌರ ಕಾರ್ಮಿಕರಿಗೆ ನೀಡಿದ ಊಟದ ಬಿಲ್ಲು ಪಾವತಿಯಾಗಿಲ್ಲ. ಕೊವಿಡ್ ಕೇರ್ ಸೆಂಟರ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎರಡು ವರ್ಷಗಳಿಂದ ನೀಡಿದ ಊಟದ ಬಿಲ್ಲು 3 ಕೋಟಿ ಆಗಿದ್ದು, ಆದರೆ ಇನ್ನು ಆ ಹಣವನ್ನು ಬಿಬಿಎಂಪಿ ಪಾವತಿಸಿಲ್ಲ. ನಮಗೆ ಬಿಬಿಎಂಪಿ ಸಕಾಲಕ್ಕೆ ಹಣ ಬಿಡುಗಡೆಯಾದರೆ, ಕ್ಯಾಂಟೀನ್‌ನಲ್ಲಿ ಇನ್ನು ಉತ್ತಮ ಸೌಲಭ್ಯ ಒದಗಿಸಲು ಸಿದ್ದ. ಹೀಗಾಗಿ ನಿಮ್ಮ ಸಹಕಾರ ನಮಗೆ ಅಗತ್ಯ' ಎಂದಿದ್ದಾರೆ.

ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡುವ ಜನರ ಸಂಖ್ಯೆ ಕುಸಿತಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡುವ ಜನರ ಸಂಖ್ಯೆ ಕುಸಿತ

ಗುತ್ತಿಗೆದಾರರ ಮೇಲೆ ಆರೋಪ

ಗುತ್ತಿಗೆದಾರರ ಮೇಲೆ ಆರೋಪ

ಇತ್ತ ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯ ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ನಲ್ಲಿ ಇಸ್ಕಾನ್ ತಿಂಡಿ, ಊಟ ನೀಡಲು ಗುತ್ತಿಗೆ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಂದ ಕಳ್ಳ ಲೆಕ್ಕ, ಗ್ರಾಹಕರ ಸಂಖ್ಯೆಯಲ್ಲಿ ಗೋಲ್‌ಮಾಲ್, ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂದು ಕ್ಯಾಂಟೀನ್‌ಗಳ ಗುತ್ತಿಗೆ ಇಸ್ಕಾನ್‌ ನೀಡುವುದಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಬಡವರಿಗೆ, ನರ್ಗತಿಕರಿಗೆ ನೆರವಾಗಲೆಂದು ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿತು. ಆದರೆ ಇಲ್ಲೂ ಕೂಡ ಕೋಟಿ ಕೋಟಿ ಭ್ರಷ್ಟಾಚಾರ ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಹೇಳುವುದೇ ಬೇರೆ. ತಮಗೆ ನೀಡಬೇಕಾದ ಬಿಲ್ ಬಿಬಿಎಂಪಿಯಿಂದ ಪಾವತಿಯಾಗಿಲ್ಲ. ಇದರಿಂದ ನಮಗೆ ಆಹಾರ ಪೂರೈಕೆಗೆ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ.

ಲೂಟಿ ಆರೋಪ

ಲೂಟಿ ಆರೋಪ

ಇಂದಿರಾ ಕ್ಯಾಂಟೀನ್‌ನಲ್ಲಿ ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ ದೊರೆಯುತ್ತದೆ. ಕೊರೊನಾ ಸಂದರ್ಭದಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿತ್ತು. ಕ್ಯಾಂಟೀನ್ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ತದನಂತರದಲ್ಲಿ ಕ್ಯಾಂಟೀನ್‌ಗೆ ಹೋಗುವವರ ಸಂಖ್ಯೆ ಕಡಿಮೆಯಾಯಿತು. ಇದಕ್ಕೆ ಮುಖ್ಯ ಕಾರಣ ಆಹಾರದಲ್ಲು ಗುಣಮಟ್ಟದ ಕೊರತೆ. ಈ ಹಿಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಕೋಟಿ ಕೋಟಿ ಲೂಟಿ ಆಗಿದೆ ಎಂದು ಮೇಯರ್ ಮತ್ತು ಸಚಿವರ ಹೆಸರು ಕೇಳಿಬಂದಿವೆ.

'ಬಿಲ್ಲು ಪಾವತಿಯಾಗದೇ ಆಹಾರ ನೀಡುವುದು ಹೇಗೆ?'

'ಬಿಲ್ಲು ಪಾವತಿಯಾಗದೇ ಆಹಾರ ನೀಡುವುದು ಹೇಗೆ?'

ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 7.30ರಿಂದ 10.30ವರೆಗೆ ತಿಂಡಿ, ಮಧ್ಯಾಹ್ನ 12.30ರಿಂದ 2.30ರವರೆಗೆ ಮಧ್ಯಾಹ್ನದ ಊಟ, ರಾತ್ರಿ 7.30ರಿಂದ 8.30ರವರೆಗೆ ಊಟ ಲಭ್ಯವಿರುತ್ತದೆ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ರಿವಾರ್ಡ್ಸ್‌ ಹಾಗೂ ಭಾರತೀಯ ಮಾನವ ಕಲ್ಯಾಣ ಪರಿಷತ್ತು ಕಂಪನಿ ಗುತ್ತಿಗೆ ಪಡೆದಿದೆ. ಸರ್ಕಾರ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಗೆ ಅಂತಾ ಒಟ್ಟು 1400 ಪ್ಲೇಟ್ ಊಟ, ತಿಂಡಿಗೆ ಗುತ್ತಿಗೆ ಕೊಟ್ಟಿದೆ. ಇಂದಿರಾ ಸದ್ಯ ಕ್ಯಾಟೀನ್ ಕಡೆ ಬರುವ ಸಂಖ್ಯೆ ಕಡಿಮೆಯಾಗಿದ್ದು ಇದಕ್ಕೆ ನಾವು ಹೊಣೆಗಾರರಲ್ಲಿ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ನಮಗೆ ಬರಬೇಕಾದ ಬಿಲ್ಲು ಪಾವತಿ ಆಗದೇ ನಾವು ಆಹಾರ ವಿತರಿಸುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ.

ಇಬ್ಬರ ನಡುವಿನ ಜಗಳ ಊಟ ಕಳೆದುಕೊಂಡ ಜನ

ಇಬ್ಬರ ನಡುವಿನ ಜಗಳ ಊಟ ಕಳೆದುಕೊಂಡ ಜನ

ಇತ್ತ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಆರೋಪ ಮಾಡುತ್ತಿದ್ದಾರೆ. ಕ್ಯಾಂಟೀನ್ ಸಿಬ್ಬಂದಿ ಅಡ್ಡ ದಾರ ಹಿಡಿದು ಆಹಾರ ಮಾರಾಟವಾಗದ ಹಿನ್ನೆಲೆ ಖಾಸಗಿ ಹೋಟೆಲ್‌ಗಳಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸುತ್ತಿದ್ದಾರೆ. ಒಟ್ಟಾರೆಯಾಗಿ ಇಬ್ಬರ ನಡುವೆ ಜಗಳದಲ್ಲಿ ಜನ ಬಡವಾಗಿದ್ದಂತೂ ನಿಜ.

Recommended Video

Chetana Raj | ಚೇತನಾ ಟ್ರೀಟ್‌ಮೆಂಟ್ ಸುದ್ದಿ ಪೋಷಕರಿಗೆ ಗೊತ್ತಿರಲಿಲ್ಲಾ | Oneindia Kannada

English summary
Indira Canteen Contractors outraged against BBMP. He alleges that the bill has not been paid by BBMP for 10 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X