ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 2 ತಿಂಗಳಲ್ಲಿ ಅತಿ ಹೆಚ್ಚು ಅಪಘಾತ, ಅಪಾಯ ಸ್ಥಳಗಳು?

|
Google Oneindia Kannada News

ಬೆಂಗಳೂರು, ಮಾರ್ಚ್ 18: ನಗರದಲ್ಲಿ ದಿನೇ ದಿನೇ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಟ್ರಾಫಿಕ್ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶಗಳನ್ನು ಗಮನಿಸಿದರೆ ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬರುತ್ತವೆ.

ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್ ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್

2019 ಆರಂಭವಾಗಿ 2 ತಿಂಗಳಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದೆ. ನಿತ್ಯ 13 ಅಪಘಾತಗಳು ಸಂಭವಿಸುತ್ತಿದ್ದು ಕನಿಷ್ಠ 2 ಮಂದಿ ಸಾವನ್ನಪ್ಪುತ್ತಿದ್ದಾರೆ.

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

ಜನವರಿ-ಫೆಬ್ರವರಿಯಲ್ಲಿ 799 ರಸ್ತೆ ಅಪಘಾತಗಳು ಸಂಭವಿಸಿದ್ದು, 114 ಮಂದಿ ಮೃತಪಟ್ಟಿದ್ದಾರೆ. ಹಾಗೂ 734 ಮಂದಿಗೆ ಗಂಭೀರ ಗಾಯಗಳಾಗಿ ಬದುಕುಳಿದಿದ್ದಾರೆ.

City roads saw 2 deaths every day in Jan and Feb

2019ರಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿದ್ದು ಯಲಹಂಕ(40)ದಲ್ಲಿ, ಪೀಣ್ಯ(38) ಕೆಆರ್ ಪುರಂ(37) ವೈಟ್‌ಫೀಲ್ಡ್(36), ದೇವನಹಳ್ಳಿ(36), ಕಾಮಾಕ್ಷಿಪಾಳ್ಯ(32) ಹಾಗೂ ಎಲೆಕ್ಟ್ರಾನಿಕ್‌ಸಿಟಿಯಲ್ಲಿ (31) ಅಪಘಾತಗಳು ಸಂಭವಿಸಿದೆ. 17 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, 41 ಬೇರೆ ಬೇರೆ ಪ್ರದೇಶಗಳಲ್ಲಿ ಈ ಅಪಘಾತಗಳು ಸಂಭವಿಸಿದೆ.

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ಡೇಂಜರ್ ಝೋನ್‌ಗಳು: ವರ್ತೂರು ಕೆರೆ, ಸುವರ್ಣ ಲೇಔಟ್‌ ಜಂಕ್ಷನ್, ಮೈಸೂರು ರಿಂಗ್ ರೋಡ್ ಜಂಕ್ಷನ್, ಮೈಸೂರು ರಸ್ತೆ ಕೆಎಸ್‌ಆರ್‌ಟಿಸಿ ಜಂಕ್ಷನ್, ಬ್ಯಾಟರಾಯನಪುರ, ಯೋಗೇಶ್ವರನಗರ ಕ್ರಾಸ್, ಔಟರ್‌ ರಿಂಗ್ ರೋಡ್ ದೇವನಹಳ್ಳಿ, ಎಂವಿಐಟಿ ಜಂಕ್ಷನ್, ಬೆಟ್ಟ ಹಲಸೂರು ಜಂಕ್ಷನ್, ಮೀನಕುಂಟೆ ಜಂಕ್ಷನ್ ಚಿಕ್ಕಜಾಲ ಇವುಗಳನ್ನು ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಲಾಗಿದೆ.

English summary
City roads witnessed at least 13 accidents, claiming two lives every day on an average in the first two months of this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X