ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಮ್ನೆಸ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಆಸ್ಕರ್ ಪುತ್ರಿ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 22 : ರಾಜದ್ರೋಹದ ಆರೋಪ ಎದುರಿಸುತ್ತಿರುವ ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಕ್ಲಿನ್ ಚಿಟ್ ನೀಡಿವುದು ವಿವಾದಕ್ಕೆ ಕಾರಣವಾಗಿವೆ. ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಪುತ್ರಿ ಸಂಸ್ಥೆ ಜೊತೆ ಕೆಲಸ ಮಾಡುತ್ತಿರುವುದು ಈಗ ಬಹಿರಂಗವಾಗಿದೆ.

'ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಸಂಸ್ಥೆಗೆ ದೇಶದ್ರೋಹದ ಇತಿಹಾಸವಿಲ್ಲ, ಆ ಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ತಪ್ಪೇನಿಲ್ಲ, ಸೈನಿಕರದ್ದೂ ತಪ್ಪಿರಬಹುದು' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ನೀಡಿರುವ ಹೇಳೀಕೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.[ರಾಜದ್ರೋಹ ಪ್ರಕರಣದ ಬಗ್ಗೆ ಸಂತೋಷ್ ಹೆಗ್ಡೆ ಹೇಳುವುದೇನು?]

oscar fernandes

ಸಂಸ್ಥೆಗೆ ಪರಮೇಶ್ವರ ಅವರಿ ಕ್ಲಿನ್ ಚಿಟ್ ನೀಡಲು ಆಸ್ಕರ್ ಫರ್ನಾಂಡೀಸ್ ಅವರ ಪುತ್ರಿ ಅಲ್ಲಿ ಕೆಲಸ ಮಾಡುತ್ತಿರುವುದೇ ಕಾರಣ ಎಂದು ಸಾಮಾಜಿಕ ಜಾಲ ತಾಣದಲ್ಲಿ ಟ್ವಿಟ್‌ಗಳು ಹರಿದಾಡುತ್ತಿವೆ.[ಸೈನಿಕರೂ ತಪ್ಪು ಮಾಡಿರಬಹುದು: ಅಮ್ನೆಸ್ಟಿಗೆ ರಾಜ್ಯದಲ್ಲಿ ರೆಡ್ ಕಾರ್ಪೆಟ್]

ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರೀತಿ ಗಾಂಧಿ ಮಾಡಿರುವ ಟ್ವಿಟ್ ಆಸ್ಕರ್ ಫರ್ನಾಂಡೀಸ್ ಪುತ್ರಿ ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆಯಲ್ಲಿ Advocacy Officer ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ.[ಆಮ್ನೆಸ್ಟಿ ಸಂಸ್ಥೆ ಪರಿಚಯ]

ಆಸ್ಕರ್ ಫರ್ನಾಂಡೀಸ್ ಪುತ್ರಿ 2013ರಿಂದ ಅಂದರೆ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಕಾಂಗ್ರೆಸ್ ಸರ್ಕಾರ ಸಂಸ್ಥೆಗೆ ಕ್ಲಿನ್ ಚಿಟ್ ನೀಡಲು ಹೊರಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿದೆ.

ಬಿಜೆಪಿ ನಾಯಕರಾದ ಅನಂತ್ ಕುಮಾರ್ ಮತ್ತು ಅರುಣ್ ಜೇಟ್ಲಿ ಅವರು ಸಹ ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾಗೆ ಕ್ಲಿನ್ ಚಿಟ್ ನೀಡುವುದನ್ನು ಪ್ರಶ್ನಿಸಿದ್ದಾರೆ. ದೇಶವಿರೋಧಿ ಘೋಷಣೆ ಕೂಗಲು ಅವಕಾಶವಿಲ್ಲ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ.

English summary
A day after Karnataka's Home Minister decided to give Amnesty International a clean chit, the social media is asking this question. Did the fact that Oshanie Fernandes, daughter of Congress leader Oscar Fernandes working with Amnesty International have anything to do with the decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X